ಮರಿ ಹುಡುಕಾಡಿದ ವಿಡಿಯೋ ಸೆರೆ
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಅರಣ್ಯದಲ್ಲಿ ಅಪರೂಪದ ಕರಿ ಚಿರತೆ ಮರಿ ಪತ್ತೆಯಾಗಿದ್ದು ಅರಣ್ಯಾಧಿಕಾರಿಗಳ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಪ್ಪು ಚಿರತೆ ಯು ಯಲ್ಲಾಪುರ ಅರಣ್ಯದಲ್ಲಿ ಮೂರು ಮರಿಗಳನ್ನು ಹಾಕಿದ್ದು ಒಂದು ಮರಿ ತಪ್ಪಿಸಿಕೊಂಡಿತ್ತು. ಹೀಗಾಗಿ ಈ ಮರಿಗಾಗಿ ತಾಯಿ ಚಿರತೆ ಹುಡುಕಾಡುತಿದ್ದು ಈವೇಳೆ ಮುದ್ದು ಮುದ್ದಾದ ಕಪ್ಪು ಚಿರತೆ ಮರಿಯು ಗಸ್ತು ತಿರುಗುತಿದ್ದ ಅರಣ್ಯಾಧಿಕಾರಿಗಳಿಗೆ ಕಂಡಿದ್ದು ಕ್ಯಾಮರಾದಲ್ಲಿ ತಾಯಿ ಚಿರತೆ ಮತ್ತು ಮರಿ ಚಿರತೆಯನ್ನು ಸರೆಹಿಡಿದಿದ್ದಾರೆ.
ದೇಶದಲ್ಲೇ ಕಪ್ಪು ಚಿರತೆ ಅಪರೂಪವಾಗಿದ್ದು ಅವನತಿಯ ಅಂಚಿನಲ್ಲಿದೆ. ರಾಜ್ಯದಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಕಪ್ಪು ಚಿರತೆಗಳಿದ್ದು ಇದೀಗ ಅದರ ಸಂತತಿ ಈ ಭಾಗದಲ್ಲಿ ಹೆಚ್ಚಳವಾಗಿದೆ.