Monday, 26th October 2020

ಅಭ್ಯರ್ಥಿ ಮರೆತು ಕೆಲಸ ಮಾಡಿ ಎಂದದ್ದಕ್ಕೆ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಗದ್ದಲ

ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆ ಕುರಿತಂತೆ, ಅಭ್ಯರ್ಥಿ ಮರೆತು ಕೆಲಸ ಮಾಡಿ ಎಂದ ಜಿಲ್ಲಾಧ್ಯಕ್ಷ ಮಂಜು ನಾಥ್ ಅವರ ಹೇಳಿಕೆಗೆ ಪಕ್ಷದ ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ವಲಸೆ ಬಂದವರಿಗೆ ಮಣೆ ಹಾಕಲಾಗುತ್ತಿದೆ. ನಿಷ್ಠಾವಂತರಿಗೆ ಆದ ಅನ್ಯಾಯ ಎಂದು ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತು ಗದ್ದಲ ನಡೆಸಿದರು.

ಅಭ್ಯರ್ಥಿ ಮರೆತು ಕೆಲಸ ಮಾಡಿ ಎಂದ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತಿಗೆ, ಸಿಟ್ಟಾದ ಕಾರ್ಯಕರ್ತರು,  ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ದ 5 ಕ್ರಿಮಿ ನಲ್‍ ಪ್ರಕರಣಗಳಿವೆ, ಕ್ರಿಮಿನಲ್‌ ಹಿನ್ನೆಲೆಯುಳ್ಳವರಿಗೆ ಮಣೆ ಯಾಕೆ ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *