Friday, 3rd February 2023

ಮೇಲ್ಮನೆಯಲ್ಲಿ ನೀಲಿ ಪ್ರಕಾಶ

ನೀಲಿಚಿತ್ರ ವೀಕ್ಷಿಸಿದ ಕಾಂಗ್ರೆಸ್ ಸದಸ್ಯ

ಉದ್ದೇಶಪೂರ್ವಕವಲ್ಲ: ಸಮರ್ಥನೆ

ಬೆಂಗಳೂರು: ಕೆಲವು ವರ್ಷಗಳ ಹಿಂದೆ ಸದನದಲ್ಲಿ ಕೆಲವರು ನೀಲಿಚಿತ್ರ ವೀಕ್ಷಿಸಿದ್ದ ಪ್ರಸಂಗ ನಡೆದಿತ್ತು. ಇದೀಗ ಸದನದಲ್ಲಿ ಅಂಥಹದ್ದೇ ಮತ್ತೊಂದು ಪ್ರಸಂಗ ನಡೆದಿದ್ದು, ಪ್ರತಿಪಕ್ಷದ ಸದಸ್ಯರೊಬ್ಬರು ಅಶ್ಲೀಲ ಚಿತ್ರ ನೋಡಿರುವುದು ಬೆಳಕಿಗೆ ಬಂದಿದೆ.

ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ವಿಧಾನಪರಿಷತ್ ಕಲಾಪದ ವೇಳೆ ತಮ್ಮ ಮೊಬೈಲ್ ನಲ್ಲಿ ಇದ್ದ ಅಶ್ಲೀಲ ವಿಡಿಯೊ ನೋಡಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶುಕ್ರವಾರ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪ ನಡೆಯುತ್ತಿದ್ದ ವೇಳೆ,
ಪ್ರಕಾಶ್ ರಾಥೋಡ್ ತಮ್ಮ ಮೊಬೈಲ್‌ನ ಗ್ಯಾಲರಿಯಲ್ಲಿದ್ದ ನೀಲಿಚಿತ್ರ ವೀಕ್ಷಣೆ ಮಾಡುತ್ತಿದ್ದ ದೃಶ್ಯ ಖಾಸಗಿ ಸುದ್ದಿವಾಹಿನಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪರಿಷತ್‌ನಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಆದರೂ, ರಾಥೋಡ್ ಮೊಬೈಲ್ ಬಳಸಿರು ವುದು ಟೀಕೆಗೆ ಗುರಿಯಾಗಿದೆ.

ಆಕ್ರೋಶಕ್ಕೆ ಕಾರಣ: ಸಾರ್ವಜನಿಕ ಜೀವನದಲ್ಲಿ ಇರುವವರು ತಮ್ಮ ವೈಯಕ್ತಿಕ ಜೀವನವನ್ನು ಶುದ್ಧವಾಗಿಟ್ಟುಕೊಳ್ಳಬೇಕು ಎಂಬುದು ಸಾಮಾನ್ಯ ಸಂಗತಿ. ಇವರು ಸದನದಂತಹ ಪವಿತ್ರವಾದ ಸ್ಥಳದಲ್ಲಿ ಖಾಸಗಿ ವಿಡಿಯೊ, ಫೋಟೊಗಳನ್ನು ವೀಕ್ಷಣೆ
ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಅಶ್ಲೀಲ ಚಿತ್ರಗಳ ವೀಕ್ಷಣೆಯ ಮೂಲಕ ಸದನಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡಿದ್ದಾರೆ ಎಂಬ ಟೀಕೆ ಕೇಳಿಬಂದಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದಂತೆ ಎಚ್ಚೆತ್ತುಕೊಂಡ ಪ್ರಕಾಶ್ ರಾಥೋಡ್, ನಾನು ಯಾವುದೇ ವಿಡಿಯೊ ಅಥವಾ ಚಿತ್ರ ನೋಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಉದ್ದೇಶ ಪೂರ್ವಕವಲ್ಲ: ಈ ಕುರಿತು ಸ್ಪಷ್ಟೀಕರಣ ನೀಡಿರುವ ಪ್ರಕಾಶ್ ರಾಥೋಡ್ ಅವರು, ನಾನು ಉದ್ದೇಶ ಪೂರ್ವಕವಾಗಿ
ಏನನ್ನು ನೋಡಿಲ್ಲ. ನನ್ನ ಮೊಬೈಲ್‌ನಲ್ಲಿ ಅಂತಹ ಯಾವುದೇ ವಿಡಿಯೊ ಮತ್ತು ಫೋಟೊ ಇರಲಿಲ್ಲ. ಗ್ರೂಪ್‌ನಲ್ಲಿ  ಯಾರಾ ದರೂ ಏನಾದರೂ ಕಳುಹಿಸಿರಬಹುದು. ನಾನು ಡೌನ್‌ಲೋಡ್ ಮಾಡಿಲ್ಲ.

ಮೆಮೊರಿ ಫುಲ್ ಆಗಿದ್ದನ್ನು ಡಿಲೀಟ್ ಮಾಡುತ್ತಿದ್ದೆ. ಸಾಮಾನ್ಯವಾಗಿ ನಾನು ಸದನದಲ್ಲಿ ಮೊಬೈಲ್ ನೋಡುವುದೇ ಇಲ್ಲ. ಸದನದಲ್ಲಿ ನನ್ನ ಪ್ರಶ್ನೆ ಇತ್ತು. ಅದರ ಬಗ್ಗೆ ಮಾಹಿತಿ ಹುಡುಕುತ್ತಿದ್ದೆ. ಅದನ್ನು ಬಿಟ್ಟು, ನಾನು ಬೇರೆ ಯಾವುದೇ ಚಿತ್ರ ಅಥವಾ ವಿಡಿಯೊ ವೀಕ್ಷಿಸಿಲ್ಲ. ನನಗೆ ಗೊತ್ತಿಲ್ಲದೆ ಅಂತಹದ್ದು ಏನಾದರೂ ಕಂಡಿದ್ದರೆ ಅದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ರಾಥೋಡ್ ಹೇಳಿದ್ದಾರೆ.

ಹಿಂದೆಯೂ ನಡೆದಿತ್ತು ಘಟನೆ: 2012ರಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದ ಲಕ್ಷ್ಮಣ್ ಸವದಿ, ಸಿ.ಸಿ.ಪಾಟೀಲ್,
ಕೃಷ್ಣ ಪಾಲೇಮರ್ ಸದನದಲ್ಲಿ ನೀಲಿಚಿತ್ರ ವೀಕ್ಷಿಸಿದ ಕುಖ್ಯಾತಿಗೆ ಪಾತ್ರರಾಗಿದ್ದರು. ಬಳಿಕ ಈ ಮೂವರನ್ನು ಸದನದಿಂದ ಅಮಾ ನತು ಮಾಡಲಾಗಿತ್ತು. ಇದೀಗ ಲಕ್ಷ್ಮಣ್ ಸವದಿ ಉಪ ಮುಖ್ಯಮಂತ್ರಿಯಾಗಿದ್ದರೆ, ಸಿಸಿ ಪಾಟೀಲ್ ಸಚಿವರಾಗಿದ್ದಾರೆ. ಕೃಷ್ಣ ಪಾಲೇಮರ್ ಮಾಜಿ ಶಾಸಕರಾಗಿದ್ದಾರೆ. ಆಗಲೂ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದು, ಆಡಳಿತ ಪಕ್ಷದ ಸದಸ್ಯರೇ ನೀಲಿಚಿತ್ರ ವೀಕ್ಷಣೆ ಮಾಡಿ ಸಿಕ್ಕಿ ಬಿದ್ದಿದ್ದರು. ಇದೀಗ ಪ್ರತಿಪಕ್ಷದ ಸದಸ್ಯ ನೀಲಿಚಿತ್ರ ವೀಕ್ಷಣೆ ಮಾಡಿ ಸಿಕ್ಕಿ ಬಿದ್ದಿದ್ದು, ಬಿಜೆಪಿಯನ್ನು ನೈತಿಕ ವಾಗಿ ಪ್ರಶ್ನಿಸುವ ಹಕ್ಕನ್ನು ಕಾಂಗ್ರೆಸ್ ಕಳೆದುಕೊಂಡಿದೆ.

*ಅಶ್ಲೀಲ ವಿಡಿಯೊ ನೋಡಿರುವುದು ಖಾಸಗಿ ವಾಹಿನಿ ಕ್ಯಾಮೆರಾದಲ್ಲಿ ಸೆರೆ
*ಪರಿಷತ್‌ನಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ, ರಾಥೋಡ್ ಮೊಬೈಲ್ ಬಳಸಿರುವುದಕ್ಕೆ ಆಕ್ರೋಶ
*ಅಶ್ಲೀಲ ಚಿತ್ರಗಳ ವೀಕ್ಷಣೆಯ ಮೂಲಕ ಸದನಕ್ಕೆ ಕೆಟ್ಟ ಹೆಸರು; ಟೀಕೆ
*ನನಗೆ ಗೊತ್ತಿಲ್ಲದೆ ಅಂತಹದ್ದು ಏನಾದರೂ ಕಂಡಿದ್ದರೆ ಅದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ; ರಾಥೋಡ್

ಕೋಟ್‌

ನಾನು ಉದ್ದೇಶ ಪೂರ್ವಕವಾಗಿ ಏನನ್ನು ನೋಡಿಲ್ಲ. ನನ್ನ ಮೊಬೈಲ್‌ನಲ್ಲಿ ಅಂತಹ ಯಾವುದೇ ವಿಡಿಯೊ ಮತ್ತು ಫೋಟೊಗಳು ಇರಲಿಲ್ಲ. ಗ್ರೂಪ್‌ನಲ್ಲಿ ಯಾರಾದರೂ ಏನಾದರೂ ಕಳುಹಿಸಿರಬಹುದು ಅಷ್ಟೇ.

– ಪ್ರಕಾಶ್ ರಾಥೋಡ್, ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ

error: Content is protected !!