Sunday, 14th August 2022

ಉಪಚುನಾವಣೆ: ಮುಖ್ಯಮಂತ್ರಿಗಳ ಬವಣೆ!

ವಿಶ್ಲೇಷಣೆ

ಏನು ಬೇಕಾದರೂ ಆಗಬಹುದು: ಇದು ರಾಜಕೀಯದಲ್ಲಿ ಮಾತ್ರ ಉಪಚುನಾವಣೆ ಎಂಬ ರಂಗುರಂಗಿನಾಟ!
ಅಥವಾ

ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು

ಮೊದಲು ಮತ ಚಲಾಯಿಸುವ ಮತದಾರನಿಗೆ ಕಡ್ಡಾಾಯವಾಗಿ ಮತದಾನ ಮಾಡಲೇ ಬೇಕೆಂಬ ಮತ್ತು ಮಾರಿಕೊಳ್ಳಬಾರದೆಂಬ ಛಲವಿರಬೇಕು. ಯೋಗ್ಯವಂತ ನಾಯಕನಿಗೆ ಮತ ನೀಡುವೆ ಎಂಬ ಹಠವಿರಬೇಕು. ಆಗಲೇ ಮಹಾತ್ಮ ಗಾಂಧೀಜಿ ಕಂಡ ರಾಮರಾಜ್ಯ ಸಾಕಾರಗೊಳ್ಳುವುದು.

ಹಿಂದೆ ಕರ್ನಾಟಕದ ದೊಡ್ಡ ರಾಜಕೀಯ ಪಕ್ಷದ ಪುಡಾರಿಯೊಬ್ಬ ಪಂಚತಾರ ಹೋಟೆಲ್ ಒಂದರಲ್ಲಿ ಉಳಿದುಕೊಳ್ಳುವ ಸಂದರ್ಭ ಬಂದಿರುತ್ತದೆ. ಹೋಟೆಲ್‌ನ ಕೊಠಡಿಯಲ್ಲಿ ಭರ್ಜರಿ ಭೋಜನವಾದ ನಂತರ ಮಾಣಿಯು ಒಂದು ಬಟ್ಟಲಿನಲ್ಲಿ ಬಿಸಿನೀರು ಮತ್ತು ನಿಂಬೆ ಹಣ್ಣಿಿನ ಹೋಳನ್ನು ತಂದಿಡುತ್ತಾಾನೆ. ಅದನ್ನು ನೋಡಿದ ರಾಜಕಾರಣಿ ಮಾಣಿಗೆ, ‘ಸಕ್ಕರೆನೇ ತಂದಿಲ್ವಲ್ಲ, ಹೋಗಿ ಸಕ್ಕರೆ ತಗೋಂಡು ಬಾ’ ಎಂದು ಆದೇಶಿಸುತ್ತಾಾನೆ. ಮಾಣೆಗೆ ನಗು ತಡೆಯಲಾಗುವುದಿಲ್ಲವಾದರೂ ತಡೆದುಕೊಂಡು ಹೇಳುತ್ತಾಾನೆ ‘ಸ್ವಾಮಿ, ಇದು ನಿಂಬೆಹಣ್ಣಿನ ಪಾನಕ ಮಾಡಕ್ಕಲ್ಲ, ನಿಮ್ಮ ಕೈಲಿರುವ ಕೊಬ್ಬಿನ ಜಿಗುಟು ತೊಳೆದುಕೊಳ್ಳಲು ಕೊಟ್ಟಿರುವ ಬಿಸಿನೀರು. ನಿಂಬೆ ಹೋಳು ಹಿಂಡಿಕೊಂಡು ಕೈ ತೊಳೆದು ಕೊಳ್ಳಿರಿ. ಬೇಕಾದರೆ ನಿಂಬೆಹಣ್ಣಿನ ಶರಬತ್ತು ತಂದು ಕೋಡುತ್ತೇನೆ.’ ಎಂದು ವಿನಂತಿಸುತ್ತಾನೆ.

ಇಂತಹ ಮುಗ್ಧರೋ, ಅಸಾಧ್ಯ ಪುಡಾರಿಗಳೋ ಜನ ತಮ್ಮ ಮತವನ್ನು ಪ್ರಜ್ಞಾಾಪೂರ್ವಕವಾಗಿಯೋ ಅಥವಾ ಮಾರಿಕೊಂಡೋ ಚಲಾಯಿಸಿ ಕಳಿಸುತ್ತಾಾರೆ. ಆದರೆ, ಇಂತಹ ರಾಜಕಾರಣಿಗಳೇ ಶಾಸನಬದ್ಧ ಸರಕಾರವನ್ನು ಉಳಿಸುತ್ತಾಾರೆ, ಬೀಳಿಸುತ್ತಾಾರೆ ಕೂಡ. ಇಂತವರಿಂದಲೇ ದೇಶದಲ್ಲಿ ಎದುರಾಗುವ ಉಪಚುನಾವಣೆ ಎಂಬುದು ಸಾರ್ವತ್ರಿಿಕ ಚುನಾವಣೆಗಿಂತಲೂ ಹೆಚ್ಚು ಮಹತ್ವವನ್ನು ಪಡೆದುಕೊಂಡು ರಂಗೇರುತ್ತದೆ. ಇಂದಿನ ದಿನಗಳಲ್ಲಿ ಉಪಚುನಾವಣೆ ಎಂಬುದು ಪ್ರಜಾಪ್ರಭುತ್ವದ ಒಂದು ದೋಷವಾಗಿ ಪರಿಣಮಿಸುತ್ತಿದೆ. ಹಿಂದೆಲ್ಲಾಾ ಯಾರೋ ಒಬ್ಬ ಶಾಸಕ ಅಕಾಲಿಕವಾಗಿ ಮರಣ ಹೋದಿದ್ದರೆ ಅಥವಾ ದೈಹಿಕ ಸಮಸ್ಯೆೆಯಿಂದಲೋ ಅನಾರೋಗ್ಯದಿಂದಲೋ ರಾಜೀನಾಮೆ ನೀಡಿದ ಸಂದರ್ಭಗಳಲ್ಲಿ ಮರು ಚುನಾವಣೆಗಳಾಗುತ್ತಿಿದ್ದವು.

ಆದರೆ, ಈಗ ಶಾಸಕನೊಬ್ಬನ ವೈಯಕ್ತಿಕ ಸ್ವಹಿತಾಸಕ್ತಿ, ಪಕ್ಷಾಂತರಕ್ಕೋೋ ಅಥವಾ ಮತ್ತ್ಯಾಾವನೋ ನಾಯಕನ ನಿಗೂಢ ಆದೇಶದ ಪ್ರಭಾವದಿಂದ ರಾಜೀನಾಮೆ ಪ್ರಹಸನ ನಡೆದು ಉಪಚುನಾವಣೆಗಳು ಎದುರಾಗುತ್ತಿರುವುದು ರಾಜಕೀಯ ಚದುರಂಗದಾಟದ ಕುತಂತ್ರ ನೀತಿಗಳನ್ನು ಪರಿಚಯಿಸುತ್ತಿವೆ. ಈಗ ನೋಡಿ ನಮ್ಮ ನಾಡಿನಲ್ಲಿ ಹದಿನೇಳು ಕ್ಷೇತ್ರಗಳಲ್ಲಿ ಪೈಕಿ, ಸದ್ಯ 15 ಕ್ಷೇತ್ರದಲ್ಲಿ ಮಾತ್ರ ಉಪಚುನಾವಣೆ ನಡೆಯುತ್ತಿದೆ. ಈ ಎಲ್ಲಾಾ ಕ್ಷೇತ್ರಗಳ ಚುನಾವಣೆಗಳು ನಡೆಯುತ್ತಿರುವುದು ಒಂದೊಂದು ತಪ್ಪುಗಳಿಂದ ಮತ್ತು ಅವುಗಳಿಂದಾದ ಹಲವಾರು ತಪ್ಪುುಗಳಿಂದ ಹಾಗೆಯೇ ಇವೆಲ್ಲಾಾ ತಪ್ಪುುಗಳೂ ಸಂಭವಿಸುತ್ತಿಿರುವುದು ಮತ್ತೆೆ ರಾಜಕೀಯ ಚದುರಂಗದಾಟದಿಂದ.

ಇಂದಿನ ಉಪಚುನಾವಣೆಯ ಮೂಲವನ್ನು ಹುಡುಕುತ್ತಾಾ ಹೋದರೆ, ಸಿದ್ದರಾಮಯ್ಯ ಐದು ವರ್ಷಗಳ ಆಡಳಿತದಲ್ಲಿ ಸಂವಿಧಾನ ಬದ್ಧ ಆಡಳಿತ ಉತ್ತಮವಾಗಿದ್ದರೂ ಶಾದಿಭಾಗ್ಯ, ಟಿಪ್ಪುು ಜಯಂತಿ, ಗೋಹತ್ಯ ನಿಷೇಧ ಪ್ರಸ್ತಾಾವನೆ ಹಿಂಪಡೆದು ಕ್ಷೀರಭಾಗ್ಯ ನೀಡಿದ್ದು, ವಿದ್ಯಾಾರ್ಥಿಗಳ ನಡುವೆ ಜಾತಿಗಳ ಅಂತರವನ್ನು ತೋರಿದ್ದು, ಸರಕಾರದ ದಕ್ಷ ಅಧಿಕಾರಿಗಳು ನಿಗೂಢವಾಗಿ ಸತ್ತಿದ್ದು, ಅಯೋಗ್ಯ ಮಂತ್ರಿಗಳನ್ನು ಪಕ್ಕದಲ್ಲಿರಿಸಿಕೊಂಡಿದ್ದು, ಸಾಲುಸಾಲು ಹಿಂದೂ ಸಂಘಟನೆಗಳ ಕಾರ್ಯಕರ್ತರು ಕೊಲೆಯಾಗಿದ್ದು ಮತ್ತು ಅದಕ್ಕೆ ಉದಾಸೀನ ತೋರಿದ್ದು. ಖಾಲಿ ತಲೆಯಂತಹ ಕೆಳ ಮಟ್ಟದವರನ್ನು, ತಲೆತುಂಬಿ ಹರಿಯುತ್ತಿದ್ದ ನಿವೃತ್ತ ಅಧಿಕಾರಿಗಳನ್ನು, ಬರಗೆಟ್ಟ ಗಂಜಿಗಿರಾಕಿಗಳನ್ನು, ಕಬಾಬ್ ಸಾಹಿತಿಗಳನ್ನು ಆಯಾಕಟ್ಟಿನಲ್ಲಿ ಕೂರಿಸಿಕೊಂಡಿದ್ದು ಇನ್ನೂ ಅನೇಕ ಅಸಹಜ ಆಡಳಿತದ ಫಲಿತಾಂಶದಿಂದಾಗಿ ಕಾಂಗ್ರೆೆಸ್ ಪಕ್ಷದ ಮುಖ್ಯಮಂತ್ರಿಯ ಸೋಲಿನೊಂದಿಗೆ ಎಂಬತ್ತು ಕ್ಷೇತ್ರಗಳಿಗೆ ಇಳಿದಿದ್ದು ಒಂದು ಕಡೆಯಾದರೆ.

ಕೆಜೆಪಿಯನ್ನು ವಿಸರ್ಜಿಸಿ ಬಂದ ಯಡಿಯೂರಪ್ಪನವರ ಏಕಬಲದಿಂದ ಬಿಜೆಪಿ 105 ಕ್ಷೇತ್ರಗಳಿಗೆ ಮಿತಿಗೊಂಡಿತ್ತು. ಇವೆರಡರ ಮಧ್ಯ ಜೆಡಿಎಸ್ ಗಳಿಸಿದ್ದು ಜಸ್‌ಟ್‌‌ಪಾಸ್ ಲೆಕ್ಕದ ಮೂವತ್ತೇಳು ಕ್ಷೇತ್ರಗಳು. ಇಲ್ಲಿ ಸಹಜವಾಗಿ ನಡೆಯಬೇಕಿದ್ದೇನೆಂದರೆ ಜಾತ್ಯತೀತ ಸಿದ್ಧಾಾಂತವನ್ನು ಅರಿದು ಕುಡಿದು ಪುರೋಹಿತರು ಜ್ಯೋೋತಿಷಿಗಳನ್ನು ನಂಬಿಕೊಂಡಿರುವ ಮತ್ತು ಅವರ ಅಣತಿಯಂತೆ ನಡೆಯುವ ಜೆಡಿಎಸ್ ಪಕ್ಷ ಮತ್ತು ಪುರೋಹಿತ ಶಾಹಿಯನ್ನು ವಿರೋಧಿಸುವ ಅಪ್ಪಟ ಜಾತ್ಯತೀತ ಪಕ್ಷವಾದ ಕಾಂಗ್ರೆೆಸ್‌ನ ಸಿದ್ಧಾಾಂತಗಳು ಒಂದೇ ಆಗಿರುವುದರಿಂದ ಈ ಎರಡೂ ಪಕ್ಷಗಳು ಸರಳವಾಗಿ ಹೊಂದಾಣಿಕೆ ಮಾಡಿಕೊಂಡು ಸರಕಾರ ರಚಿಸುವ ತೀರ್ಮಾನಕ್ಕೆೆ ಬಂದಾಗ ಸಹಜವಾಗಿ ಕಾಂಗ್ರೆೆಸ್ ಪಕ್ಷ ಮುಖ್ಯಮಂತ್ರಿ ಸ್ಥಾಾನವನ್ನು ಮತ್ತು ಉಪಮುಖ್ಯಮಂತ್ರಿ ಸ್ಥಾಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ನ್ಯಾಾಯವಿತ್ತು.

ಆದರೆ, ಇಲ್ಲಿ ನಡೆದದ್ದೆೆಲ್ಲಾಾ ಅಸಹಜವೇ ಆಗಿತ್ತು. ಮೊದಲಿಗೆ ಐದುವರ್ಷ ಮುಖ್ಯಮಂತ್ರಿಯಾಗಿ ಪಕ್ಷದೊಳಗೆ ವರ್ಚಸ್ಸುಗಳಿಸಿದ್ದ ಸಿದ್ದರಾಮಯ್ಯ ಮತ್ತೊೊಮ್ಮೆೆ ಮುಖ್ಯಮಂತ್ರಿ ಸ್ಥಾಾನಕ್ಕೆೆ ನಾಮಕರಣವಾಗುವ ಸಾಧ್ಯತೆ ಸಹಜವಾಗಿತ್ತು. ಆದರೆ, ಆ ಪಕ್ಷದೊಳಗೇ ಇದು ಅನೇಕರಿಗೆ ಅಸಹಜವಾಗಬೇಕಿತ್ತು. ಆದ್ದರಿಂದ ಪಕ್ಷದ ಹೈಕಮಾಂಡ್ ಮಟ್ಟದಲ್ಲೇ ಪದ್ಮನಾಭನಗರದ ಮನೆಯೊಳಗೆ ಶರಣೋ ಶರಣು ಎಂದು ಮಂಡಿಯೂರಿ ಕುಳಿತುಬಿಟ್ಟತು. ಇದು ಸಿದ್ದರಾಮಯ್ಯನವರಿಗೆ ಭೀಷ್ಮನ ಮುಂದೆ ಶಿಖಂಡಿಯನ್ನು ತಂದು ನಿಲ್ಲಿಸಿದಂತ್ತಾಾಗಿದ್ದು ಸುಳ್ಳಲ್ಲ.

ಮುಂದೆ ಸಿದ್ದರಾಮಯ್ಯ ನಿರೀಕ್ಷಿಸಿದ್ದು ಸುಳ್ಳಾಾಯಿತಾದರೂ ಮುಂದೆ ಕುಮಾರಸ್ವಾಾಮಿ ಮುಖ್ಯಮಂತ್ರಿಯಾದ ನಂತರ ಸಿದ್ದರಾಮಯ್ಯ ಊಹಿಸಿದ್ದೆೆಲ್ಲಾ ಭಯಂಕರವಾಗಿ ನಿಜವಾಗುತ್ತಲೇ ಹೋಯಿತು. ಆಗಲೇ ನೋಡಿ ಮೈತ್ರಿ ಸರಕಾರ ತೊಡೆಯ ಮೇಲಿನ ಕುರದಂತೆ ಸಹಿಸಿಕೊಳ್ಳುವಂತ್ತಾಾಗಿದ್ದು. ಅಲ್ಲಿಂದ ಜೆಡಿಎಸ್ ಕುಟುಂಬ ಸಾರಥ್ಯದ ಸರಕಾರ ವ್ಯವಸ್ಥಿಿತ ಪತನದತ್ತ ಸಾಗಿತು. ಇದೇ ಇಂದಿನ ಉಪಚುನಾವಣೆಗೆ ಬೀಜವಾಗಿ ಹದಿನೇಳು ಶಾಸಕರ ಅತೃಪ್ತರ ಫಲನೀಡಿ ಅವರು ಅನರ್ಹರಾಗಿ ಈಗ ಅನುಕಂಪವನ್ನು ಬಯಸಿದ್ದಾಾರೆ. ಇದು ಒಂದು ಕಡೆಯ ಚಿತ್ರಣವಾದರೆ. ಇವರಿಬ್ಬರಿಗಿಂತ ಹೆಚ್ಚು ಕ್ಷೇತ್ರಗಳನ್ನು ಗಳಿಸಿಯೂ ಸರಕಾರ ರಚಿಸಲು ಸಾಧ್ಯವಾಗದೆ ಪರಿತಪಿಸುತ್ತಿಿದ್ದ ಬಿಜೆಪಿ ಪಕ್ಷಕ್ಕೆೆ ಮೈತ್ರಿಿ ಸರಕಾರವೆಂಬುದು ಅನೈತಿಕ ಮತ್ತು ಅಕ್ರಮ ಕಟ್ಟಡವಾಗಿ ಭಾಸವಾಗತೊಡಗಿದ್ದು.

ಇದೆಲ್ಲದರ ಫಲಿತಾಂಶದಿಂದ ನಡೆಯುತ್ತಿರುವ ಹದಿನೇಳರಲ್ಲಿ ಸದ್ಯ15 ಕ್ಷೇತ್ರಗಳಲ್ಲಿ ಉಪಚುನಾವಣೆ ನಾಡಿನ ರಾಜಕೀಯ ಇತಿಹಾಸದಲ್ಲಿ ಇಲ್ಲಿಯವರೆಗೂ ಕಾಣದಂತ ರೋಚಕತೆಯಿಂದ ಮೇಳೈಸಿದೆ. ಈ ಉಪಚುನಾವಣೆಯಲ್ಲಿನ ಗೆಲುವುಗಳು ಬಿಜೆಪಿ ಪಾಲಿಗೆ ಸರಕಾರ ಉಳಿಸಿಕೊಳ್ಳಲು ಅನಿವಾರ್ಯವಾದರೆ. ಮೂರು ಪಕ್ಷದ ರಾಜಕೀಯದ ನಾಯಕರಿಗೆ ಸ್ವಹಿತಾಸಕ್ತಿಿಯ ಅನೇಕ ರೀತಿಯ ಗುಣಾಕಾರ ಭಾಗಾಕಾರ ಲೆಕ್ಕಾಾಚಾರದಿಂದ ಕೂಡಿದೆ. ಬಿಜೆಪಿ ಹತ್ತು ಕ್ಷೇತ್ರಗಳನ್ನು ಗೆದ್ದರೆ ಅದು ಯಡಿಯೂರಪ್ಪನವರಿಗೆ ತಮ್ಮ ಶಕ್ತಿಯನ್ನು ತೋರಿಸಲು ಒಳ್ಳೆಯ ಅವಕಾಶ.

ಕಾಂಗ್ರೆೆಸ್ ಹತ್ತು ಶಾಸಕರು ಗೆದ್ದರೆ ಅದು ನೇರವಾಗಿ ‘ಮತ್ತೊೊಮ್ಮೆೆ ಸಿದ್ದರಾಮಯ್ಯ’ ಎಂಬ ಬೀಜ ಮೊಳಕೆಯೊಡೆಯುತ್ತದೆ. ಹೊರತು ಕಾಂಗ್ರೆೆಸ್ ಪಕ್ಷದ ಮಟ್ಟದಲ್ಲಿ ದೊಡ್ಡ ಗೆಲುವೇನಾಗುವುದಿಲ್ಲ. ಆದರೆ, ‘ಮೂಲ’ ಕಾಂಗ್ರೆೆಸ್ ನಾಯಕರಿಗೆ ಅದು ಸದ್ಯಕ್ಕೆೆ ಬೇಡದ ಫಸಲು. ಒಂದೊಮ್ಮೆೆ ಕಾಂಗ್ರೆೆಸ್ ಹತ್ತನ್ನೆೆರಡು ಕ್ಷೇತ್ರಗಳಲ್ಲಿ ಸೋಲುಂಡರೆ ಅದು ಮೂಲವ್ಯಾಾದಿಯ ಮದ್ದಾಾಗುತ್ತದೆ. ಸದ್ಯಕ್ಕೆೆ ಇದು ಅವರಿಗೆ ಕೊಂಚ ಹಿತ ನೀಡಬಲ್ಲದು. ಈಗಾಗಲೇ ಪಕ್ಷದಲ್ಲಿ ಸಿದ್ದರಾಮಯ್ಯರ ನಂತರ ಪ್ರಭಾವಿಯಾಗಿದ್ದ ಡಾ. ಜಿ. ಪರಮೇಶ್ವರ್ ಅವರು ಐಟಿ ದಾಳಿಯ ನಂತರ ಮೌನವಾಗಿದ್ದಾಾರೆ. ಹಿರಿಯ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅಪ್ರಸ್ತುತರಾಗಿದ್ದಾಾರೆ. ಬಿ.ಕೆ.ಹರಿಪ್ರಸಾದ್ ಕೆ.ಎಚ್.ಮುನಿಯಪ್ಪ ಮೋಯಿಲಿಯಂತ ಸೋತ ಹಿರಿಯರು ತೆರೆಮರೆಯಲ್ಲೇ ತಮ್ಮ ಅಸ್ತಿಿತ್ವಕ್ಕೆೆ ಹಂಬಲಿಸುತ್ತಿಿದ್ದಾಾರೆ. ಡಿ.ಕೆ.ಶಿವಕುಮಾರ್ ಇನ್ನು ಸುಧಾರಿಸಿಕೊಳ್ಳುತ್ತಿದ್ದರೆ, ಅಧ್ಯಕ್ಷಗಿರಿ ಹೊತ್ತಿರುವ ದಿನೇಶ್ ಗುಂಡುರಾವ್‌ರನ್ನು ಪಕ್ಷದಲ್ಲಿ ಯಾರು ಲೆಕ್ಕಕ್ಕೆೆ ಇಟ್ಟುಕೊಂಡಿದ್ದಾಾರೆ ಎಂಬುದು ಪ್ರಶ್ನೆೆಯಾಗಿದೆ.

ಇನ್ನು ಬಿಜೆಪಿಯಲ್ಲೇನು ಭಿನ್ನವಾಗಿಲ್ಲ. ಅಕಸ್ಮಾಾತ್ ಉಪಚುನಾವಣೆ ಬಹುಮತಕ್ಕೆೆ ಸಹಕಾರಿಯಾದರೂ ಗೆದ್ದು ಬಂದವರು ಬಿಜೆಪಿಯ ಶ್ರೀರಾಮನ ಭಂಟರೇನಲ್ಲ. ಅವರನ್ನೂ ಮಂತ್ರಿಗಳನ್ನಾಾಗಿ ಮಾಡಿ, ಮೂಲ ಶಾಸಕರನ್ನು ನಿಭಾಯಿಸಿಕೊಂಡು ಮೂರುವರ್ಷ ಸಾಗುವುದೇನು ಅಷ್ಟು ಸುಲಭವಲ್ಲ. ಹಾಗಾಗದೆ ಮರು ಚುನಾವಣೆಯಾಗಿ ಯಾವುದೇ ಪಕ್ಷ 150 ಸ್ಥಾಾನಗಳಿಸಿದರೂ ಇರುವ ನಲವತ್ತು ಚಿಲ್ಲರೆ ಮಂತ್ರಿಗಿರಿಗಳನ್ನು ಹಂಚಿಕೊಂಡು ಹೋಗುವುದು ಇಂದಿನ ರಾಜಕೀಯದ ಪರಿಸ್ಥಿಿತಿಯಲ್ಲಿ ಸುಲಭವಲ್ಲ. ಇನ್ನು ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಯಾವ ಕಡೆಯಿಂದ ಲಾಭವೋ ಅದು ಸಧ್ಯಕ್ಕೆೆ ತೀರ್ಮಾನಿಸಲು ಸಾಧ್ಯವಿಲ್ಲ.

ಅದು ವಾತಾವರಣ, ವ್ಯಕ್ತಿಿ, ಸಂದರ್ಭ, ಸಮಯ ಇವುಗಳನ್ನು ಅವಲಂಭಿಸಿರುತ್ತದೆ. ಕುಮಾರಸ್ವಾಾಮಿ ಕೆಲ ವರ್ಷಗಳ ಹಿಂದೆ ಮುತ್ತಿಿನಂತಹ ಮಾತನ್ನಾಾಡಿದ್ದರು. ‘ರಾಜಕೀಯದಲ್ಲಿ ಏನು ಬೇಕಾದರು ಆಗಬಹುದು’ ಎಂದು. ಅದು ಎಷ್ಟು ಸತ್ಯವೆಂಬುದನ್ನು ನಾವುಗಳು ಇಂದು ಈ ಪಾಪಿ ಕಣ್ಣುಗಳಲ್ಲಿ ನೋಡುತ್ತಿಿದ್ದೇವೆ. ಪಾಪ ಇಂದಿನ ಉಪಚುನಾವಣೆಯಲ್ಲಿ ಕೆ.ಆರ್.ಪೇಟೆ, ಮಹಾಲಕ್ಷ್ಮಿಿ ಬಡಾವಣೆ, ರಾಜರಾಜೇಶ್ವರಿನಗರ ಅಥವಾ ಇನ್ನೊೊಂದೆರಡು ಕ್ಷೇತ್ರಗಳಲ್ಲಿ ತಮ್ಮ ಕುಟುಂಬದ ಒಂದಿಬ್ಬರು ಸದಸ್ಯರಿಗೆ ಅವಕಾಶ ಕಲ್ಪಿಿಸುವ ಮನಸ್ಸಿಿದ್ದರೂ ನಮ್ಮ ಈ ಪಾಪಿ ಸಾಮಾಜಿಕ ಜಾಲತಾಣಗಳು ‘ಟ್ರೋೋಲಾಯಣ’ ಮಾಡಿಬಿಡಬಹುದಾದ ಅಪಾಯವನ್ನು ತಂದೊಡ್ಡಿಿದೆ. ಈಗಾಗಿ ಈ ಸಾಮಾಜಿಕ ಜಾಲತಾಣಗಳು ಒಂದು ಕುಟುಂಬದ ಸ್ವಹಿತಾಸಕ್ತಿಿಯನ್ನು ಹಾಳು ಮಾಡಿರುವುದು ದುರದೃಷ್ಟಕರ.

ಉಪಚುನಾವಣೆಯ ಅಭ್ಯರ್ಥಿಗಳ ವಿಚಾರಕ್ಕೆೆ ಬಂದರೆ ಬೈಬಲ್ ಓದದೆ ಮತಾಂತರಗೊಂಡ ಕ್ರಿಶ್ಚಿಯನ್ ಮಿಷನರಿಗಳ ಕುತಂತ್ರಕ್ಕೆೆ ಬಲಿಯಾದವರಂತೆ ಬಿಜೆಪಿಯ ಸಿದ್ಧಾಾಂತಕ್ಕೆೆ ಮಾರುಹೋಗದೆ ಪಕ್ಷ ಸೇರಿರುವ ಅಭ್ಯರ್ಥಿಗಳಲ್ಲಿ ಎಸ್.ಟಿ. ಸೋಮಶೇಖರ್ ತನ್ನ ಕ್ಷೇತ್ರದಲ್ಲಿ ಜನಪ್ರಿಿಯ ಕೆಲಸ ಮಾಡಿ ವೈಯಕ್ತಿಿಕ ವರ್ಚಸ್ಸನ್ನು ಉಳಿಸಿಕೊಂಡಿದ್ದಾಾರೆ. ಕಳೆದ ಬಾರಿ ಇವರ ವಿರುದ್ಧ ಸ್ಪರ್ಧಿಸಿ ಕೇವಲ ಒಂಬತ್ತು ದಿನಗಳ ಪ್ರಚಾರ ನಡೆಸಿ ಅರವತ್ತು ಸಾವಿರ ಮತಗಳನ್ನು ಗಳಿಸಿಕೊಂಡಿದ್ದ ಚಿತ್ರನಟ ಜಗ್ಗೇಶ್ ಅವರ ಸಾಧನೆ ಅಲ್ಲಗೆಳೆಯಲಾಗದಿದ್ದರೂ ಟ್ವೀಟರ್‌ನಲ್ಲಿರುವಷ್ಟು ಸಮಯವನ್ನು ಕ್ಷೇತ್ರದ ಮತದಾರರಲ್ಲಿ ಶ್ರೀಗುರುರಾಯರನ್ನು ಕಾಣುವ ಕ್ಷೇತ್ರ ಸಂಚಾರವನ್ನಾಾದರೂ ಮಾಡಬಹುದಿತ್ತು.

ಈಗ ತನ್ನ ವೈರಿ ಎಂದೇ ಪರಿಗಣಿಸಿದ್ದವರ ಪರ ಪ್ರಚಾರ ಮಾಡಬೇಕಿದೆ. ಸೋಮಶೇಖರ್ ಅವರೊಂದಿಗೆ ಭೈರತಿ ಬಸವರಾಜ್, ಬಿ.ಸಿ.ಪಾಟೀಲ, ಎಚ್.ವಿಶ್ವನಾಥ್‌ರಂತಹ ಅನುಭವಿಗಳು ಬಿಜೆಪಿಯೊಂದಿಗೆ ಉತ್ತಮ ಸಂಬಧವಿರಿಸಿಕೊಳ್ಳಬಹುದು. ಆದರೆ, ಗೋಪಾಲಯ್ಯ, ಮುನಿರತ್ನಂ ನಾಯ್ಡುರಂತ ಮಾಸ್ ಮುಖಗಳು ಬಿಜೆಪಿ ಸಿದ್ಧಾಾಂತವನ್ನು ಒಪ್ಪಿಿಕೊಂಡು ನಡೆಯುವುದು ಅಸಹಜವೇ ಆಗಿರುತ್ತದೆ. ಇನ್ನು ಹೊಸಪೇಟೆಯ ಆನಂದ್‌ಸಿಂಗ್ ಆಡಿರುವ ಆಟ ಅಷ್ಟಿಿಷ್ಟಲ್ಲ. ಅವರ ಅನುಕೂಲ ಸಿಂಧು ರಾಜಕಾರಣವನ್ನು ಹತ್ತಿರದಿಂದ ಬಲ್ಲವರೇ ಹೇಳುತ್ತಾಾರೆ. ಈಗ ಬಿಜೆಪಿಗೆ ಮರಳಿರುವುದರಿಂದ ಹಿಂದಿನ ಅಭ್ಯರ್ಥಿ ‘ಗವಿ’ ಸೇರಿಕೊಳ್ಳುವುದರಲ್ಲಿ ಆಶ್ಚರ್ಯವಿಲ್ಲ. ಇನ್ನು ರಮೇಶ್ ಜಾರಕಿಹೊಳಿಯಂತ ಉತ್ತರ ಕರ್ನಾಟಕದ ನಾಯಕರಿಗೆ ದಕ್ಷಿಣದ ಬಂಡೆ ಚಪ್ಪಡಿಕಲ್ಲುಗಳ ಕೆಳಗೆ ಕೂರುವುದು ಸ್ವಾಾಭಿಮಾನದ ಪ್ರಶ್ನೆೆಯಾಗಿರುತ್ತದೆ. ಸುಧಾಕರ್, ಎಂಟಿಬಿ ನಾಗರಾಜ ಅಂತವರಿಗೆ ಇಂತಹದೇ ಪಕ್ಷ, ಸಿದ್ಧಾಾಂತ ಬೇಕೆಂಬ ಕಟ್ಟುಪಾಡುಗಳೇನಿಲ್ಲ. ಇಂತವರನ್ನು ಕಟ್ಟಿಕೊಂಡು ಯಡಿಯೂರಪ್ಪನವರು ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಪೂರೈಸಿದರೆ ಅವರ 50 ವರ್ಷದ ರಾಜಕೀಯ ಬದುಕಿನ ಅತಿದೊಡ್ಡ ಸಾಧನೆಯ ಅವಧಿಯಾಗುತ್ತದೆ. ಮುಂದೆ ಅವರನ್ನು ರಾಜ್ಯಪಾಲರನ್ನಾಾಗಿ ಮಾತ್ರ ನೋಡಿ ಹೆಮ್ಮೆೆಪಡಬಹದು.

ಇವೆಲ್ಲವನ್ನು ಕೇಂದ್ರ ಬಿಜೆಪಿಯ ‘ಆಡಿಸುವಾತ’ ಅಮಿತ್ ಶಾ ಅವರು ಬಹಳ ಹತ್ತಿರದಿಂದ ಗಮನಿಸುತ್ತಿರುವುದು ಸುಳ್ಳಲ್ಲ. ಸರಕಾರವನ್ನು ಉಳಿಸಿಕೊಳ್ಳಲು ಯಡಿಯೂರಪ್ಪನವರಿಗೆ ಎಲ್ಲಾಾ ರೀತಿಯ ಸ್ವಾಾಂತಂತ್ರ್ಯವನ್ನು ಕೊಟ್ಟು ಪರೀಕ್ಷಿಸಲಾಗುತ್ತಿದೆ. ಅದಕ್ಕಾಾಗಿ ಅವರು ಅನರ್ಹರನ್ನೂ ಕೈಬಿಡದೆ ಪಕ್ಷದೊಳಗಿನವರನ್ನು ವಿಶ್ವಾಾಸಕ್ಕೆೆ ತೆಗೆದುಕೊಂಡು ಈ ಅಗ್ನಿಿಪರೀಕ್ಷೆಯಲ್ಲಿ ನಿಂತ್ತಿದ್ದಾರೆ. ಒಂದೊಮ್ಮೆೆ ಈ ಪರೀಕ್ಷೆಯಲ್ಲಿ ಗೆದ್ದು ಬಂದರೆ ಅವರ ಚುನಾವಣಾ ರಾಜಕೀಯ ಬದುಕಿನ ಅಂತ್ಯ ಗೌರವಯುತವಾಗಿರುತ್ತದೆ. ಇಲ್ಲದಿದ್ದರೆ ಆಳಿಗೊಂದು ಕಲ್ಲು ಖಚಿತ. ದೇಶದ ಶಾಸಕಾಂಗ, ಚುನಾವಣಾ ವ್ಯವಸ್ಥೆೆಗಳನ್ನು ನೋಡುತ್ತಿದ್ದರೆ, ಮನೆ ಇಲ್ಲದ ಸಂಸದರಾದ ಪ್ರತಾಪ ಚಂದ್ರ ಸಾರಂಗಿ, ಮಠವಿರುವ ಮುಖ್ಯಮಂತ್ರಿ ಯೋಗಿ ಯಂತವರೇ ದೇಶದ ಎಲ್ಲಾಾ ಕ್ಷೇತ್ರಗಳಿಂದ ಗೆದ್ದು ಬಂದರೆ ದೇಶದಲ್ಲಿ ಭ್ರಷ್ಟಾಾಚಾರವೆಂಬುದೇ ಇರುವುದಿಲ್ಲ ಎನಿಸುತ್ತದೆ. ಅದಕ್ಕೆ ಮೊದಲು ಮತ ಚಲಾಯಿಸುವ ಮತದಾರನಿಗೆ ಕಡ್ಡಾಾಯವಾಗಿ ಮತದಾನ ಮಾಡಲೇ ಬೇಕೆಂಬ ಮತ್ತು ಮಾರಿಕೊಳ್ಳಬಾರದೆಂಬ ಛಲವಿರಬೇಕು ಮತ್ತು ಯೋಗ್ಯವಂತ ಮತ ನೀಡುವೆ ಎಂಬ ಹಠವಿರಬೇಕು. ಆಗಲೇ ಮಹಾತ್ಮ ಗಾಂಧೀಜಿ ಕಂಡ ರಾಮರಾಜ್ಯ ಸಾಕಾರಗೊಳ್ಳುವುದು.