ಆಡಳಿತ ಮಂಡಳಿಗಳು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಿ
ವಿಶೇಷ ವರದಿ: ಅರವಿಂದ ಬಿರಾದಾರ ವಿಜಯಪುರ
ಕರೋನಾ ಮೂರನೇ ಅಲೆಯ ಆತಂಕದ ನಡುವೆಯೇ ಇಂದಿನಿಂದ ಶಾಲೆಗಳು ಪ್ರಾರಂಭವಾಗ ಲಿವೆ. ಇದಕ್ಕಾಗಿ ಜಿಲ್ಲೆಯಾದ್ಯಂತ ಅಗತ್ಯ ತಯಾರಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳ ಲಾಗಿದೆ.
ಯಶಸ್ವಿಯಾಗಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಡೆಸಿರುವ ಜಿಲ್ಲಾಡಳಿತ ಈಗ ಶಾಲೆ ಪ್ರಾರಂಭ ಕ್ಕೂ ಸಜ್ಜಾಗಿದೆ. ಜಿಯ ಒಟ್ಟು ೭ ವಲಯಗಳಲ್ಲಿ ೧೫೩ ಸರ್ಕಾರಿ, ೨೧೦ ಅನುದಾನಿತ ಹಾಗೂ ೨೨೬ ಅನುದಾನರಹಿತ ಸೇರಿದಂತೆ ಒಟ್ಟು ೫೮೯ ಪ್ರೌಢಶಾಲೆಗಳಿದ್ದು, ೯ನೇ ತರಗತಿಗೆ ೪೧೮೫೩ ಹಾಗೂ ೧೦ನೇ ತರಗತಿಗೆ ೪೨೨೩೬ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೮೪೦೮೯ ಮಕ್ಕಳು ಹೈಸ್ಕೂಲ್ ವಿಭಾಗಕ್ಕೆ ದಾಖಲಾಗಿದ್ದಾರೆ.
ಇನ್ನು ಕಾಲೇಜು ವಿಭಾಗದಲ್ಲಿ ೧೩ ಬ್ಲಾಕ್ಗಳಲ್ಲಿ ೩೧ ಸರ್ಕಾರಿ ಕಾಲೇಜುಗಳಿದ್ದು, ೫೫ ಅನುದಾನಿತ, ೧೨೮ ಅನುದಾನ ರಹಿತ ಕಾಲೇಜುಗಳು ಸೇರಿದಂತೆ ಒಟ್ಟು ೨೧೪ ಕಾಲೇಜುಗಳಿದ್ದು, ಕಲೆ, ವಾಣಿಜ್ಯ ಹಾಗೂ ವಿeನ ವಿಭಾಗ ಸೇರಿದಂತೆ ಪಿಯುಸಿ ಮೊದಲನೇ ವರ್ಷಕ್ಕೆ ೨೬,೦೦೫ ಹಾಗೂ ದ್ವಿತೀಯ ಪಿಯುಸಿಗೆ ೨೬,೧೫೮ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೫೨,೧೬೩ ವಿದ್ಯಾರ್ಥಿಗಳು ದಾಖಲಾಗಿವೆ.
ಈಗಾಗಲೇ ಶಿಕ್ಷಣ ಇಲಾಖೆ ಶಾಲಾ ಪ್ರಾರಂಭೋತ್ಸವಕ್ಕೆ ಹಲವಾರು ನಿಬಂಧನೆಗಳನ್ನು ಹೇರಿದ್ದು ಶಾಲಾ ಕಾಲೇಜು ಆಡಳಿತ ಮಂಡಳಿಗಳು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಇವೆಲ್ಲವುಗಳ ಮೇಲ್ವಿಚಾರಣೆಗೆ ತಂಡವನ್ನು ನೇಮಿಸಲಾಗಿದೆ. ಒಂದು ವೇಳೆ ನಿಯಮಗಳನ್ನು ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲು ಜಿಡಳಿತ ಮುಂದಾಗಿದೆ.
***
ಶಾಲಾ ಪ್ರಾರಂಭೋತ್ಸವಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಸರ್ಕಾರದಿಂದ ಹೊರಡಿಸಿ ರುವ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಎಲ್ಲರೂ ಪಾಲಿಸಲೇಬೇಕು. ಒಂದು ವೇಳೆ ನಿಯಮ ಪಾಲಿಸ ದಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಕ್ಕಳು ಯಾವುದೇ ಭಯವಿರದೇ ಮುಕ್ತವಾಗಿ ಶಾಲೆಗೆ ಹಾಜರಾಗಬಹುದು.
ಪಿ.ಸುನಿಲ್ ಕುಮಾರ್
ಜಿಲ್ಲಾಧಿಕಾರಿ