ವಿನುತಾ ಹೆಗಡೆ ಶಿರಸಿ
ಎಲೆಚುಕ್ಕಿ ರೋಗದಿಂದ ಮೊದಲೇ ಹೈರಾಣಾದ ಕೃಷಿಕರು
ಹೊಸದಾಗಿ ಬಂದ ರೋಗಕ್ಕೆ ಔಷಧ ತಿಳಿಯದೇ ಕಂಗಾಲು
ಅಡಕೆಯನ್ನೇ ವಾಣಿಜ್ಯ ಬೆಳೆಯನ್ನಾಗಿಸಿಕೊಂಡು ಬದುಕು ಕಟ್ಟಿಕೊಂಡು ಬಂದ ಮಲೆನಾಡ ತೋಟಿಗರಿಗೆ
ಇನ್ನೊಂದು ಆಘಾತಕಾರಿ ರೋಗ ಅಡಕೆ ಗಿಡವನ್ನು ಆವರಿಸಿಕೊಂಡಿದೆ. ಈಗಾಗಲೇ ರೈತರನ್ನು ಹೈರಾಣಾ
ಗಿಸಿದ ಎಲೆ ಚುಕ್ಕಿ ರೋಗದ ಭೂತದ ಬೆನ್ನಲ್ಲೇ ಚೈನಾ ರಿಂಗ್ ಸ್ಪಾಟ್ ವೈರಸ್ಎನ್ನುವ ರೋಗ ಅಡಕೆ ಗಿಡಕ್ಕೆ
ಬಂದಿದ್ದು ಕೃಷಿಕರನ್ನು ದೆವ್ವದಂತೆ ಕಾಡಲಾರಂಬಿಸಿದೆ.
ಚೈನಾ ರಿಂಗ್ ಸ್ಪಾಟ್ ಹೆಸರೇ ಸೂಚಿಸುವಂತೆ ಇದೊಂದು ಅಡಕೆ ಗಿಡ, ಮರಗಳ ಎಲೆಯಲ್ಲಿ ರಿಂಗ್ ರಿಂಗ್ ಆಗಿ ಸುತ್ತು ಆವೃತ್ತಿ ಮೂಲಕ ಆಪೋಷನ ತೆಗೆದುಕೊಳ್ಳುವ ರೋಗವಾಗಿದೆ.ಈಗಾಗಲೇ ಎಲೆಚುಕ್ಕಿ ರೋಗದಿಂದ ಹೈರಾಣಾಗಿದ್ದ ತೋಟಿಗರಿಗೆ ಈ ಚೈನಾ ವೈರಸ್ ಮತ್ತೊಂದು ಆಘಾತವಾಗಿ ಕಾಡುತ್ತಿದೆ.
ಈ ರಿಂಗ್ ಸ್ಪಾಟ್ ಚೈನಾ ವೈರಸ್ ಎನ್ನುವ ಅಡಕೆ ಹೆಡೆಯ(ಎಲೆ)ಯ ರೋಗವು ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಭಾಗದಲ್ಲಿ ಕಾಣಿಸಿಕೊಂಡಿದೆ. ಸುಮಾರು ಮೂವತ್ತು ಎಕರೆಯಷ್ಟು ಪ್ರದೇಶದಲ್ಲಿ ಇದು ತನ್ನ ಕಬಂದ ಬಾಹು ಚಾಚಿದ್ದು, ಎಲೆ ಚುಕ್ಕಿ ರೋಗಕ್ಕಿಂತ ಅತ್ಯಂತ ವೇಗವಾಗಿ ಹರಡುತ್ತಿದೆ. ಈ ರೋಗಕ್ಕೆ ಇನ್ನೂ ಯಾವುದೇ ಔಷಧವನ್ನು ಕಂಡು ಹಿಡಿದಿಲ್ಲ. ರೋಗ ಇಂತದ್ದು ಎನ್ನುವ ಅಂಶ ಮಾತ್ರ ತಿಳಿದಿದ್ದು, ಎಲೆಚುಕ್ಕಿ ರೋಗಕ್ಕಿಂತ ಹೆಚ್ಚೇನೂ ಭಿನ್ನವಾಗಿಲ್ಲ ಎನ್ನಬಹುದು.
‘ನಮಗೆ ಎಲೆಚುಕ್ಕಿ ರೋಗದ ಬಗ್ಗೆ ಮಾಹಿತಿ ಉಂಟು, ಆದ್ರೆ ಇದ್ಯಾವುದೋ ಹೊಸ ರೋಗ ಅಂದ್ರಪ ತೋಟಗಾರಿಕೆ ಇಲಾಖೆಯವ್ರು. ನಮಗೂ ಗೊತ್ತಿಲ್ಲ. ಎಲ್ಲ ಅಡಕೆ ಗಿಡದ ಬುಡದ ಹೆಡೆಗೆಲ್ಲ ಈ ರೀತಿ ರಿಂಗ್, ರಿಂಗ್ ಆಗದೆ. ನಾವ್ ಕೇಳಿರೆ ಇದು ಚೈನಾ ವೈರಸ್ ಅಂದ್ರಪ. ಏನು ಮಾಡುದು ಹೇಳೆ ಗೊತ್ತಿಲ್ಲ. ಇದು ಕೃಷಿಕ ಪ್ರಕಾಶ ಅವರ ಮಾತು.
ತೋಟಗಾರಿಕಾ ಇಲಾಖೆಯವರು ಈಗಾಗಲೇ ಈ ರೋಗದ ಕುರಿತಂತೆ ಸಂಶೊಧನೆಗಾಗಿ ಅಡಕೆ ಎಲೆಯನ್ನು ಪ್ರಯೋಗಕ್ಕೆ ಒಳಪಡಿಸಿದ್ದಾರೆಂದು ತಿಳಿದು ಬಂದಿದೆ. ಆದರೆ ರೋಗಕ್ಕೆ ಔಷಧ ಕಂಡು ಹಿಡಿಯುವುದರೊಳಗಾಗಿ ಈ ರೋಗ ಎಲ್ಲೆಡೆಯು ಹರಡುವ ಸಂಭವ ಹೆಚ್ಚಾಗಿದೆ. ಮಲೆನಾಡಲ್ಲಿ ಎಲ್ಲಿಯೂ ವೃತ್ತಾಕಾರವಾಗಿ ಬಯಲಿಲ್ಲ. ರೋಗ ಹರಡುವುದಿಲ್ಲ ಎನ್ನಲಾಗದು. ಒಂದರಿಂದ ಒಂದರಂತೆ ಇದು ಹರಡುತ್ತಲೇ ಸಾಗುತ್ತಿರುವುದರಿಂದ ಎಲ್ಲ ಕೃಷಿಕರಲ್ಲಿ ಆತಂಕ ಮನೆಮಾಡಿದೆ.
ಕೃಷಿಕರ ಕಾಡುತ್ತಿರುವ ಈ ರೋಗದ ಅಧ್ಯಯನಕ್ಕಾಗಿ ಅ.19ರಂದು ಸಂಶೋಧಕ ಕೇರಳ ಕಾಸಗೋಡಿನ ಡಾ.
ವಿನಾಯಕ ಹೆಗಡೆ ಯವರು ಆಗಮಿಸಲಿದ್ದಾಂದು ತೋಟಗಾರಿಕಾ ಇಲಾಖೆಯ ಸತೀಶ ಹೆಗಡೆ ತಿಳಿಸಿದ್ದಾರೆ.
ಆದರೀಗ ಅಧ್ಯಯನದ, ಸಂಶೊಧನೆಯ ಮೂಲಕ ಆದಷ್ಟು ಬೇಗ ಔಷಧ ಕಂಡು ಹಿಡಿಯುವ ಭರವಸೆ
ಸಿಕ್ಕಿದೆ. ಈ ಮೂಲಕವಾದರೂ ರೈತರಿಗೆ ಧೈರ್ಯ ಸಿಕ್ಕಿದರೆ ಸಾಕು ಎನ್ನುವುದು ಎಲ್ಲರ ಆಶಯ.
ರೋಗದ ಲಕ್ಷಣ
ಅಡಕೆಯ ಎಲೆ ಎಲ್ಲವೂ ಕಪ್ಪು ಹಸಿರಾಗಿರುವಂತೆಯೇ ವೃತ್ತಾಕಾರದಲ್ಲಿ ಹಳದಿ ರಿಂಗ್ ತರದಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಅಡಕೆ ಎಲೆಯ ಯಾವ ಭಾಗ ತಿರುಗಿಸಿದರೂ ಒಂದೇ ರೀತಿಯಲ್ಲಿ ರಿಂಗ್ ಕಾಣಿಸುತ್ತದೆ. ಒಂದೊಂದು ಹೆಡೆಗೆ ಲೆಕ್ಕವಿಲ್ಲದಂಷ್ಟು ರಿಂಗ್ಗಳು ಕಾಣಿಸುತ್ತವೆ.
*
ಈದೀಗಾಗಲೇ ಅಡಕೆಗೆ ಬಂದಿರುವ ಎಲೆ ಚುಕ್ಕಿ ರೋಗದಿಂದ ಕೃಷಿಕರು ಕಂಗಾಲಾಗಿದ್ದು, ಇದೀದ ಚೈನಾ ರಿಂಗ್ ಸ್ಪಾಟ್ರೋಗ ಕಾಣಿಸಿಕೊಂಡಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ಸರಕಾರ ಈ ಕೂಡಲೇ ಇದರ ಕುರಿತು ಎಚ್ಚರಿಕೆ ತೆಗೆದುಕೊಂಡು ರೋಗಕ್ಕೆ ಪರಿಹಾರ ವಾಗಿ ಔಷಧ ಕಂಡು ಹಿಡಿಯಬೇಕಿದೆ. ಕೃಷಿ ಸಚಿವರು ಹೆಚ್ಚಿನ ಗಮನ ಹರಿಸಬೇಕು.
-ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ
ಇದನ್ನೂ ಓದಿ: Prof R G Hedge Column: ಮನುಷ್ಯನ ಮೆದುಳಿಗೆ ಅಮಿತ ಸಾಧ್ಯತೆಗಳಿವೆ