-ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆಯಾ ಯುರಿಯಾ?
-2,71,330 ಎಕರೆ ಪ್ರದೇಶದಲ್ಲಿ ಮುಗಿದಿದೆ ಬಿತ್ತನೆ ಕರ್ಯ
-ಬಸವರಾಜ ಕರುಗಲ್
ಗದಗ: ಮಳೆಗಾಲ ಆರಂಭಗೊಂಡಿದ್ದು ಕೃಷಿ ಚಟುವಟಿಕೆಗಳು ಗರಿ ಗೆದರಿವೆ. ಮಳೆ ಆರಂಭವಾದಾಗ ಸಂತಸಗೊಂಡಿದ್ದ ರೈತರು, ಇದೀಗ ನಿಲ್ಲದ ಮಳೆಯಿಂದಾಗಿ ಬೆಳೆಗಳಿಗೆ ರೋಗ ತಗುಲುವ ಭೀತಿಯಿಂದ ಆತಂಕಗೊಂಡಿದ್ದಾರೆ.
ಬೆಳೆಗಳ ರೋಗನಾಶಕ ಗೊಬ್ಬರಕ್ಕಾಗಿ ಅಲೆದು ಹೈರಾಣಾಗುತ್ತಿದ್ದಾರೆ. ರ್ಟಿಲೈರ್ನ ವರು ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ. ಗದಗ ಜಿಲ್ಲೆಯಲ್ಲಿ ೪,೬೫,೭೧೫ ಹೆಕ್ಟೇರ್ ಭೌಗೋಳಿಕ ವಿಸ್ತರ್ಣವಿದ್ದು, ೩,೯೦, ೨೬೫ ಹೆಕ್ಟೇರ್ ಸಾಗುವಳಿ ಪ್ರದೇಶವಿದೆ. ಮುಂಗಾರು ಬೆಳೆಯ ವಿಸ್ತರ್ಣ ೩,೦೧,೩೫೯ ಹೆಕ್ಟೇರ್ ಜಿಲ್ಲೆಯಲ್ಲಿ ಯೂರಿಯಾ ೨೦೨೪, ಡಿಎಪಿ ೩೫೯, ಎಂ.ಓ.ಪಿ೧೮೫, ಎನ್.ಪಿ.ಕೆ.ಎಸ್ ೨,೭೦೯ ಹಾಗೂ ಎಸ್.ಎಸ್.ಪಿ ೮೪ ಟನ್ ಸೇರಿದಂತೆ ಒಟ್ಟು೫,೩೬೧ ಟನ್ ಗೊಬ್ಬರ ದಾಸ್ತಾನಿದೆ. ಬೀಜ ಹಾಗೂ ರಸಗೊಬ್ಬರಗಳಿಗೆ ನಿಗದಿ ಪಡಿಸಿದ ಗರಿಷ್ಠ ಮಾರಾಟ ಬೆಲೆಗೆ ಮಾರಾಟಗಾರರು ಮಾರಾಟ ಮಾಡದಂತೆ ನಿಗಾವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದರೂ ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ನಿಂತಿಲ್ಲ.
ಪ್ರತಿ ೫೦ ಕೆಜಿ ಚೀಲದ ಡಿಎಪಿ ಗೊಬ್ಬರದ ಒಟ್ಟು ಬೆಲೆ ರೂ.೩,೮೫೦.೬೫ ಇದ್ದು ರೈತರು ರೂ.೧,೩೫೦ಗೆ ಖರೀದಿ ಮಾಡುತ್ತಿದ್ದು ಉಳಿದ ರೂ.೨೫೦೦.೬೫ರಷ್ಟು ರಿಯಾಯ್ತಿ ದರವನ್ನು ಕೇಂದ್ರ ರ್ಕಾರವು ಭರಿಸುತ್ತಿದೆ. ಎಂ.ಓ.ಪಿ ೫೦ ಕೆಜಿ ಚೀಲದ ಬೆಲೆ ರೂ.೨,೪೫೯ ಇದ್ದು ರೈತರು ೧,೭೦೦ ರೂ.ಗೆ ಖರೀದಿ ಮಾಡುತ್ತಿದ್ದು ಬಾಕಿ ಉಳಿದ ರೂ.೭೫೯.೩ ರಷ್ಟು ಕೇಂದ್ರ ರ್ಕಾರ ಭರಿಸುತ್ತಿದೆ.
ಕಾಂಪ್ಲೆಕ್ಸ್ ಪ್ರತಿ ೫೦ ಕೆಜಿ. ಚೀಲದ ಬೆಲೆ ರೂ.೩,೨೦೪.೪೫ ಇದ್ದು ರೈತರು೧,,೪೭೦ ರೂ. ಖರೀದಿಸುತ್ತಿದ್ದಾರೆ. ಬಾಕಿ೧,೭೩೪.೪೫ ರೂ.ಗಳನ್ನು ಕೇಂದ್ರ ರ್ಕಾರ ಭರಿಸುತ್ತಿದೆ. ಯೂರಿಯಾ ಪ್ರತಿ ೪೫ ಕೆ.ಜಿ. ಚೀಲಕ್ಕೆ೧,೬೬೬ ರೂ. ಇದ್ದು ರೈತರು ರೂ.೨೬೬ಕ್ಕೆ ಖರೀದಿಸುತ್ತಿದ್ದಾರೆ ಬಾಕಿ೧,೪೦೦ ರಷ್ಟು ರಿಯಾಯ್ತಿ ದರವನ್ನು ಕೇಂದ್ರ ರ್ಕಾರ ಭರಿಸುತ್ತಿದೆ.
ಬಿತ್ತನೆ ಬೀಜ ಗೊಬ್ಬರ ಅಂಗಡಿಯಲ್ಲಿ ಎಂ.ಆರ್.ಪಿ ಬೆಲೆ ಪ್ರಕಟಿಸಬೇಕು ಜೊತೆಗೆ ಗೊಬ್ಬರಕ್ಕೆ ರಾಜ್ಯ ಹಾಗೂ ಕೇಂದ್ರ ರ್ಕಾರ ನೀಡುತ್ತಿರುವ ಸಬ್ಸಿಡಿ ಮೊತ್ತ ಸಹ ರೈತರಿಗೆ ತಿಳಿಯುವಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಅಕ್ರಮ ದಾಸ್ತಾನು ಮಾಡಿದಲ್ಲಿ ಶಿಸ್ತುಕ್ರಮ ಎಚ್ಚರಿಕೆಯನ್ನು ನೀಡಲಾಗಿದೆ.
೨೦೨೨-೨೩ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ೬೨೫ ಎಂ.ಎಂ. ಮಳೆ ಯಾಗಿದ್ದು, ವಾಡಿಕೆ ಮಳೆಗಿಂತ ಶೇ.೯೪ರಷ್ಟು ಜಾಸ್ತಿ ಮಳೆಯಾಗಿದೆ.೩,೨೬,೬೧೮ ಹೆ.ಬಿತ್ತನೆ ಗುರಿಯಾಗಿದ್ದು, ಈವರೆಗೆ ೨,೭೧,೩೩೦ ಹೆ.ಪ್ರದೇಶದಲ್ಲಿ ಸುಮಾರು ಶೇ.೮೩.೧ ರಷ್ಟು ಬಿತ್ತನೆ ಕರ್ಯ ಪರ್ಣಗೊಂಡಿರುತ್ತದೆ. ಅಧಿಕ ಮಳೆಯೇ ಈಗ ರೈತರ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಹೆಸರು ೩೦-೪೦ ದಿನಗಳ ಬೆಳೆಯಾಗಿದ್ದು ನಂಜಾಣು ರೋಗ (ಹಳದಿ ರೋಗ) ಕಂಡು ಬಂದಿದೆ. ಇದನ್ನು ಹತೋಟಿಗೆ ತರಲು ಮೊದಲನೆಯದಾಗಿ ಹೊಲದಲ್ಲಿನ ಯಾವುದಾದರು ಹಸಿರು ಗಿಡಕ್ಕೆ ಸಣ್ಣಗೆ ಕಾಣಿಸಿಕೊಂಡಿದಲ್ಲಿ ಪ್ರಾರಂಭದಲ್ಲಿಯೇ ಈ ಗಿಡವನ್ನು ಕಿತ್ತು ನಾಶ ಮಾಡಬೇಕು. ರೋಗದ ತೀವ್ರತೆ ಹೆಚ್ಚಾಗಿದ್ದಲ್ಲಿ, ಅಂರ್ವ್ಯಾಪಿ ಕೀಟನಾಶಕಗಳ ಸಿಂಪಡಣೆ ಮಾಡಬೇಕು. ಶೇಂಗಾ ಬೆಳೆಯು ೩೦-೪೦ ದಿನಗಳ ಬೆಳೆಯಾಗಿದ್ದು, ಹಬ್ಬು ಶೇಂಗಾ ಬಿತ್ತನೆ ಕರ್ಯ ಮುಂದುವರೆದಿದೆ. ಮುಸುಕಿನಜೋಳ೨೦-೩೦ ದಿನಗಳ ಬೆಳೆಯಾಗಿದ್ದು, ಬಿತ್ತನೆ ಕರ್ಯ ಮುಂದುವರಿದಿದೆ. ತೊಗರಿ ೨೫-೩೦ ದಿನಗಳ ಬೆಳೆಯಾಗಿದ್ದು, ಬೆಳವಣಿಗೆ ಹಂತದಲ್ಲಿದೆ. ಹತ್ತಿ ೩೦-೩೫ ದಿನಗಳ ಬೆಳೆಯಾಗಿದ್ದು, ಬೆಳವಣಿಗೆ ಹಂತದಲ್ಲಿದೆ.
ಗದಗ ಜಿಲ್ಲೆಯಲ್ಲಿ ಯೂರಿಯಾ, ಡಿಎಪಿ, ಪೊಟ್ಯಾಶ್ ಸೇರಿದಂತೆ ೨೬ ಸಾವಿರ ಮೆ. ಟನ್ ರಸಗೊಬ್ಬರ ಬಂದಿದೆ. ಪ್ರತಿ ಸಲ ೨೪ ಸಾವಿರ ಮೆಟ್ರಿಕ್ ಟನ್ ಗೊಬ್ಬರ ಸಾಕಾಗುತ್ತಿತ್ತು. ಈ ಸಲ ೨ ಸಾವಿರ ಮೆಟ್ರಿಕ್ ಟನ್ ಜಾಸ್ತಿ ಬಂದಿದ್ದರೂ ಇನ್ನೂ ಬೇಡಿಕೆ ಇದೆ. ಪ್ರಸ್ತುತ ೫,೩೬೧ ಮೆಟ್ರಿಕ್ ಟನ್ ಗೊಬ್ಬರ ಲಭ್ಯವಿದ್ದು, ಇನ್ನೂ ೩,೨೦೦ ಟನ್ ಯೂರಿಯಾ, ಸಾವಿರ ಟನ್ ಡಿಎಪಿ ಬರುತ್ತಿದ್ದು, ಲೋಡ್ ಆದ ನಂತರ ೨೬ ಗಂಟೆಯೊಳಗೆ ತಲುಪುತ್ತದೆ ಎಂಬುದು ಕೃಷಿ ಇಲಾಖೆಯ ಮಾಹಿತಿ.
ನರಗುಂದದಲ್ಲಿ ಶಿಥಿಲ ಮಳಿಗೆಯಲ್ಲಿ ಗೊಬ್ಬರ ದಾಸ್ತಾನು!: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಶಿಥಿಲ ಮಳಿಗೆಯೊಂದರಲ್ಲಿ ಗೊಬ್ಬರ ದಾಸ್ತಾನು ಮಾಡಿರುವುದರಿಂದ ಮಳೆಗೆ ಗೊಬ್ಬರದ ಚೀಲಗಳು ಹಸಿಯಾಗಿದ್ದು, ಪ್ರಯೋಜನಕ್ಕೆ ಬಾರದಂತಾಗಿವೆ. ಇದರಿಂದ ಉಂಟಾಗುವ ಲಕ್ಷಾಂತರ ರೂಪಾಯಿ ನಷ್ಟವನ್ನು ಭರಿಸುವವರು ಯಾರು ಎಂಬ ಪ್ರಶ್ನೆ ಉದ್ಭವಗೊಂಡಿದೆ.
***
“ಗೊಬ್ಬರದ ಅಂಗಡಿಗೆ ಹೋದರೆ ಒಬ್ಬ ರೈತರಿಗೆ ಎರಡು ಚೀಲ ಯುರಿಯಾ ಮಾತ್ರ ಕೊಡುತ್ತಿದ್ದಾರೆ. ೧೦-೨೦ ಎಕರೆ ಹೊಲ ಇರುವ ರೈತರಿಗೆ ಇದು ಸಾಕಾಗುವುದಿಲ್ಲ. ಇದರಿಂದ ಬೆಳೆನಷ್ಟದ ಭೀತಿ ಎದುರಾಗಿದೆ. ಅಧಿಕಾರಿಗಳನ್ನು ಕೇಳಿದರೆ ಗೊಬ್ಬರಕ್ಕೆ ಕೊರತೆ ಇಲ್ಲ ಎನ್ನುತ್ತಾರೆ. ಅಂಗಡಿಗಳಲ್ಲಿ ಆಧಾರ್ ಲಿಂಕ್ ಇದ್ದವರಿಗೆ ಮಾತ್ರ ಎರಡು ಚೀಲ ಗೊಬ್ಬರ ಕೊಡುತ್ತೇವೆ ಎನ್ನುತ್ತಿದ್ದಾರೆ. ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ಮಾಡುತ್ತಿರುವ ಬಗ್ಗೆ ಅನುಮಾನವಿದೆ. ಯಾವ್ಯಾವುದೋ ಕಾರಣಕ್ಕೆ ದಾಳಿ ಮಾಡುವ ಎಸಿಬಿಯವರು ಗೊಬ್ಬರದ ಅಂಗಡಿಗಳ ಮೇಲೂ ದಾಳಿ ನಡೆಸಲಿ. ಆಗ ಸತ್ಯಾಂಶ ಹೊರ ಬರುತ್ತೆ.”
-ಸೋಮರಡ್ಡಿ ಹೊಸಮನಿ, ರೈತ, ಕರ್ತಕೋಟಿ.
“ರೈತರು ಆತಂಕ ಪಡುವ ಅಗತ್ಯವಿಲ್ಲ. ಗೊಬ್ಬರ ದಾಸ್ತಾನು ಸರ್ಪಕವಾಗಿದೆ. ಬೇಡಿಕೆ ಜಾಸ್ತಿಯಾಗಿದ್ದರಿಂದ ಮತ್ತಷ್ಟೂ ಗೊಬ್ಬರ ವನ್ನು ತರಿಸಲಾಗುತ್ತಿದೆ. ಕೃಷಿ ಇಲಾಖೆ ಸಿಬ್ಬಂದಿ, ಸಚಿವರು ಸದಾ ರೈತರೊಂದಿಗೆ ಇರುತ್ತಾರೆ.
-ಜಿಯಾವುಲ್, ಜಂಟಿ ನರ್ದೇಶಕ, ಕೃಷಿ ಇಲಾಖೆ, ಗದಗ.