Friday, 7th May 2021

ಬಿಜೆಪಿ ಹಿಂದುಳಿದ ಮೋರ್ಚಾಕ್ಕೆ ಹೆಚ್ಚು ಯುವಕರನ್ನು ಕರೆ ತನ್ನಿ: ಪ್ರೇಮಾ ನಾಗಯ್ಯ

ತುಮಕೂರು: ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾಗೆ ಹೆಚ್ಚು ಯುವಜನರನ್ನು ಸೆಳೆಯುವ ನಿಟ್ಟಿನಲ್ಲಿ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಕೆಲಸ ಮಾಡಬೇಕಾಗಿದೆ ಎಂದು ಬಿಜೆಪಿ ಪಕ್ಷದ ರಾಜ್ಯ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಪ್ರೇಮಾ ನಾಗಯ್ಯ ತಿಳಿಸಿದ್ದಾರೆ.

ನಗರದ ವಿಘ್ನೇಶ್ವರ ಕಂರ್ಪಟ್‌ನಲ್ಲಿ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಹಿಂದುಳಿದ ವರ್ಗಕ್ಕೆ ಸೇರಿದ ನರೇಂದ್ರಮೋದಿ ಅವರು ದೇಶದ ಪ್ರಧಾನಿ ಯಾಗಿದ್ದಾರೆ. ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ,ಜಿಲ್ಲೆಯಲ್ಲಿ ಕನಿಷ್ಠ ಒಂದು ಬೂತ್‌ಗೆ 10ಜನರಂತೆ ಹಿಂದುಳಿದ ವರ್ಗದ ಯುವಜನರು ಬಿಜೆಪಿ ಪಕ್ಷಕ್ಕೆ ದುಡಿಯುವಂತೆ ಮಾಡಿ,ನಮ್ಮ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡ ಬೇಕಾಗಿದೆ ಎಂದರು.

ಬಿಜೆಪಿ ಶಿಸ್ತಿನ ಪಕ್ಷ, ಅದರಲ್ಲಿಯೂ ತುಮಕೂರು ಜಿಲ್ಲೆಯ ಒಬಿಸಿ ಮೋರ್ಚಾದ ಬಗ್ಗೆ ರಾಜ್ಯದಲ್ಲಿಯೇ ಒಳ್ಳೆಯ ಹೆಸರಿದೆ. ಆದ್ದರಿಂದ ಮೋರ್ಚಾದ ಅಧ್ಯಕ್ಷರಾದ ಶಂಕರಪ್ಪ ಅವರು,ತಮ್ಮ ಹಿರಿತನವನ್ನು ಉಪಯೋಗಿಸಿಕೊಂಡು ಜಿಲ್ಲೆಯಲ್ಲಿ ಹಿಂದುಳಿ ದವರನ್ನು ಸಂಘಟಿಸುವ ಮೂಲಕ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷ ಹೆಚ್ಚಿನ ಸದಸ್ಯರು ಗೆಲುವು ಪಡೆಯುವಂತೆ ಮಾಡಬೇಕೆಂದು ಪ್ರೇಮ ನಾಗಯ್ಯ ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಶಂಕರಪ್ಪ,ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಒಬಿಸಿ ಮೋರ್ಚಾ ವನ್ನು ಸದೃಢವಾಗಿ ಕಟ್ಟಿ, ಸಮಾಜದ ಮುಖ್ಯವಾಹಿನಿಗೆ ತಂದು, ರಾಜಕೀಯ ಅಧಿಕಾರವನ್ನು ಪಡೆಯುವ ನಿಟ್ಟಿನಲ್ಲಿ ಈ ಕಾರ್ಯಕಾರಿಣಿ ಸಭೆಯನ್ನು ಆಯೋಜಿಸಲಾಗಿದೆ.

ರಾಜ್ಯದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಸುಮಾರು 812 ಜಾತಿ, ಪಂಗಡ, ಉಪಪಂಗಡಗಳಿದ್ದು, ಇವುಗಳನ್ನು ಬಿಜೆಪಿ ಪಕ್ಷದ ಅಡಿಯಲ್ಲಿ ತಂದು ಪಕ್ಷಕ್ಕೆ ಬಲ ತುಂಬುವ ನಿಟ್ಟಿನಲ್ಲಿ ಪಕ್ಷದ ಹಿರಿಯ ಮುಖಂಡರ ಸಲಹೆಯಂತೆ ಕಾರ್ಯ ನಿರ್ವಹಿಸಲಾಗುತ್ತಿದೆ.

ಮುಂಬರುವ ಜಿ.ಪಂ., ತಾಪಂ. ಚುನಾವಣೆ ಗಳಲ್ಲಿಯೂ ಒಬಿಸಿ ಮೋರ್ಚಾದ ಸದಸ್ಯರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿ ನಲ್ಲಿಯೂ ಈ ಸಭೆ ಮಹತ್ವ ಪಡೆದು ಕೊಂಡಿದೆ ಎಂದರು.

ಸಭೆಯಲ್ಲಿ ಒಬಿಸಿ ಜಿಲ್ಲಾಧ್ಯಕ್ಷ ಶಂಕರಪ್ಪ,ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್, ರಾಜ್ಯ ಒಬಿಸಿ ಕಾರ್ಯಕಾರಿಣಿ ಸದಸ್ಯ ರುದ್ರೇಶ್, ದಾವಣಗೆರೆ ವಿಭಾಗದ ಲಕ್ಷ್ಮೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂಪಿಗೆ ಶ್ರೀಧರ್, ರವಿ ಹೆಬ್ಬಾಕ್, ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೇದಮೂರ್ತಿ, ಗೋಕಲ್ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *