ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ವಾಲ್ಮೀಕಿ ಅಭಿವೃದ್ದಿ ನಿಗಮ ಹಗರಣ: ಮಹತ್ವದ ಘಟ್ಟ ಮುಟ್ಟಿದ ತನಿಖೆ
ಬಹುಕೋಟಿ ರೂ. ವಾಲ್ಮೀಕಿ ಹಗರಣದ ತನಿಖೆ ತೀವ್ರಗೊಂಡಿದ್ದು, ಇದರಲ್ಲಿ ಸರಕಾರದ ಹಣಕಾಸು ಇಲಾಖೆ ಪಾತ್ರವಿಲ್ಲ ಎನ್ನುವ ಅಂಶ ಎಸ್ಐಟಿ ತನಿಖೆ ವೇಳೆ ತಿಳಿದುಬಂದಿದೆ. ಕೋಟ್ಯಂತರ ರೂಪಾಯಿಗಳ ವರ್ಗಾವಣೆ ಹಿಂದೆ ನಿಗಮದ ಅಧಿಕಾರಿಗಳು ಮತ್ತು ಬ್ಯಾಂಕ್ ಅಽಕಾರಿಗಳು ಶಾಮೀಲಾಗಿರು
ವುದು ತನಿಖೆಯಲ್ಲಿ ಕಂಡು ಬಂದಿದೆ.
ಬ್ಯಾಂಕ್ ಮತ್ತು ನಿಗಮದ ಅಧಿಕಾರಿಗಳ ನಂತರ ಎಸ್ಐಟಿ ಅಧಿಕಾರಿಗಳು ಹಣಕಾಸು ಇಲಾಖೆಯ ಕೆಲವು ಅಧಿಕಾರಿಗಳನ್ನೂ ವಿಚಾರಣೆ ನಡೆಸಿದ್ದು,
ಅವರು ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದೇ ದಾಖಲೆಗಳು ದೊರೆತಿಲ್ಲ ಎಂದು ಹೇಳಲಾಗಿದೆ. ಆದರೆ ಇದರಲ್ಲಿ ಅಕ್ರಮ ಹಣ ವರ್ಗಾವಣೆ ಬಗ್ಗೆ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹೆಚ್ಚುವರಿ ನಿರ್ದೇಶಕರೇ ದೂರು ನೀಡಿದ್ದು, ಇದಾದ ನಂತರ ಎಸ್ ಐಟಿ ತನಿಖೆಗೆ ಇನ್ನಷ್ಟು ಚುರುಕುಗೊಡಿದೆ.
ರಾಜ್ಯದ ಹಣಕಾಸು ಇಲಾಖೆ ಹಾಗೂ ಮುಖ್ಯಮಂತ್ರಿಗಳನ್ನು ಪಾತ್ರ ಇರುವ ಬಗ್ಗೆ ಹೇಳಿಕೆ ನೀಡಬೇಕೆಂದು ಇಡಿ ಅಧಿಕಾರಿಗಳು ಒತ್ತಡ ಹೇರುತ್ತಿzರೆ ಎಂದು ಇಲಾಖೆಯ ಅಧಿಕಾರಿ ಕಶ್ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಕಾಕತಾಳಿಯ ಎನ್ನುವಂತೆ ಹಗರಣದಲ್ಲಿ ಹಣಕಾಸು ಇಲಾಖೆ ಪಾತ್ರವಿಲ್ಲ ಎನ್ನುವ ಅಂಶ ಎಸ್ಐಟಿಗೆ ಗೊತ್ತಾಗಿದ್ದು, ಬ್ಯಾಂಕ್ ಮತ್ತು ನಿಗಮದ ಅಧಿಕಾರಿಗಳ ವಿರುದ್ದ ತನಿಖೆ ತೀವ್ರಗೊಂಡಿದೆ.
ವಾಲ್ಮೀಕಿ ನಿಗಮ ಹೊಂದಿದ್ದ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಹೈದರಾಬಾದ್ ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬ್ಯಾಂಕ್ ಖಾತೆಗೆ ೯೪.೭೩ ಕೋಟಿ ರು. ಅಕ್ರಮವಾಗಿ ವರ್ಗಾವಣೆಯಾಗಿ ಹಣ ವಾಪಸ್ ನಿಗಮದ ಖಾತೆಗೆ ಬಾರದಿದ್ದಾಗ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಯುನಿಯನ್ ಬ್ಯಾಂಕ್ನ ಅಧಿಕಾರಿಗಳ ವಿರುದ್ಧವೂ ಎಫ್ಐಆರ್ ದಾಖಲಾಗಿತ್ತು. ಸರಕಾರ ಈ ಪ್ರಕರಣವನ್ನು ಎಸ್ ಐಟಿಗೆ ವಹಿಸಿತ್ತು. ಹೀಗಾಗಿ ೨ ತಿಂಗಳಿನಿಂದ ತನಿಖೆಗೆ ನಡೆಸುತ್ತಿದ್ದು, ನಿಗಮ, ಬ್ಯಾಂಕ್ ಅಧಿಕಾರಿಗಳು ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಹಣ ಲಪಟಾಯಿಸುವ ಸಲುವಾಗಿ ಕೃತ್ಯ ಎಸಗಿದ್ದಾರೆ ಎನ್ನುವುದನ್ನು ಎಸ್ಐಟಿ ಕಂಡುಕೊಂಡಿದೆ.
ಹೀಗಾಗಿ ಎಸ್ಐಟಿ ಅಧಿಕಾರಿಗಳು ಶೀಘ್ರ ಹಗರಣದ ಆರೋಪಿ ಅಧಿಕಾರಿಗಳ ವಿರುದ್ದ ಆರೋಪ ಪಟ್ಟಿ ಸಿದ್ದಪಡಿಸಲಿದ್ದಾರೆಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ನಿಜಕ್ಕೂ ಆರ್ಥಿಕ ಇಲಾಖೆ ಪಾತ್ರ ಇಲ್ಲವೇ?: ಹಗರಣದಲ್ಲಿ ಹಣಕಾಸು ಇಲಾಖೆ ಪಾತ್ರವಿಲ್ಲ ಎಂದು ಆಡಳಿತ ಪಕ್ಷದ ನಾಯಕರು ಹೇಳು ತ್ತಿದ್ದು, ಪ್ರತಿಪಕ್ಷ ಪಾಳಯ ಇದನ್ನು ಒಪ್ಪಲು ಸಿದ್ಧವಿಲ್ಲ. ಆದರೆ ಒಮ್ಮೆ ನಿಗಮಕ್ಕೆ ಹಣ ಬಿಡುಗಡೆಯಾದ ಮೇಲೆ ಅದನ್ನು ಫಲಾನುಭವಿಗಳಿಗೆ ನೀಡಲು ಆರ್ಥಿಕ ಇಲಾಖೆ ಅನುಮತಿ ನೀಡುವ ಪ್ರಮೇಯ ಬರುವುದಿಲ್ಲ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಸಾಮಾನ್ಯ ಸರಕಾರದಲ್ಲಿ ಹಣಕಾಸು ಬಿಡುಗಡೆ ವಿಚಾರದಲ್ಲಿ ಎರಡು ರೀತಿಯ ವ್ಯವಸ್ಥೆ ಇದೆ. ಬಜೆಟ್ ಅನುಮೋದನೆಯಂತೆ ಹಣಕಾಸು ಇಲಾಖೆ ಸರಕಾರದ ಖಜಾನೆಗೆ ಹಣ ನೀಡುತ್ತದೆ. ನಂತರ ವಿವಿಧ ಇಲಾಖೆಗಳು ಕೈಗೊಳ್ಳುವ ಕಾಮಗಾರಿ ಹಾಗೂ ಇತರ ವೆಚ್ಚಗಳ ಬಿಲ್ ಗಳನ್ನು ಹಣಕಾಸು ಸಲ್ಲಿಸುತ್ತದೆ. ನಂತರ ದಾಖಲೆಗಳ ದೃಢೀಕರಣದ ಬಳಿಕ ಖಜಾನೆಯಿಂದ ನಿಗದಿತ ಲೆಕ್ಕಶೀರ್ಷಿಕೆಯಂತೆ ಡಿಸಿ ಬಿಲ್ (ವಿಸೃತ)ಗಳಿಗೆ ಹಣ ವರ್ಗಾವಣೆ
ಯಾಗುತ್ತದೆ. ಶೇ.೯೦ರಷ್ಟು ಇಲಾಖೆಗಳಲ್ಲಿ ಇದೇ ವ್ಯವಸ್ಥೆ ಇದೆ. ಇದು ಸುರಕ್ಷಿತ ಕೂಡ. ಆದರೆ ಪರಿಶಿಷ್ಟಜಾತಿ ಮತ್ತು ಪಂಗಡ ಇಲಾಖೆಗಳಲ್ಲಿ ನಿಗಮಗಳ ಮೂಲಕ ಮೂಲಕ ವೆಚ್ಚ ಮಾಡುತ್ತಿದ್ದು, ಇಲ್ಲಿ ನಿಗಮಗಳು ತಮ್ಮದೇ ಬ್ಯಾಂಕ್ ಖಾತೆಗಳನ್ನು ತೆರೆದು ಠೇವಣೆ ಇರಿಸಿಕೊಳ್ಳುತ್ತವೆ.
ಆದರೆ ಇಲ್ಲಿ ನಿಗಮಗಳು ಬ್ಯಾಂಕ್ ಖಾತೆ ತೆರೆಯುವುದು, ಬದಲಾಯಿಸುವುದು, ಏನಾದರೂ ತೊಂದರೆಯಾದಾಗ ಹಣಕಾಸು ಇಲಾಖೆಗೆ ಮಾಹಿತಿ ನೀಡಿ ಅನುಮತಿ ಪಡೆದು ಹಣ ಬಳಸಿಕೊಳ್ಳಬೇಕಾಗು ತ್ತದೆ. ಉಳಿದಂತೆ ನಿಗಮಗಳು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹಣ ಬಿಡುಗಡೆ ಮಾಡುವಾಗ ಪ್ರತಿ ಹಂತ ದಲ್ಲೂ ಹಣಕಾಸು ಇಲಾಖೆ ಅನುಮತಿ ಪಡೆಯುವುದಿಲ್ಲ. ನಿಯಮದ ಪ್ರಕಾರ ಅದರ ಅಗತ್ಯವೂ ಇಲ್ಲ. ಹೀಗಾಗಿ ಹಣಕಾಸು ಇಲಾಖೆ ಒಮ್ಮೆ ನಿಗಮ ಗಳಿಗೆ ಹಣ ಬಿಡುಗಡೆ ಮಾಡಿದ ನಂತರ ಬಳಸಿಕೊಳ್ಳುವುದು ನಿಗಮದ ಹೊಣೆ. ಆ ಸಂದರ್ಭದಲ್ಲಿ ಅಕ್ರಮ, ಅವ್ಯವಹಾರಗಳು ನಡೆದರೆ, ಅದಕ್ಕೆ ನಿಗಮವೇ ಹೊಣೆಯಾಗುತ್ತದೆಯೇ ವಿನಃ ಆರ್ಥಿಕ ಇಲಾಖೆಯಲ್ಲ ಎಂದು ಹಣಕಾಸು ಇಲಾಖೆ ಹಿರಿಯ ಅಧಿಕಾರಿ ಹೇಳಿದ್ದಾರೆ.
ಇಲಾಖೆ ಅನುಮತಿ ಇಲ್ಲದೇ ನೇಮಕ
ಹಾಗೆ ನೋಡಿದರೆ, ವಾಲ್ಮೀಕಿ ನಿಗಮದ ಎಂಡಿ ಪದ್ಮನಾಭ ಅವರ ನೇಮಕವೇ ಸಂಶಯಾಸ್ಪದ ವಾಗಿದೆ. ಇವರು ಹಿಂದಿನ ಸರಕಾರದಲ್ಲಿ ಬೋವಿ ನಿಗಮದ
ಎಂಡಿಯಾಗಿದ್ದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ರಾಗಿದ್ದ ಇವರನ್ನು ಪ್ರಭಾರಿ ಎಂಡಿ ಮಾಡಲಾಗಿತ್ತು. ಆದರೆ ಇದಕ್ಕೆ ಅಂದಿನ ಹಣಕಾಸು ಇಲಾಖೆ
ಅನುಮತಿಯೇ ಇರಲಿಲ್ಲ ಎನ್ನಲಾಗಿದೆ. ಆದರೂ ಅಂದು ಬೋವಿ ನಿಗಮದಲ್ಲಿ ಸಾಕಷ್ಟು ಅಕ್ರಮಗಳು ನಡೆದು, ತನಿಖೆಯನ್ನೂ ನಡೆಸಲಾಗಿತ್ತು. ಪದ್ಮ ನಾಭ ಅವರಿಂದ ಯಾವುದೇ ಅಕ್ರಮ ನಡೆದಿಲ್ಲ ಎಂದು ಅಂದಿನ ಸಚಿವ ಶ್ರೀರಾಮಲು ಅವರೇ ಹೇಳಿದ್ದರು. ಅದೇ ರೀತಿ ಈ ಸರಕಾರದಲ್ಲೂ ಪದ್ಮನಾಭ ಅವರು ವಾಲ್ಮೀಕಿ ನಿಗಮದ ಎಂಡಿ ಯಾಗಿದ್ದು, ಇದಕ್ಕೂ ಹಣಕಾಸು ಇಲಾಖೆ ಅನುಮತಿ ಸಿಕ್ಕಿಲ್ಲ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ತಿಳಿಸಿ ದ್ದಾರೆ.