Wednesday, 28th July 2021

ನಾಯಕತ್ವ ಬದಲಾವಣೆ ಪ್ರಶ್ನೆಗೆ ಗರಂ ಆದ ಯಡಿಯೂರಪ್ಪ

ಬೆಂಗಳೂರು: ‘ನನ್ನ ಮುಂದೆ ಇರುವುದು ಕೋವಿಡ್ ನಿರ್ವಹಣೆ ಮಾತ್ರ. ಅದರ ನಿಯಂತ್ರಣ ಹಾಗೂ ನಿರ್ವಹಣೆ ಕೆಲಸಕ್ಕೆ ಮಾತ್ರ ಆದ್ಯತೆ’ ಎಂದು ಯಡಿಯೂರಪ್ಪ ಗುರುವಾರ ಗರಂ ಆಗಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ  ಪ್ರತಿಕ್ರಿಯೆ ನೀಡಿದ್ದು ಹೀಗೆ.

ವಿಧಾನಸೌಧದಲ್ಲಿ ಮಾತನಾಡಿ, ಕರೋನಾ ನಿಯಂತ್ರಿಸುವುದು, ಜನಹಿತ ಕಾಪಾಡುವುದು ಆದ್ಯತೆ ಎಂದರು.‌ ಯಾರೋ ಒಬ್ಬರು ಎಲ್ಲಿಗೋ ಹೋಗಿ ಬಂದರು ಅಂದರೆ, ಅವರಿಗೆ ಉತ್ತರ ಕೊಟ್ಟು ಕಳಿಸಿದಾರಲ್ಲ ಎಂದು ಪರೋಕ್ಷವಾಗಿ ಸಚಿವ ಸಿ.ಪಿ ಯೋಗೀಶ್ವರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷದ ಶಾಸಕಾಂಗ ಸಭೆ ಕರೆಯುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅದನ್ನು ಚರ್ಚೆ ಮಾಡುವ ಅವಶ್ಯಕತೆ ಇಲ್ಲ’ ಎಂದರು. ಮೇಕೆ ದಾಟು ವಿಚಾರಕ್ಕೆ ಸಂಬಂಧಿಸಿದಂತೆ ಚೆನ್ನೈ ಹಸಿರು ಪೀಠ ಸಮಿತಿ ರಚನೆ ಮಾಡಿರುವ ವಿಚಾರದಲ್ಲಿ ಮಾತನಾಡಿ, ಈ ಕುರಿತಾಗಿ ಚರ್ಚೆ ಮಾಡುತ್ತೇವೆ. ಅದನ್ನು ತಡೆಯೋಕೆ ಏನು ಮಾಡಬೇಕೋ ಮಾಡುತ್ತೇವೆ. ಸುಪ್ರೀಂ ಕೋರ್ಟ್‌ಗೆ ಕೂಡ ಹೋಗುತ್ತೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *