Tuesday, 9th August 2022

ವೈದ್ಯರಲ್ಲಿ ಬ್ಲ್ಯಾಕ್, ಗ್ರೀನ್ ಫಂಗಸ್ ಸೋಂಕು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ ವ್ಯಕ್ತಿಯೊಬ್ಬರಲ್ಲಿ ಬ್ಲ್ಯಾಕ್ ಮತ್ತು ಗ್ರೀನ್ ಫಂಗಸ್ ಸೋಂಕು ಪತ್ತೆಯಾಗಿದೆ.

ಪೀಡಿಯಾಟ್ರಿಕ್ ಫಿಸಿಯೋಥೆರಪಿಸ್ಟ್ ಡಾ.ಕಾರ್ತಿಕೇಯನ್ ಆರ್ ಎಂಬ ವೈದ್ಯರಲ್ಲಿ ಈ ಸೋಂಕು ಪತ್ತೆಯಾಗಿದೆ ಎನ್ನಲಾಗಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ವೈದ್ಯ ರಿಗೆ ಕರೋನಾ ಸೋಂಕು ತಗುಲಿದ್ದು. ಬಳಿಕ ಮುಖ ಹಾಗೂ ತಲೆಯಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ. ಮೂಗು ಸೋರುವ ಸಮಸ್ಯೆ ಕಾಣಿಸಿಕೊಂಡಿದೆ. ಸಮಸ್ಯೆ ಆರಂಭವಾಗುತ್ತಿದ್ದಂತೆಯೇ ವೈದ್ಯ ಮೈಸೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೂಗಿನಲ್ಲಿ ಹಸಿರು ಹಾಗೂ ಕಂದು ಬಣ್ಣದ ದ್ರವ ಕಂಡು ಬಂದಿತ್ತು. ಫಂಗಲ್ ಕಲ್ಚರ್ ನಲ್ಲಿ ಗ್ರೀನ್ ಫಂಗಸ್ ಇರುವುದು ದೃಢಪಟ್ಟಿತ್ತು. ಸಿಟಿ ಹಾಗೂ ಎಂಆರ್’ಐ ಸ್ಕ್ಯಾನ್ ನಲ್ಲಿ ಶಿಲೀಂಧ್ರ ಸೋಂಕು ಇರುವುದು ದೃಢಪಟ್ಟಿತ್ತು.