Friday, 19th August 2022

ಬಾಯ್ಲರ್ ಸ್ಫೋಟ: ಮೃತರ ಸಂಖ್ಯೆ 13ಕ್ಕೆ ಏರಿಕೆ

ಹಾಪೂರ್: ಉತ್ತರ ಪ್ರದೇಶದ ಹಾಪೂರ್ ನಲ್ಲಿ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಬಾಯ್ಲರ್ ಸ್ಫೋಟದಿಂದ ಮೃತಪಟ್ಟ ವರ ಸಂಖ್ಯೆ ಭಾನುವಾರ 13ಕ್ಕೆ ಏರಿಕೆಯಾಗಿದೆ. ಇಬ್ಬರು ವ್ಯಕ್ತಿಗಳ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.

ಕಾರ್ಖಾನೆ ಮಾಲೀಕರಾದ ದಿಲ್ಶಾದ್ ಮತ್ತು ನಿರ್ದೇಶಕ ವಾಸಿಂ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್ ಐಆರ್ ದಾಖಲಿಸಿ ದ್ದಾರೆ.

ಘಟನೆ ವಿರುದ್ಧ ಕಿಸಾನ್ ಮಜ್ದೂರ್ ಸಂಘ ಪ್ರತಿಭಟನೆ ನಡೆಸಿದೆ. ಮೃತರ ಕುಟುಂಬ ಸದಸ್ಯರಿಗೆ ರೂ.1 ಕೋಟಿ ರೂಪಾಯಿ ಪರಿಹಾರ ನೀಡಬೇಕು. ಅಕ್ರಮವಾಗಿ ನಡೆಯು ತ್ತಿರುವ ಎಲ್ಲಾ ಕಾರ್ಖಾನೆಗಳನ್ನು ಬಂದ್ ಮಾಡಬೇಕು ಎಂದು ಕಿಸಾನ್ ಮಜ್ದೂರ್ ಸಂಘದ ರಾಜ್ಯಾಧ್ಯಕ್ಷ ಬ್ರಹ್ಮ ಸಿಂಗ್ ರಾಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.