ಬಿ.ಎಸ್.ಯಡಿಯೂರಪ್ಪ ಸಂಭ್ರಮದ ಮಧ್ಯೆ, ನಾಯಕತ್ವ ಬದಲಿಸುವ ಅಸಂತೋಷದ ಯತ್ನ
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಹತ್ವದ ರಾಜಕೀಯ ಪುನರ್ ಪ್ರವೇಶ ರಾಜಾಹುಲಿ ರಿಟರ್ನ್, ಬಿಎಸ್ವೈ ಬ್ಯಾಕ್ ಎನ್ನುವ ಅನೇಕ ವಿಶೇಷಣಗಳೊಂದಿಗೆ ರಾಜ್ಯದಲ್ಲಿ ಭಾರೀ ಚರ್ಚೆಯನ್ನೇ ಹುಟ್ಟು ಹಾಕಿದೆ.
ಈ ಅನಿರೀಕ್ಷಿತ ಬೆಳವಣಿಗೆಯಿಂದ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಸ್ತಾಪ ಬಹುತೇಕ ಮುಗಿದ ಅಧ್ಯಾಯ ಎನ್ನುವ ಚರ್ಚೆಯೂ ನಡೆಯುತ್ತಿದೆ. ಅಂದರೆ ಸಂಸದೀಯ ಮಂಡಳಿ, ಕೇಂದ್ರ ಚುನಾವಣಾ ಸಮಿತಿ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಂತೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಸಂಪುಟದ ಬಹುತೇಕ ಸಚಿವರು, ಶಾಸಕರು ಯಡಿಯೂರಪ್ಪ ಅವರಿಗೆ ಶುಭ ಕೋರುವ ಮೂಲಕ ತಮ್ಮ ಪುನರ್ ವಿಧೇಯತೆಯನ್ನು ದಾಖಲಿಸಿದರು. ಅದರಲ್ಲೂ ಇಷ್ಟೂ ದಿನ ಮರೆತವರಂತೆಯೇ
ಕಾಣುತ್ತಿದ್ದ ಸಚಿವ ಅಶೋಕ್ ಅವರು ಯಡಿಯೂರಪ್ಪ ಅವರನ್ನು ಕ್ಷಣಹೊತ್ತು ಬಿಡದಂತೆ ಜತೆಗೇ ಕಾಣಿಸಿಕೊಳ್ಳುತ್ತಿದ್ದಾರೆ.
ಹೀಗಾಗಿ ಇದೊಂದು ಸಿಎಂ ತಂಡ ಪರೋಕ್ಷವಾಗಿ ಯಡಿಯೂರಪ್ಪ ಅವರು ತೆಕ್ಕೆಗೆ ಉರುಳುವ ಸೂಚನೆಯನ್ನೂ ತೋರಿಸಿತು. ಇದರ ಪರಿಣಾಮ ನಾಯಕತ್ವ ಬದಲಾವಣೆ ಎನ್ನುವುದು ಮುಗಿದ ಅಧ್ಯಾಯ. ಇನ್ನೇನಿದ್ದರೂ ಯಡಿಯೂರಪ್ಪ ಅವರ ಸಲಹೆಯಂತೆ ಬೊಮ್ಮಾಯಿ ಅವರು ಸರಕಾರ ಮುನ್ನಡೆಸಿಕೊಂಡು ಹೋಗುತ್ತಾರೆ ಎನ್ನುವ ಕೋನದ ಚರ್ಚೆಗಳು ಬಲವಾ ಗಿದ್ದವು. ಆದರೆ ಯಡಿಯೂರಪ್ಪ ಅವರು ಸಂಸದೀಯ ಸಮಿತಿ ಸದಸ್ಯರಾದ ಪ್ರಯುಕ್ತ ತಿರುಪತಿ ದರ್ಶನಕ್ಕೆ ಹೋಗುತ್ತಿದ್ದಂತೆ ಇನ್ನಷ್ಟು ಅನಿರೀಕ್ಷಿತ ಬೆಳವಣಿಗೆಗಳು ಸದ್ದಿಲ್ಲದೆ ಜರುಗಿವೆ.
ಅಂದರೆ ಮುಚ್ಚಿ ಹೋಗಿದ್ದ ನಾಯಕತ್ವದ ಬದಲಾವಣೆ ವಿಚಾರಕ್ಕೆ ಮತ್ತೆ ಜೀವ ತರುವ ಪ್ರಯತ್ನ ನಡೆದಿದೆ. ಅದರರಲ್ಲೂ ಯಡಿಯೂರಪ್ಪ ಅವರೊಂದಿಗೆ ಇದ್ದುಕೊಂಡು ಸಚಿವರೊಬ್ಬರು ನಾಯಕತ್ವದ ಬದಲಾವಣೆ ಲಾಬಿಗೆ ಕೈ ಹಾಕಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಬಿಎಸ್ವೈ ಆಯ್ಕೆ ಹಿಂದೇನಿದೆ?: ಸತತ ರಣತಂತ್ರ, ಹೋರಾಟ ಗಳಿಂದ ಯಡಿಯೂರಪ್ಪ ಅವರು ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ತಂದಿದ್ದರು. ಈ ಸರಕಾರದ ಮೂಲಕ ಪಕ್ಷವನ್ನು ಮತ್ತೊಂದು ಬಾರಿಗೆ ಅಧಿಕಾರಕ್ಕೆ ತರಬೇಕೆನ್ನುವಾಗಲೇ ಬಿಎಸ್ವೈ ಅವರಿಂದ ಸಿಎಂ ಕುರ್ಚಿ ಕಸಿದುಕೊಂಡು ಮೂಲೆ ಗುಂಪು ಎಂದು ಪ್ರತಿಪಕ್ಷಗಳು ಟೀಕಿಸುವ ಮಾದರಿಯ ಮಾಡಿದರು.
ಇದರಿಂದ ಸಾಕಷ್ಟ ಯಡಿಯೂರಪ್ಪ ಅವರು ಅಪಮಾನವಾದರೂ ಸಹಿಸಿಕೊಂಡು ರಾಜಕೀಯ ಮೌನವ್ರತ ಮಾಡಿದ್ದರಿಂದ ಇತ್ತೀಚಿಗೆ ನಡೆದ ವಿಧಾನಪರಿಷತ್ ಚುನಾವಣೆಗಳಲ್ಲಿ ಬಿಜೆಪಿ ಮುಗ್ಗರಿಸುವಂತಾಯಿತು. ಇತ್ತೀಚಿಗೆ ನಡೆಸಿದ ಪಕ್ಷದ ಸ್ಥಿತಿಗತಿ ಸಮೀಕ್ಷೆಯಲ್ಲೂ ಪಕ್ಷ ಹೀನಾಯ ಸ್ಥಿತಿಯಲ್ಲಿರುವುದು ಗೊತ್ತಾಯಿತು. ಇದಕ್ಕೆಲ್ಲ ಯಡಿಯೂರಪ್ಪ ಫ್ಯಾಕ್ಟರ್ ಕಾರಣ ಎನ್ನುವ ಅಂಶವೂ ಪಕ್ಷದ ವರಿಷ್ಠರಿಗೆ ಮನವರಿಕೆಯಾಗಿ ಇದೀಗ ಪಕ್ಷದ ಪರಮೋಚ್ಚ ಅಧಿಕಾರ ಸಮಿತಿಗೆ ಬಿಎಸ್ವೈ ಅವರನ್ನು ಆಯ್ಕೆ ಮಾಡಿ ರಾಜ್ಯದ ಹೊಣೆಯನ್ನು ಪರೋಕ್ಷವಾಗಿ ಅವರಿಗೇ ವಹಿಸಲಾಗಿದೆ.
ಸಂತೋಷದ ಪ್ರವಾಸ ರಹಸ್ಯ!: ಪಕ್ಷದ ವರಿಷ್ಠರು ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಿರುವುದು ಕೆಲವರಿಗೆ ಅಸಂತೋ ಷದ ನಡೆಯಾಗಿದ್ದು, ಇದರ ಪರಿಣಾಮ ರಾಜ್ಯದಲ್ಲಿ ಇನ್ನಷ್ಟು ಅನಿರೀಕ್ಷಿತ ಬೆಳವಣಿಗೆಗಳು ನಡೆಯಲಾರಂಭಿಸಿವೆ.
ಈ ಮಧ್ಯೆ, ಪಕ್ಷದ ಸಂಘಟನಾ ಕಾರ್ಯದರ್ಶಿ ಹಾಗೂ ಸಂಸದೀಯ ಸಮಿತಿ ಸದಸ್ಯರೂ ಆಗಿರುವ ಬಿ.ಎಲ.ಸಂತೋಷ್ ಅವರು ಕಳೆದ ನಾಲ್ಕು ದಿನಗಳಿಂದ ರಾಜ್ಯದ ಪ್ರವಾಸ ನಡೆಸುತ್ತಿದ್ದಾರೆ.
ಅನೇಕ ಮುಖಂಡರನ್ನು ರಹಸ್ಯವಾಗಿ ಭೇಟಿಯಾಗಿ ಪಕ್ಷದ ವಿಚಾರಗಳನ್ನು ಚರ್ಚಿಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದೇ ಸಂದರ್ಭ ಬಳಸಿಕೊಂಡು ಸಚಿವ ಅಶೋಕ್ ಅವರು ನಾಯಕತ್ವ ಬದಲಾವಣೆ ಪ್ರಸ್ತಾಪ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನು ಸಂತೋಷ್ ಅವರೊಂದಿಗೆ ಚರ್ಚಿಸುವ ಸಿದ್ಧತೆ ನಡೆಸುತ್ತಿದ್ದು, ಇದು ತಿಳಿಯುತ್ತಿದ್ದಂತೆ ಸಚಿವ ಅಶ್ವತ್ಥ ನಾರಾಯಣ್, ರಾಜ್ಯ ಮುಖಂಡ ಸಿ.ಟಿ.ರವಿ ಅವರೂ ಪ್ರಯತ್ನ ಮಾಡುವ ಚಿಂತನೆಯಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ.
ಅಂದರೆ ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದಾಗಿದೆ, ಅವರಿಗೇ ಕೇಂದ್ರ ಸಮಿತಿಯಲ್ಲೂ ಅವಕಾಶ
ನೀಡಿದಂತಾಗಿದೆ. ಈಗ ಮತ್ತೆ ಬೊಮ್ಮಾಯಿ ಅವರನ್ನೇ ಮುಂದುವರಿಸಿದರೆ ಒಕ್ಕಲಿಗರು ಕಾಂಗ್ರೆಸ್ ಕಡೆ ವಾಲುವ ಸಾಧ್ಯತೆ ಇದೆ. ಹೀಗಾಗಿ ಒಕ್ಕಲಿಗರೊಬ್ಬರನ್ನು ಮುಖ್ಯಮಂತ್ರಿ ಮಾಡಿ ಎನ್ನುವ ಪ್ರಸ್ತಾಪವನ್ನು ಅಶೋಕ್ ಪಾಳಯದವರು ಪ್ರತಿಪಾದಿಸುತ್ತಿದ್ದಾರೆ
ಎಂದು ತಿಳಿದುಬಂದಿದೆ. ಇದಕ್ಕೆ ವರಿಷ್ಠರ ಸಂತೋಷದ ಬೆಂಬಲಗಳು ಲಭಿಸುತ್ತಿದೆ ಎಂದು ಹೇಳಲಾಗಿದೆ.