Wednesday, 29th June 2022

ಉಪಚುನಾವಣೆ ಬಳಿಕ ಸರ್ಕಾರ ಪತನ : ತಂಗಡಗಿ

ಕೊಪ್ಪಳ:
ಉಪ ಚುನಾವಣೆಯ ಬಳಿಕ ಬಿಜೆಪಿ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳು ಸುದ್ದಿಗಾರರ ಜೊತೆ ಮಾತನಾಡಿ,ಉಪ ಚುನಾವಣೆ ನಡೆದ ಬಳಿಕ ಸರಕಾರ ಪತನವಾಗುವದು ಪಕ್ಕಾ. ಬಿಜೆಪಿಯಲ್ಲಿ ಏಕಾಂಗಿತನ ಕಾಡುತ್ತಿದೆ. ಸಿಎಂ ಯಡಿಯೂರಪ್ಪ ಈಗ ಏಕಾಂಗಿಯಾಗಿದ್ದಾರೆ ಎಂದರು
ಸಿದ್ದರಾಮಯ್ಯ ಅವರ ಸೈನ್ಯ ದೊಡ್ಡದಿದೆ. ನಾವೆಲ್ಲ ಅವರ ಜೊತೆ ಇದ್ದೇವೆ. ಬಿಎಸ್ಐ ಏಕಾಂಗಿಯಾಗಿದ್ದು ಅದನ್ನು ಸಿದ್ದರಾಮಯ್ಯರ ಮೇಲೆ ಹಾಕುತ್ತಿದ್ದಾರೆ. ಸಿಎಂ ಸ್ಥಿತಿ ನೋಡಿದರೆ ನಮಗೆ ನೋವಾಗುತ್ತದೆ ಎಂದರು.ಕುರುಬ ಸಮಾಜದ ಸ್ವಾಮೀಜಿಗೆ ಅವಹೇಳನಕಾರಿಯಾಗಿ ಮಾತಾಡಿದ ವಿಚಾರ.ಮಾಧುಸ್ವಾಮಿ ನಾಲಿಗೆ ಬಿಗಿ ಹಿಡಿದು ಮಾತನಾಡಲಿ.ಮಾಧುಸ್ವಾಮಿಗೆ ಈ ವಿಷಯಕ್ಕೆ ದೊಡ್ಡ ಪೆಟ್ಡು ಬೀಳಲಿದೆ ಎಂದರು.ಸಿದ್ದರಾಮಯ್ಯ ರಾಜೀನಾಮೆ ನೀಡಿ ನನ್ನ ವಿರುದ್ದ ಸ್ಪರ್ಧೆ‌ ಮಾಡಲಿ ಎಂಬ ರಾಮಲು ಹೇಳಿಕೆ ವಿಚಾರ.

ಸಿದ್ದು ದೊಡ್ಡ ನಾಯಕರು, ತತ್ವ ಸಿದ್ದಾಂತದ ರಾಜಕಾರಣ ಮಾಡಿದವರು.ಈಗಾಗಲೆ ರಾಮುಲು ಸಿದ್ದು ಅವರ ವಿರುದ್ದ ಬಾದಾಮಿಯಲ್ಲಿ ಸೋತಿದ್ದಾರೆ. ಶ್ರೀರಾಮಲು ಈಗ ಜೋಶ್ ನಲ್ಲಿ ಮಾತಾಡಿದ್ದಾರೆ.ಸಿದ್ದರಾಮಯ್ಯ ಮುಂದೆ ಯಾರನ್ನೂ ಹೋಲಿಕೆ ಮಾಡಲಾಗೋದಿಲ್ಲ ಎಂದರು.ಇನ್ನೂ 15 ಜನರ ಮೇಲೆ ತೂಗುಗತ್ತಿ ಇದೆ. ಕರ್ನಾಟಕದಲ್ಲಿ ಪಕ್ಷಾಂತರಗಳಿಗೆ ಬುದ್ದಿ ಕಲಿಸಿತ್ತಾರೆ. ಅನರ್ಹರು, ಅನರ್ಹರಾಗೆ ಉಳಿಯುತ್ತಾರೆಜೆ.ಡಿ.ಎಸ್.ಪಕ್ಷಕ್ಕೆ ಯಾವ ತತ್ವ ಸಿದ್ದಾಂತವೂ ಇಲ್ಲ.ನಾವು ಆ ಪಕ್ಷದ ಬಗ್ಗೆ ಮಾತನಾಡೋದಿಲ್ಲ ಎಂದರು.15 ವಿಧಾನಸಭೆ ಉಪ ಚುನಾವಣೆಯಲ್ಲಿ ನಾವು ಗೆದ್ದೆ ಗೆಲ್ತೀವಿ.ಚುನಾವಣೆ ಬಳಿಕ ಬಿಜೆಪಿ ಮನೆಗೆ ಹೋಗತ್ತೆ ಎಂದರು.