Thursday, 19th May 2022

ಇಂಗ್ಲೆಂಡ್‌ನ ಬಾಕ್ಸಿಂಗ್ ಪಟು ಅಮೀರ್ ಖಾನ್‌ ವಿದಾಯ

ಲಂಡನ್‌: ಇಂಗ್ಲೆಂಡ್‌ನ ಲೆಜೆಂಡರಿ ಬಾಕ್ಸಿಂಗ್ ಪಟು ಮತ್ತು ವಿಶ್ವ ಬಾಕ್ಸಿಂಗ್‌ ಚಾಂಪಿಯನ್ ಅಮೀರ್ ಖಾನ್‌ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.

ಇದುವರೆಗೂ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ಖಾನ್‌ ತಮಗೆ ಸರಿಸಮನಾದ ತಾರೆಗಳಾದ ಕನೆಲೋ’ ಅಲ್ವಾರೆಜ್ ಮತ್ತು ಟೆರೆನ್ಸ್ ಕ್ರಾಫೋರ್ಡ್ ಅವರನ್ನು ಎದುರಿಸಿದ್ದರು. ಇದುವರೆಗೂ 40 ಪಂದ್ಯಗಳನ್ನಾಡಿರುವ ಖಾನ್‌ ಒಟ್ಟೂ 6 ಪಂದ್ಯಗಳಲ್ಲಿ ಸೋತಿದ್ದು ಉಳಿದ 34 ಪಂದ್ಯಗಳಲ್ಲಿ ವಿಜಯ ಸಾಧಿಸಿದ್ದಾರೆ.

2005ರಲ್ಲಿ ಪ್ರೊ ಬಾಕ್ಸಿಂಗ್‌ ಗೆ ಹೋಗುವ ಮೊದಲು 2004ರ ಒಲಂಪಿಕ್ಸ್‌ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಜುಲೈ 2009 ರಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದರು.

ಖಾನ್‌ “ಇದು ನನ್ನ ಕೈಗವಸುಗಳನ್ನು ಸ್ಥಗಿತಗೊಳಿಸುವ ಸಮಯ. 27 ವರ್ಷಗಳಿಂದಲೂ ಇಂತಹ ಅದ್ಭುತ ವೃತ್ತಿಜೀವನವನ್ನು ಹೊಂದಲು ಭಗವಂತನ ಆಶೀರ್ವಾದವೇ ಕಾರಣ. ತಂಡಗಳಿಗೆ ಮತ್ತು ನನ್ನ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಅವರು ನನಗೆ ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕಾಗಿ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ ಎಂದು ಬರೆದು ಕೊಂಡಿದ್ದಾರೆ.