Wednesday, 5th October 2022

ಬಿಜೆಪಿ ಬಂಡಾಯ ಅಭ್ಯರ್ಥಿ ಹಾಲನೂರು ಲೇಪಾಕ್ಷ ಮತಬೇಟೆ

ತುಮಕೂರು: ಪ್ರತಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ವಂಚಿತರಾಗುತ್ತಿರುವ ಹಾಲನೂರ್ ಲೇಪಾಕ್ಷ ಅವರು ಈ ಬಾರಿ ಆಗ್ನೇಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಮತ ಬೇಟೆ ಆರಂಭಿಸಿ ದ್ದಾರೆ.

ಟಿಕೆಟ್ ಸಿಗುವ ಭರವಸೆಯಲ್ಲಿ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಆದರೆ ಟಿಕೆಟ್ ಕೈ ತಪ್ಪಿದ್ದರಿಂದ ಸಿಎಂ ಯಡಿಯೂರಪ್ಪ ಅವರಿಗೂ ಸೆಡ್ಡು ಹೊಡೆದು ಬಂಡಾಯವಾಗಿ ಸ್ಪರ್ಧಿಸಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಸೇರಿರುವ ಲೇಪಾಕ್ಷ ಅವರು ಕ್ಷೇತ್ರ ದಲ್ಲಿ ಹಿಡಿತ ಹೊಂದಿದ್ದಾರೆ.

ಪಕ್ಷದಿಂದ ನನಗೆ ಮೋಸವಾಗಿದೆ. ಆದರೂ ಕ್ಷೇತ್ರದಿಂದ ಹಿಂದೆ ಸರಿದಿಲ್ಲ. ಈ ಬಾರಿ ಮತದಾರರು ಸಕಾರಾತ್ಮಕವಾಗಿ ಸ್ಪಂದಿಸು ತ್ತಿದ್ದು ಗೆಲ್ಲುವ ಭರವಸೆ ಇದೆ ಎಂದು ಹಾಲನೂರು ಲೇಪಾಕ್ಷ ತಿಳಿಸಿದರು.