Thursday, 2nd February 2023

ದಾವಣಗೆರೆ ಪಾಲಿಕೆಯ ಉಪಚುನಾವಣೆ: ಬಿಜೆಪಿ ಜಯಭೇರಿ

ದಾವಣಗೆರೆ: ಮಹಾನಗರ ಪಾಲಿಕೆಯ 28 ಹಾಗೂ 37ನೇ ವಾರ್ಡ್‌ನ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. 28ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿ ಜೆ‌. ಎನ್. ಶ್ರೀನಿವಾಸ್ ಹಾಗೂ 37ನೇ ವಾರ್ಡ್‌ನ ಶ್ವೇತಾ ಶ್ರೀನಿವಾಸ್ ಗೆಲುವಿನ ನಗೆ ಬೀರಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಹುಲ್ಲುಮನಿ ಗಣೇಶ್ ವಿರುದ್ಧ 681 ಮತಗಳ ಅಂತರದಿಂದ ಗೆದ್ದು ಶ್ರೀನಿವಾಸ್ ಕಮಲ ಅರಳುವಂತೆ ಮಾಡಿದ್ದಾರೆ. ವಾರ್ಡ್‌ನಲ್ಲಿ ಅಭಿವೃದ್ಧಿ ಕಾರ್ಯ, ಜನರಿಗೆ ಸ್ಪಂದಿಸಿದ ಬಗೆ, ಬಿಜೆಪಿ ನಾಯಕರ ಸತತ ಪರಿಶ್ರಮ ಶ್ರೀನಿವಾಸ್ ಗೆಲುವಿಗೆ ಶ್ರೀರಕ್ಷೆಯಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಹುಲ್ಲುಮನಿ ಗಣೇಶ್ ಪರ ಮಾಜಿ ಸಚಿವ ಎಸ್‌. ಎಸ್. ಮಲ್ಲಿಕಾರ್ಜುನ್ ಭರ್ಜರಿ ಪ್ರಚಾರ ನಡೆಸಿದರೂ ಪ್ರಯೋಜನವಾಗಿಲ್ಲ.

ಶ್ವೇತಾ ಶ್ರೀನಿವಾಸ್ ಕಾಂಗ್ರೆಸ್ ಅಭ್ಯರ್ಥಿ ರೇಖಾರಾಣಿ ವಿರುದ್ಧ ಭಾರೀ ಮುನ್ನಡೆಯೊಂದಿಗೆ ಜಯ ಗಳಿಸಿದ್ದು, ಕಮಲ ಪಡೆಯಲ್ಲಿ ಸಂಭ್ರಮ ಮನೆ ಮಾಡಿದ್ದರೆ ಕಾಂಗ್ರೆಸ್ ನಿರಾಸೆ ಅನುಭವಿಸಿದೆ.

ಕಾಂಗ್ರೆಸ್‌ನ ಹುಲ್ಲುಮನಿ ಗಣೇಶ್ 1884 ಮತಗಳನ್ನು ಪಡೆದರೆ, ಬಿಜೆಪಿಯ ಶ್ರೀನಿವಾಸ್ 2565 ಮತ ಪಡೆದು 681 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಬಿಜೆಪಿಯ ಶ್ವೇತಾ ಶ್ರೀನಿವಾಸ್ 2096 ಮತ ಪಡೆದರೆ, ಕಾಂಗ್ರೆಸ್‌ನ ರೇಖಾರಾಣಿ 1303 ಮತ ಪಡೆದರು. ಈ ಉಪ ಚುನಾವಣೆ ಗೆಲ್ಲುವ ಮೂಲಕ ಪಾಲಿಕೆಯಲ್ಲಿ ಬಿಜೆಪಿಯ ಸಂಖ್ಯಾಬಲವೂ ಹೆಚ್ಚಿದೆ.

error: Content is protected !!