Monday, 3rd October 2022

ಲಾಲ್ ಸಿಂಗ್ ಚಡ್ಡಾ ಚಿತ್ರ ನಿಷೇಧಿಸಿ: ಹಿಂದೂ ಸಂಘಟನೆಯ ಪ್ರತಿಭಟನೆ

ಲಖನೌ: ನಟ ಆಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ ಚಲನ ಚಿತ್ರದ ವಿರುದ್ಧ ಹಿಂದೂ ಸಂಘಟನೆಯ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.

ಹಿಂದೂ ದೇವತೆಗಳನ್ನು ಆಮೀರ್‌ ಖಾನ್‌ ಚಿತ್ರದಲ್ಲಿ ಗೇಲಿ ಮಾಡಿದ್ದಾರೆ ಎಂದು ಆರೋ ಪಿಸಿದ ಪ್ರತಿಭಟನಾಕಾರರು, ಉತ್ತರ ಪ್ರದೇಶದಲ್ಲಿ ಅದನ್ನು ನಿಷೇಧಿಸಬೇಕೆಂದು ಒತ್ತಾ ಯಿಸಿದರು. ‘ಸನಾತನ ರಕ್ಷಕ ಸೇನೆ’ಯ ಸದಸ್ಯರು ಸಿನಿಮಾದ ವಿರುದ್ಧ ಘೋಷಣೆಗಳನ್ನು ಕೂಗಿದರು. ಭೇಲುಪುರದ ಐಪಿ ವಿಜಯ ಮಾಲ್ ಎದುರು ಪ್ರತಿಭಟನೆ ನಡೆಸಿದರು.

‘ತಮ್ಮ ಚಿತ್ರಗಳಲ್ಲಿ ಆಮೀರ್ ಖಾನ್ ಹಿಂದೂ ದೇವತೆಗಳನ್ನು ಗೇಲಿ ಮಾಡುತ್ತಾರೆ ಮತ್ತು ಅವರು ಸನಾತನ ಧರ್ಮಕ್ಕೆ ವಿರುದ್ಧ ವಾಗಿದ್ದಾರೆ’ ಎಂದು ಸಂಘಟನೆಯ ಯುವ ಘಟಕದ ರಾಜ್ಯಾಧ್ಯಕ್ಷ ಚಂದ್ರಪ್ರಕಾಶ್ ಸಿಂಗ್ ಮತ್ತು ಅದರ ಉಪಾಧ್ಯಕ್ಷ ಅರುಣ್ ಪಾಂಡೆ ಆರೋಪಿ ಸಿದ್ದಾರೆ.

ನಮ್ಮ ದೇಶದಲ್ಲಿ ಆಮೀರ್‌ ಚಲನಚಿತ್ರಗಳು ಪ್ರದರ್ಶನವಾಗಲು ಬಿಡುವುದಿಲ್ಲ ಎಂದು ಹೇಳಿದರು.

‘ಆಮೀರ್ ಚಿತ್ರಗಳನ್ನು ಬಹಿಷ್ಕರಿಸುವಂತೆ ನಾವು ಮನೆ ಮನೆಗೆ ತೆರಳಿ ಜನರನ್ನು ವಿನಂತಿ ಸುತ್ತೇವೆ. ಚಲನಚಿತ್ರ ನಿಷೇಧಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಲ್ಲಿಯೂ ವಿನಂತಿಸುತ್ತೇವೆ’ ಎಂದು ಹೇಳಿದರು.

ಆಮೀರ್ ಖಾನ್ ಮತ್ತು ಕರೀನಾ ಕಪೂರ್ ಖಾನ್ ಪ್ರಮುಖ ಭೂಮಿಕೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾವು, ಹಾಲಿವುಡ್‌ ನಟ ಟಾಮ್ ಹಂಕ್ಸ್‌ ಅವರ 1994ರ ಚಿತ್ರ ‘ಫಾರೆಸ್ಟ್ ಗಂಪ್’ನಿಂದ ಪ್ರೇರಣೆ ಪಡೆದಿದೆ.