Saturday, 21st May 2022

ಹೈದರಾಬಾದ್‌ಗೆ ಬಸ್‌ ಸಂಚಾರ ಆರಂಭ

ಯಾದಗಿರಿ: ಯಾದಗಿರಿ ಬಸ್ ಘಟಕದಿಂದ ಬೆಳಿಗ್ಗೆ ಹೈದರಾಬಾದ್ ಗೆ ಒಂದು ಬಸ್ ಕಾರ್ಯಾಚರಣೆ ಆರಂಭಿಸಿತು.

ಚಾಲಕ, ನಿರ್ವಾಹಕ ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದ ನಂತರ ಅಧಿಕಾರಿಗಳು ಅವರನ್ನು ಹೈದರಾಬಾದ್ ಬಸ್ ಕಾರ್ಯಾ ಚರಣೆ ಮಾಡಲು ತಿಳಿಸಿದರು.

‘ಸೋಮವಾರ ಸರ್ಕಾರಿ ನೌಕರರು ಸೇರಿದಂತೆ, ಇನ್ನಿತರರಿಗೆ ತೊಂದರೆಯಾಗಬಾರದು ಎಂದು ಚಾಲಕ, ನಿರ್ವಾಹಕರಿಗೆ ಕರೆ ಮಾಡಿ ಕರೆಸುತ್ತಿದ್ದೇವೆ. 11 ಗಂಟೆಗೆಲ್ಲ ಬರುವ ನಿರೀಕ್ಷೆ ಇದೆ’ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದರು.

‘ಈಗಾಗಲೇ, ನಮ್ಮ ಹಲವು ಬೇಡಿಕೆಗಳನ್ನು ಪೂರೈಸಲು ಸರ್ಕಾರ ಒಪ್ಪಿಕೊಂಡಿದೆ. ಬಸ್ ಕಾರ್ಯಾಚರಣೆ ಕುರಿತು ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ನೌಕರರೊಬ್ಬರು ತಿಳಿಸಿದರು.