Thursday, 23rd March 2023

ವಿಕಲಚೇತನರಿಗೆ ಬಸ್ ಪಾಸ್‍ ನವೀಕರಣ: ಫೆ. 28 ರವರೆಗೆ ಅವಕಾಶ

ದಾವಣಗೆರೆ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಪ್ರಸಕ್ತ ಸಾಲಿನ ವಿಕಲಚೇತನರ ರಿಯಾ ಯಿತಿ ದರದ ಬಸ್ ಪಾಸ್‍ಗಳನ್ನು ನವೀ ಕರಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನವೀಕರಣಕ್ಕೆ ಅರ್ಜಿ ಸಲ್ಲಿ ಸಲು ಫೆ. 28 ಕೊನೆಯ ದಿನವಾಗಿರುತ್ತದೆ.

ವಿಕಲಚೇತನರ ಬಸ್‍ಪಾಸ್ ನವೀಕರಿಸಿಕೊಳ್ಳಲು ಘಟಕ ವ್ಯವಸ್ಥಾಪಕರ ಕೌಂಟರ್ (ಐಡಿ) ಗೆ ಅರ್ಜಿ ಸಲ್ಲಿಸಬೇಕು ಮತ್ತು ಪಾಸ್‍ಗಳನ್ನು ಪಡೆದುಕೊಳ್ಳಲು ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕೌಂಟರ್ (ಐಡಿ) ಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಫಲಾನುಭವಿಗಳು ಅರ್ಜಿ ಸಲ್ಲಿಸಲು ಫೆ.28 ಕೊನೆಯ ದಿನವಾಗಿದ್ದು ನಂತರ ಬಂದ ಅರ್ಜಿಗಳಿಗೆ ಅವಕಾಶ ಇರುವುದಿಲ್ಲ.

ಆನ್‍ಲೈನ್‍ನಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಅಂದರೆ ಯುಡಿಐಡಿ ಕಾರ್ಡ್, ಆಧಾರ್, ವಿಕಲಚೇತನರ ಪ್ರಮಾಣಪತ್ರ ಹಾಗೂ ಫೋಟೊ ಅಪ್‍ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ.

ಫಲಾನುಭವಿಗಳು ಆನ್‍ಲೈನ್ ಮುಖಾಂತರ ದಾಖಲಾತಿಗಳನ್ನು ಅಪ್‍ಲೋಡ್ ಮಾಡಿದ್ದಾಗ್ಯೂ, ಭೌತಿಕವಾಗಿ ಪಾಸ್ ಪಡೆಯಲು ಬಂದಾಗ ಮೂಲ ಜೆರಾಕ್ಸ್ ಪ್ರತಿಯನ್ನು ಹಾಜರುಪಡಿಸಿ, ವಿಕಲಚೇತನರ (ಹೊಸ/ನವೀ ಕರಣ) ಪಾಸ್‍ಗಳನ್ನು ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!