Friday, 30th September 2022

ಚಾರ್ಜಿಂಗ್ ವೇಳೆ ಮೊಬೈಲ್‌ ಸ್ಫೋಟ: ಬಾಲಕನ ಸಾವು

ಲಖನೌ: ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯ ಹಾಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಮಾಟ್ವಾರಾ ಗ್ರಾಮದಲ್ಲಿ ಮೊಬೈಲ್ ಸ್ಪೋಟಗೊಂಡು ಬಾಲಕನೊಬ್ಬ ಮೃತಪಟ್ಟಿದ್ದಾನೆ.

ಮೊಬೈಲ್ ಚಾರ್ಜ್ ಆಗುತ್ತಿದ್ದ ವೇಳೆಯಲ್ಲಿ 12 ವರ್ಷದ ಬಾಲಕ ಮೋನು ಕುತೂಹಲದಿಂದ ಚಾರ್ಜ್ ಆಗಿದೆಯೇ ಇಲ್ಲವೇ ಎಂಬು ದನ್ನು ಗಮನಿಸಲು ಹೋಗಿದ್ದಾನೆ. ಈ ವೇಳೆ ಏಕಾಏಕಿ ಮೊಬೈಲ್ ಬ್ಯಾಟರಿ ಸ್ಫೋಟಗೊಂಡು ಆತನ ಮುಖ ಛಿದ್ರವಾಗಿ ದೇಹದ ಭಾಗಗಳಿಗೆ ಹಾನಿಯಾಗಿದೆ. ಕೂಡಲೇ ಬಾಲಕನನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿದ್ದು, ಈ ವೇಳೆಗಾಗಲೇ ಬಾಲಕ ಮೃತಪಟ್ಟಿದ್ದಾನೆನ್ನಲಾಗಿದೆ.

ಪೊಲೀಸರಿಗೆ ಮಾಹಿತಿ ನೀಡದೇ ಕುಟುಂಬದವರು ಬಾಲಕನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.