Saturday, 10th April 2021

ಸಭಾತ್ಯಾಗಕ್ಕೆ ಕಿಡಿ: ಸಿದ್ದುಗೆ ವಿಪಕ್ಷ ಸ್ಥಾನ ಕಾಯಂ ಮಾಡುವೆ ಎಂದು ಬಿಎಸ್’ವೈ ಶಪಥ

ಬೆಂಗಳೂರು: ಬಜೆಟ್ ಮಂಡನೆ ವೇಳೆ ಸಭಾತ್ಯಾಗ ಮಾಡಿದ ಕಾಂಗ್ರೆಸ್ ನಡೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಕಿಡಿ ಕಾರಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 135 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ಸಿದ್ದರಾಮಯ್ಯರನ್ನ ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಕೂರಿಸುವುದು ಶತಸಿದ್ಧ ಎಂದು ಸೋಮವಾರ ಶಪಥ ಮಾಡಿದ್ದಾರೆ. ದೇಶದ ಸಂಸದೀಯ ಇತಿಹಾಸದಲ್ಲಿ ಬಜೆಟ್ ಮಂಡನೆ ವೇಳೆ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದ ಉದಾಹರಣೆ ಎಲ್ಲಿಯೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಜೆಟ್ ಮಂಡನೆ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಸಿಎಂ,’ ಸರ್ಕಾರ ಹಾಗೂ ಬಿಜೆಪಿಯನ್ನ ನೇರವಾಗಿ ಎದುರಿಸುವ ಧೈರ್ಯ ವಿರದ ಸಿದ್ದರಾಮಯ್ಯ ಹಾಗೂ ಟೀಂ, ಬಜೆಟ್ ಅಧಿವೇಶನದ ವೇಳೆ ಸಭಾತ್ಯಾಗ ಮಾಡಿ ಪಲಾಯಾನ ಮಾಡಿದೆ. ಇನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 135 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದ್ದು, ಸಿದ್ದರಾಮಯ್ಯ ಅವರನ್ನು ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಕೂರಿಸುವುದು ಶತಸಿದ್ಧ. ಹಾಗಾಗದಿದ್ದರೆ ನನ್ನನ್ನ ಯಡಿಯೂರಪ್ಪ ಎಂದು ಕರೆಯಬೇಡಿ’ ಎಂದರು.

Leave a Reply

Your email address will not be published. Required fields are marked *