Friday, 24th September 2021

ಬಾಲಿವುಡ್ ನಟ ಅಕ್ಷಯ್‌ ಕುಮಾರ‍್ ತಾಯಿ ಇನ್ನಿಲ್ಲ

ಮುಂಬೈ: ಬಾಲಿವುಡ್​ನ ನಟ ಅಕ್ಷಯ್ ಕುಮಾರ್ ಅವರ ತಾಯಿ ಅರುಣಾ ಭಾಟಿಯಾ ಬುಧವಾರ ಬೆಳಗ್ಗೆ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅರುಣಾ ಭಾಟಿಯಾರನ್ನು ಎರಡು ದಿನದ ಹಿಂದೆ ಮುಂಬೈನ ಹಿರಾನಂದನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಈ ವೇಳೆ, ಸಿಂಡ್ರೆಲಾ ಸಿನಿಮಾ ಶೂಟಿಂಗ್​ಗಾಗಿ ಅಕ್ಷಯ್​ ಕುಮಾರ್​ ಇಂಗ್ಲೆಂಡ್ ಪ್ರವಾಸದಲ್ಲಿದ್ದರು. ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಶೂಟಿಂಗ್​ ಅನ್ನು ಅರ್ಧಕ್ಕೆ ಬಿಟ್ಟು ಭಾರತಕ್ಕೆ ಮರಳಿದ್ದರು.

ಚಿಕಿತ್ಸೆ ಫಲಿಸದೆ ಬುಧವಾರ ಬೆಳಗ್ಗೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ‘ಅವಳು ನನ್ನ ಮೂಲ. ಅಮ್ಮ ಬದುಕಿಲ್ಲ ಎಂಬ ಕಹಿ ಸತ್ಯ ನನಗೆ ಸಹಿಸಲಾಗದ ನೋವನ್ನು ಕೊಟ್ಟಿದೆ. ನನ್ನ ಅಮ್ಮ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ ಎಂದು ಅಕ್ಷಯ್ ಕುಮಾರ್ ಟ್ವಿಟರ್​ನಲ್ಲಿ ಮನದ ನೋವನ್ನು ಅಕ್ಷರಕ್ಕಿಳಿಸಿದ್ದಾರೆ.

Leave a Reply

Your email address will not be published. Required fields are marked *