ನಂಜನಗೂಡು ಪ್ರದ್ಯುಮ್ನ
ಬೀದಿ ನಾಯಿಗಳ ನಿಯಂತ್ರಣ: ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಚರ್ಚೆ
ಬೆಂಗಳೂರು: ರಸ್ತೆಗಳಲ್ಲಿ ಗುಂಪು ಗುಂಪಾಗಿ ಠಳಾಯಿಸುವ, ಕಂಡಕಂಡವರ ಮೇಲೆ ಎರಗುವ ಬೀದಿ ನಾಯಿಗಳ ಬಗ್ಗೆ ‘ಅಯ್ಯೋ ಪಾಪ’ ಎಂದಿರೋ, ಜೋಕೆ! ಒಂದು ವೇಳೆ ನೀವು ಆಹಾರ ಹಾಕುವ ಬೀದಿ ನಾಯಿ ಯಾರನ್ನಾದರು ಕಚ್ಚಿದರೆ ನೀವು ಕಠಿಣ ಶಿಕ್ಷೆಗೆ ಒಳಗಾಗುತ್ತೀರಿ ಮೇಲೆ ಎಚ್ಚರ! ಅಷ್ಟೇ ಅಲ್ಲ, ಬೀದಿ ನಾಯಿಗಳಿಂದ ತೊಂದರೆಗೊಳಗಾದ ವ್ಯಕ್ತಿಯ ವೈದ್ಯಕೀಯ ಚಿಕಿತ್ಸೆಯ ಖರ್ಚುವೆಚ್ಚವನ್ನೂ ನೀವೇ ಬರಿಸತಕ್ಕದ್ದು ಎಂದು ಸರ್ವೋಚ್ಚ ನ್ಯಾಯಾ ಲಯ ತೀರ್ಪು ಹೊರಡಿಸಿದೆ.
ಇಂಥದ್ದೊಂದು ತೀರ್ಪು ಹೊರಬೀಳುತ್ತಿದ್ದಂತೆಯೇ ಈ ವಿಚಾರದ ಕುರಿತು ಪರ-ವಿರೋಧದ ಚರ್ಚೆಗಳು ಪ್ರಾರಂಭವಾಗಿವೆ. ಬೀದಿನಾಯಿಯಂಥ ಮೂಕಪ್ರಾಣಿ ಗಳು ಹಸಿವಿನಿಂದ ಬಳಲಿ ಹೀಗೆ ದಾಳಿ ಮಾಡುತ್ತಿದ್ದು, ಅವುಗಳ ಸೂಕ್ತ ಸಂರ ಕ್ಷಣೆಯ ಬಗೆಗೆ ಕ್ರಮ ಕೈಗೊಳ್ಳಬೇಕೆಂಬ ಕೂಗು ಪ್ರಾಣಿ ಪ್ರಿಯರಿಂದ ಎದ್ದಿದೆ. ಅದರ ಬೆನ್ನಲ್ಲೇ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅದನ್ನು ಅಸವಾಗಿಸಿಕೊಂಡ ಸಾರ್ವಜನಿಕರು ‘ಬೀದಿ ನಾಯಿಗಳ ನಿಯಂತ್ರಣ’ ಕೈಗೊಳ್ಳದ ಸರಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸು ತ್ತಿದ್ದಾರೆ.
೨೦೧೯ರ ಸಮೀಕ್ಷೆಯ ಪ್ರಕಾರ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಂಖ್ಯೆ ಸುಮಾರು 4 ಲಕ್ಷ ಎಂದು ತಿಳಿದು ಬಂದಿದೆ. 4 ಲಕ್ಷ
ನಾಯಿಗಳಿಗೆ ಸುಮಾರು ೨ಲಕ್ಷ ಟನ್ ಅಷ್ಟು ಆಹಾರ ಬೇಕಾಗುತ್ತದೆ. ಅಷ್ಟು ಕಸಗಳು ನಗರದಲ್ಲಿ ಸಿಗುತ್ತಿರುವುದರಿಂದ ಬೀದಿ ನಾಯಿಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಯಾವುದೇ ಕಾರಣಕ್ಕೂ ನಾಯಿಗಳ ಸಂತತಿಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಪ್ರಾಣಿ ರಕ್ಷಣಾ ಸಂಸ್ಥೆಯೊಂದರ ಕೀರ್ತನ್.
ಈ ಹಿಂದೆಯೂ ಬೀದಿ ನಾಯಿಗಳ ನಿಯಂತ್ರಣಕ್ಕೆ ಸರಕಾರಗಳು ಅನೇಕ ಕ್ರಮ ಕೈಗೊಂಡಿದ್ದವು. ಆದರೇ ನಂತರದ ದಿನಗಳಲ್ಲಿ ಸರಕಾರ ಅನುಸರಿಸಿದ ಮಾರ್ಗ ಗಳ ಬಗೆಗೆ ಸಾರ್ವಜನಿಕ ವಲಯದಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಯಲ್ಲಿ, ಅವನ್ನು ಅಲ್ಲಿಗೇ ಕೈಬಿಡಲಾಯಿತು. ಇಂಥ ಕ್ರಮಗಳು ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲೂ ಜಾರಿಗೊಂಡಿದ್ದವು.
ನೇಣಿಕ್ಕುವುದು
ಬೀದಿ ನಾಯಿಗಳ ನಿಯಂತ್ರಣ ಕ್ರಮಗಳಲ್ಲಿ ನಾಯಿಗೆ ನೇಣು ಹಾಕಿ ಸಾಯಿಸುವುದು ಒಂದು! ಬೀದಿಯಲ್ಲಿ ಓಡಾಡಿಕೊಂಡಿದ್ದ ನಾಯಿಗಳನ್ನು ಗುರುತಿಸಿ ಪಾಲಿಕೆಯ ಸಿಬ್ಬಂದಿ ಬಂದು ಅದರ ಕತ್ತಿಗೆ ಎರಡು ತಂತಿಗಳ ಕುಣಿಕೆ ಹಾಕಿ, ಲೈಟು ಕಂಬದ ಬಳಿ ಎಳೆದು ಬಿಗಿದು ಕೊಲ್ಲಲಾಗುತ್ತಿತ್ತು. ನಡು ಬೀದಿಗಳಲ್ಲಿ ನಾಯಿಗಳನ್ನು ದಾರುಣವಾಗಿ ಕೊಲ್ಲುತ್ತಿರುವುದು ಸರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿ ಅದನ್ನು ನಿಲ್ಲಿಸಲಾಯಿತು.
ವಿಷ ಬೆರೆಸುವುದು
ನಂತರ ಕೆಲವು ದಿನಗಳ ಬಳಿಕ ಬೀದಿ ನಾಯಿಗಳ ಆಹಾರಕ್ಕೆ ಸೈನೆಡ್ ಬೆರೆಸಲು ಪ್ರಾರಂಭಿ ಸಲಾಯಿತು. ಸೈನೆಡ್ ಬೆರೆಸಿದ ಆಹಾರ ತಿಂದ ನಾಯಿಗಳು ಮನೆಗಳ ಮುಂದೆ ರಕ್ತಕಾರಿ ಸಾಯುತ್ತಿದ್ದವು. ಹೀಗೆ ದಾರುಣವಾಗಿ ಕೊಲ್ಲುತ್ತಿದ್ದುದಕ್ಕೂ ವ್ಯಾಪಕ ವಿರೋಧ ವ್ಯಕ್ತ ವಾಗಿತ್ತು. ಕೊನೆಗೆ ನಾಯಿಗಳನ್ನು ಕೊಲುವುದನ್ನು ಬಿಟ್ಟು ಅದರ ಸಂತತಿ ಕ್ಷೀಣಿಸುವ ಸಂತಾನಶಕ್ತಿ ಹರಣ ಮಾರ್ಗವನ್ನು ಆಯ್ಕೆ ಮಾಡಿಕೊಂಡರು.
ಬೀದಿ ನಾಯಿಗಳನ್ನು ಹಿಡಿದೊಯ್ದು, ಸಂತಾನಾಭಿವೃದ್ಧಿ ಆಗದಂತೆ ಶಸ್ತ್ರ ಚಿಕಿತ್ಸೆ ಗೊಳಪಡಿಸಿ ಬಳಿಕ ಮತ್ತೆ ಬೀದಿಗೆ ಬಿಡಲಾಗುತ್ತಿದೆ. ಆದರೆ, ಪಾಲಿಕೆ ವಾಹನ ಬರುತ್ತಿದ್ದಂತೆಯೇ ಅವು ತಪ್ಪಿಸಿಕೊಳ್ಳಲು ಕಲಿತಿವೆ. ಹೀಗಾಗಿ ಅದೂ ಅಂದು ಕೊಂಡಷ್ಟು ಯಶಸ್ವಿಯಾಗುತ್ತಿಲ್ಲ. ಹೀಗೆ, ಏನೇ ಪ್ರಯತ್ನ ಮಾಡಿದರು ನಾಯಿಗಳ ಸಂತತಿಯನ್ನು ನಿಯಂತ್ರಣ ಮಾಡುವಲ್ಲಿ ನಗರ ಪಾಲಿಕೆ ಆಗಲೀ, ಸರಕಾರಗಳಿಗಾಲೀ ಯಶಸ್ವಿಯಾಗಲಿಲ್ಲ.
ಧ್ವನಿ ಎತ್ತಿದ್ದ ಮನೇಕಾ
ಪ್ರಣಿದಯೆಗೆ ಸಂಬಂಧಿಸಿದಂತೆ ತೀವ್ರ ಕಾಳಜಿ ತೋರುವ ಬಿಜೆಪಿ ಸಂಸದೆ ಮನೇಕಾ ಗಾಂಧಿ ಈ ಹಿಂದೆ ಕೂಡ ಬೀದಿನಾಯಿಗಳ ಪರ ಧ್ವನಿ ಎತ್ತಿದ್ದರು. ೨೦೧೬ರಲ್ಲಿ ಪಕ್ಕದ ಕೇರಳ ರಾಜ್ಯದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾದಾಗ ಅವನ್ನು ಹಿಡಿದು ಕೊಲ್ಲ ಲಾಗುತ್ತಿತ್ತು. ಇದನ್ನು ತೀವ್ರವಾಗಿ ವಿರೋಽಸಿದ್ದ ಅಂದಿನ ಕೇಂದ್ರ ಮಂತ್ರಿ ಮನೇಕಾ, ‘ಹೀಗೆ ನಾಯಿಗಳನ್ನು ಕೊಲ್ಲುತ್ತ ಹೋದರೇ ಯಾವುದೇ ಪರಿಹಾರ ಸಿಗುವುದಿಲ್ಲ. ಅದೂ ಅಲ್ಲದೇ ಈ ಕೃತ್ಯ ಮಾನವೀಯತೆಗೆ ವಿರುದ್ಧವಾದ್ದು. ಸ್ಥಳೀಯ ನಾಯಿಗಳನ್ನು ಕೊಂದರೆ ಹೊರ ಪ್ರದೇಶಗಳಿಂದ ಬಂದು ಸೇರುತ್ತವೆ’ ಎಂದಿದ್ದರು.
ಕೊಲ್ಲುವುದರ ಬದಲಾಗಿ ಬೀದಿ ನಾಯಿಗಳನ್ನು ಸ್ಟೆರಿಲೈಸ್ ಮಾಡಿ ಬಿಡುವುದು ಉತ್ತಮ. ಈ ಹಿಂದೆ ದೆಹಲಿಯಲ್ಲಿ ಸುಮಾರು ೫ಲಕ್ಷ ಬೀದಿ ನಾಯಿಗಳ ಸಂತತಿ ಇತ್ತು. ಅವುಗಳನ್ನು ಸರಕಾರದಿಂದ ಲಸಿಕೆಗಳನ್ನು ನೀಡುವ ಮೂಲಕ ಈಗ ಕೇವಲ ೭೫ ಸಾವಿರಕ್ಕೆ ಬಂದಿದೆ ಎಂಬುದು ಮನೇಕಾ ಸಲಹೆ.
ಹೈಕೋರ್ಟ್ ಆದೇಶವೇನು?
ಬೀದಿ ನಾಯಿಗಳಿಂದ ನಾಗರಿಕರಿಗೆ ರಕ್ಷಣೆ ಒದಗಿಸುವುದು ಸ್ಥಳೀಯ ಆಡಳಿತ ಸಂಸ್ಥೆಗಳ ಕರ್ತವ್ಯವೆಂದು ಹೈಕೋರ್ಟ್ ಈಗಾಗಲೇ ಆದೇಶ ನೀಡಿದೆ. ೨೦೧೮ರ ನವೆಂಬರ್ ೨೯ರಂದು ಬೀದಿನಾಯಿ ದಾಳಿಯಿಂದ ಯೂಸುಬ್ ಎಂಬುವರ ೨೨ ತಿಂಗಳ ಮಗು ಸಾವನ್ನಪ್ಪಿತ್ತು. ಈ ಸಂಬಂಧ ತೀರ್ಪು ನೀಡಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಮೃತ ಮಗುವಿನ ಕುಟುಂಬಸ್ಥರಿಗೆ ೧೦ ಲಕ್ಷ ಪರಿಹಾರ ನೀಡಬೇಕು. ಮತ್ತು ೨೦ ಸಾವಿರ ಕಾನೂನು ಹೋರಾಟದ ವೆಚ್ಚ ಭರಿಸುವಂತೆ ಬೆಳಗಾವಿ ಜಿ ಪಂಚಾಯಿತಿಗೆ ಹೈಕೋರ್ಟ್ ನಿರ್ದೇಶಿಸಿತ್ತು.
ಪ್ರಾಣಿ ಕಲ್ಯಾಣದ ಹಣ ಎಲ್ಲಿ ಹೋಗುತ್ತಿದೆ?
ಕೇಂದ್ರ ಸರಕಾರ ಹಾಗಾ ರಾಜ್ಯ ಸರಕಾರ ಪ್ರಾಣಿಗಳ ಸಂರಕ್ಷಣೆಗಾಗಿ ಪ್ರತಿವರ್ಷ ನೀಡುವ ಅನುದಾನ ಎಲ್ಲಿ ಹೋಗುತ್ತಿದೆ. ಸರಕಾರದಿಂದ ಬರುವ ಅನುದಾನದಿಂದ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಣ ಮಾಡಬಹುದಾಗಿದೆ. ಆದರೇ ಪ್ರಾಣಿ ಕಲ್ಯಾಣ ಮಂಡಳಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಕಾಣಿಸುತ್ತಿಲ್ಲ.
೪ ಲಕ್ಷ ಬೀದಿ ನಾಯಿಗಳು
ಬಿಬಿಎಂಪಿ ಲೆಕ್ಕಾಚಾರದ ಪ್ರಕಾರ ನಗರದಲ್ಲಿ ಸುಮಾರು ೪ ಲಕ್ಷ ಬೀದಿ ನಾಯಿಗಳಿವೆ. ಜನವರಿಯಲ್ಲಿ ಸುಮಾರು ೧,೬೭೭ ಜನರ
ಮೇಲೆ ನಾಯಿಗಳು ದಾಳಿ ನಡೆಸಿವೆ. -ಬ್ರವರಿಯಲ್ಲಿ ೧,೧೩೫, ಮಾರ್ಚ್ಲ್ಲಿ ೧,೮೦೦, ಏಪ್ರಿಲ್ನಲ್ಲಿ ೧,೬೭೭, ಮೇ ತಿಂಗಳಿನಲ್ಲಿ
೧,೮೪೧, ಜೂನ್ನಲ್ಲಿ ೧,೧೪೦ ಹಾಗೂ ಜುಲೈನಲ್ಲಿ ೪೮೩ ಜನರ ಮೇಲೆ ನಾಯಿಗಳು ದಾಳಿ ಮಾಡಿವೆ.
೫೨ ಸಾವಿರ ಮಂದಿಗೆ ಕಡಿತ
ನಗರದಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ರಸ್ತೆಗಳಲ್ಲಿ ಓಡಾಡುವವರ ಮೇಲೆ ದಾಳಿ ಮಾಡುತ್ತಿವೆ. ಹೀಗಾಗಿ ಕೆಲ ನಗರಗಳಲ್ಲಂತೂ ಜನರು ಮನೆಯಿಂದ ಹೊರ ಬರುವುದಕ್ಕೆ ಭಯ ಪಡುವಂತಾಗಿದೆ. ಪ್ರತಿದಿನ ೭೦ ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸುತ್ತಿವೆ.
ಇನ್ನು ಒಂದೇ ತಿಂಗಳಲ್ಲಿ ಸುಮಾರು ೨ ಸಾವಿರಕ್ಕೂ ಹೆಚ್ಚು ಜನರ ಮೇಲೆ ನಾಯಿಗಳು ದಾಳಿ ಮಾಡಿವೆ. ೨೦೨೦ರಿಂದ ಇಲ್ಲಿಯ ವರೆಗೆ ೫೨ ಸಾವಿರಕ್ಕೂ ಹೆಚ್ಚು ಜನರಿಗೆ ನಾಯಿ ಕಚ್ಚಿವೆ. ೨೦೨೦ ಫೆಬ್ರವರಿಯಲ್ಲಿ ನಾಯಿ ಕಡಿತದಿಂದ ಒಬ್ಬ ಮಹಿಳೆ ಸಾವನ್ನಪ್ಪಿ ದ್ದರು ಎಂಬುದು ಉಲ್ಲೇಖಾರ್ಹ.
***
ಸಾರ್ವಜನಿಕರು ಆಹಾರ ನೀಡುವುದರ ಜತೆಗೆ ನಾಯಿಗಳಿಗೆ ಕೊಡಿಸಬೇಕಾದ ಲಸಿಕೆಗಳು, ಸಂತಾನ ಯೋಜನೆ ಮತ್ತು ಯಾವುದಾದರೂ ನಾಯಿ ತೊಂದರೆಯಲ್ಲಿದ್ದರೆ ಪ್ರಾಣಿದಯಾ ಸಂಘಗಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವ ಕೆಲಸಗಳನ್ನು ಹೆಚ್ಚು ಮಾಡಬೇಕು. ನಗರಪಾಲಿಕೆ ಕೂಡ ಬೀದಿ ನಾಯಿಗಳಿಗೆ ಲಸಿಕೆ ನೀಡುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಅವರೊಟ್ಟಿಗೆ ಸಾರ್ವಜನಿಕರು, ಪ್ರಾಣಿ ಪ್ರಿಯರು ಕೈ ಜೋಡಿಸಿದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
– ಕೀರ್ತನ್ ‘ಕೇರ್’ ಪ್ರಾಣಿ ರಕ್ಷಣಾ ಕೇಂದ್ರದ ಮ್ಯಾನೇಜರ್
ಪ್ರತಿಯೊಂದು ಪ್ರಾಣಿ-ಪಕ್ಷಿಗೂ ಭೂಮಿ ಮೇಲೆ ಬದುಕುವ ಹಕ್ಕಿದೆ. ಅದರ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಬ್ದಾರಿ ಎಂದು ಸಂವಿಧಾನದ ‘ಆರ್ಟಿಕಲ್ ಎಜಿ’ಯಲ್ಲಿ ತಿಳಿಸಿದೆ. ಸರ್ವೋಚ್ಚ ನ್ಯಾಯಾಲಯ ಹೊರಡಿಸಿರುವ ಆದೇಶದಿಂದ ಜನರು ಭಯಭೀತ ರಾಗಿ ಪ್ರಾಣಿಗಳ ರಕ್ಷಣೆಗೆ ಮುಂದಾಗುವುದಿಲ್ಲ. ಬೀದಿನಾಯಿಗಳ ವಿಚಾರದಲ್ಲಿ, ಜನನ ನಿಯಂತ್ರಣ ಕಾಯ್ದೆಯನ್ನು
ತರಲಾಗಿದ್ದು, ಚಿಕಿತ್ಸೆಯ ಬಳಿಕ ಅದೇ ಸ್ಥಳಗಳಿಗೆ ಬಿಡಬೇಕು ಎಂದು ತಿಳಿಸಲಾಗಿದೆ. ಒಂದು ಬೀದಿ ನಾಯಿ ಮನೆಯ ಮುಂದಿದ್ದರೆ ಒಬ್ಬ ಸೆಕ್ಯುರಿಟಿ ಇದ್ದಹಾಗೆ. ಎಲ್ಲೋ ಒಂದೆರಡು ಸ್ಥಳಗಳಲ್ಲಿ ಆಗಿರುವ ಘಟನೆಯನ್ನು ಪರಿಗಣಿಸಿ, ಎಲ್ಲೆಡೆ ಬೀದಿನಾಯಿಗಳ ಹಾವಳಿ ಎಂದು ಬಿಂಬಿಸಲು ಕೆಲವು ಕಾಣದ ಶಕ್ತಿಗಳು ಕೆಲಸ ಮಾಡುತ್ತಿವೆ.
– ಪ್ರಸನ್ನ ಕುಮಾರ್ ಪ್ರಾಣಿ ಪ್ರಿಯ
ಪ್ರಾಣಿಯಾಗಲಿ, ಮನುಷ್ಯನಾಗಲಿ ಹಸಿದಾಗ ಅಕ್ರೋಶಗೊಳ್ಳುವುದು ಸರ್ವೇ ಸಾಮಾನ್ಯ. ಸಾರ್ವಜನಿಕರು ಬೀದಿ ನಾಯಿಗಳಿಗೆ ಅನ್ನ ಆಹಾರವನ್ನು ನೀಡುತ್ತಿರುವುದರಿಂದ ಕೊಂಚ ನೆಮ್ಮದಿ ಯಿಂದಿವೆ. ಸಾರ್ವಜನಿಕರು ಕೇವಲ ಆಹಾರ ನೀಡಿದರೆ
ಸಾಲದು, ತಮ್ಮ ಮನೆಯ ಬಳಿ ಇರುವ ಬೀದಿ ನಾಯಿಗಳಿಗೆ ಲಸಿಕೆ ಕೊಡಿಸಿ ಸಂರಕ್ಷಿಸಲು ಮುಂದಾಗಬೇಕು. ಎಲ್ಲದಕ್ಕೂ
ಸರಕಾರವನ್ನೇ ಕಾಯುತ್ತ ಕೂರಲು ಸಾಧ್ಯವಿಲ್ಲ. ಸವೋಚ್ಚ ನ್ಯಾಯಾಲಯ ಈ ರೀತಿಯ ಜವಾಬ್ದಾರಿಯನ್ನು ಸಾರ್ವಜನಿಕರ
ನೀಡುವುದು ಅನುಕೂಲವಾಗುತ್ತದೆ.
– ಸಂಜೀವ್ ‘ಪ್ರಾಣಿ ಪ್ರಪಂಚ’ಸಾಕು ಪ್ರಾಣಿಗಳ ಕೇಂದ್ರ ಸಂಸ್ಥಾಪಕ