ವಂಚಕರಿಗೆ ದುರ್ಬಲ ಕಾನೂನಿನ ಲಾಭ | ಹಳ್ಳಿಗಳಲ್ಲಿ ಪ್ರಾಕ್ಸೀಸ್
ಬಾಲಕೃಷ್ಣ ಎನ್. ಬೆಂಗಳೂರು
ನಕಲಿ ವೈದ್ಯರ ಹಾವಳಿ ತಡೆಗಟ್ಟಲು ಸರಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಅಮಾಯಕರ ಜೀವದ ಜತೆ ಚೆಲ್ಲಾಟವಾಡುತ್ತಿರುವ ನಕಲಿ ವೈದ್ಯರು ರಾಜ್ಯಾದ್ಯಂತ ಬೇರು ಬಿಟ್ಟಿದ್ದಾರೆ.
ಪ್ರಸ್ತುತ ಮಾಹಿತಿ ಪ್ರಕಾರ ೧,೪೩೬ ನಕಲಿ ವೈದ್ಯರು ಇದ್ದಾರೆ ಎನ್ನಲಾಗುತ್ತಿದೆ. ಆದರೆ, ಇಂಥವರ ಸಂಖ್ಯೆ ದುಪ್ಪಟ್ಟಾದರೂ ಅಚ್ಚರಿಯಿಲ್ಲ ಎನ್ನುತ್ತಿರುವ ಆರೋಗ್ಯ ಇಲಾಖೆ ಮೂಲಗಳು, ದುರ್ಬಲ ಕಾನೂನಿನಿಂದಾಗಿ ಅವರನ್ನು ಮಟ್ಟ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿವೆ.
ನಕಲಿ ವೈದ್ಯರ ಹಾವಳಿ ನಿಯಂತ್ರಣಕ್ಕೆ ಕಾನೂನು ಇದೆ. ಆದರೆ, ಅದು ಕಾಗದದ ಹುಲಿಯಾಗಿ ಉಳಿದುಕೊಂಡಿದೆ. ಇದರ ದುರ್ಲಾಭ ಪಡೆಯುತ್ತಿರುವ ವಂಚಕರು ಕಾನೂನುಬಾಹಿರವಾಗಿ ಚಿಕಿತ್ಸೆ ನೀಡುತ್ತಾ ಜನರ ಜೀವ ತೆಗೆಯುತ್ತಿದ್ದಾರೆ. ಇಂಥ ನಯವಂಚಕರ ನಿಯಂತ್ರಣಕ್ಕೆ ಸರಕಾರ ‘ಕರ್ನಾಟಕ
ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ’ ರಚಿಸಿದೆ.
ಇದು ಸ್ವಾಯತ್ತ ಸಂಸ್ಥೆಯಾಗಿದ್ದರೂ ಕಠಿಣ ಕ್ರಮ ಕೈಗೊಳ್ಳುವ ಪರಮಾಧಿಕಾರ ಬಲ ಮಾತ್ರ ಇಲ್ಲ. ಇಂಥ ನಯವಂಚಕರ ನಿಯಂತ್ರಣಕ್ಕೆ ಸರಕಾರ ‘ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿ’ ರಚಿಸಿದೆ. ಇದು ಸ್ವಾಯತ್ತ ಸಂಸ್ಥೆಯಾಗಿದ್ದರೂ ಕಠಿಣ ಕ್ರಮ ಕೈಗೊಳ್ಳುವ ಪರಮಾಽಕಾರ ಬಲ ಮಾತ್ರ ಇಲ್ಲ.
ಕಾನೂನು ಏನಿದೆ?: ಈಗಿರುವ ಕಾನೂನು ಪ್ರಕಾರ ಸಾರ್ವಜನಿಕರು ದೂರು ನೀಡಿದಂತಹ ನಕಲಿ ವೈದ್ಯರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವು
ದಷ್ಟೇ ಮಂಡಳಿಗಿರುವ ಅಧಿಕಾರ. ತನಗೆ ಬಂದ ದೂರುಗಳನ್ನು ಸಂಬಂಧಪಟ್ಟ ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿಗಳು, ಆರೋಗ್ಯ ಮತ್ತು
ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ವರ್ಗಾಯಿಸಿ, ತನಿಖೆ ನಡೆಸುವಂತೆ ಸೂಚಿಸುತ್ತದೆ. ಜಿಲ್ಲಾ ಮಟ್ಟದಲ್ಲಿನ ಅಧಿಕಾರಿಗಳು ಪೊಲೀಸರ ನೆರವು ಪಡೆದು ನಕಲಿ ವೈದ್ಯರ ಆಸ್ಪತ್ರೆ, ಕ್ಲಿನಿಕ್ಗಳ ಮೇಲೆ ದಾಳಿ ನಡೆಸಬೇಕು. ನಂತರ ಮಂಡಳಿಗೆ ವರದಿ ಸಲ್ಲಿಸಬೇಕು. ಆ ವರದಿ ಪ್ರಕಾರ ಕಾನೂನು ಕ್ರಮ ಕೈಗೊಳ್ಳ ಲಾಗುತ್ತದೆ.
ಪ್ರಭಾವಿಗಳ ರಕ್ಷಣೆ: ಪ್ರಭಾವಿಗಳು ಮತ್ತು ಸ್ಥಳೀಯರ ರಕ್ಷಣೆಯಲ್ಲಿ ವೃತ್ತಿ ನಿಭಾಯಿಸುತ್ತಿರುವ ಈ ವಂಚಕರು ಅಷ್ಟು ಸುಲಭವಾಗಿ ದಾಳಿಯ ಬಲೆಗೆ ಬೀಳುವುದಿಲ್ಲ. ಕೆಲವೊಮ್ಮೆ ಸ್ಥಳೀಯರೇ ಕಾರ್ಯಾಚರಣೆಗೆ ತೆರಳಿದ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಾರೆ. ಹಾಗಾಗಿ, ಅಧಿಕಾರಿಗಳು ನಕಲಿ ವೈದ್ಯರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲು ಹಿಂದೇಟು ಹಾಕುವಂತಾಗಿದೆ. ಕಠಿಣವಲ್ಲದ ಕಾನೂನು ನಕಲಿಗಳಿಗೆ ವರದಾನವಾಗಿದ್ದು, ಗ್ರಾಮೀಣ
ಪ್ರದೇಶಗಳನ್ನು ತಮ್ಮ ದುಷ್ಕೃತ್ಯದ ತಾಣಗಳ ನ್ನಾಗಿ ಮಾಡಿಕೊಂಡಿದ್ದಾರೆ. ಚಿಕಿತ್ಸೆ ಹೆಸರಿನಲ್ಲಿಮುಗ್ಧ ಜನರನ್ನು ಸುಲಿಗೆ ಮಾಡುತ್ತಿದ್ದಾರೆ.
ಮತ್ತೊಂದೆಡೆ, ಹೋಟೆಲ್ಗಳಲ್ಲಿ ವಾಸ್ತವ್ಯ ಹೂಡಿ ನರದೌರ್ಬಲ್ಯ, ಲೈಂಗಿಕ ಸಮಸ್ಯೆಗಳಿಗೆ ಔಷಧ ನೀಡುವ ನಕಲಿಗಳು ಜಾಸ್ತಿ ಇzರೆ. ಜಾಹೀರಾ
ತು ನೀಡುವ ಮೂಲಕ ಜನರನ್ನು ಮೋಸದ ಬಲೆಗೆ ಬೀಳಿಸಿಕೊಳ್ಳುತ್ತಿದ್ದಾರೆ.
ಮಧ್ಯವರ್ತಿ ಕೆಲಸ!: ಯಾವುದಾದರೂ ಸಾಮಾನ್ಯ ಪದವಿ ಓದಿ ಇಲ್ಲವೇ ಎಸ್ಎಸ್ಎಲ್ಸಿ, ಪಿಯುಸಿ ಮುಗಿಸಿದವರು ಪಟ್ಟಣದ ಖಾಸಗಿ ಆಸ್ಪತ್ರೆ, ಕ್ಲಿನಿಕ್, ನರ್ಸಿಂಗ್ ಹೋಂಗಳಲ್ಲಿ ಕೆಲಕಾಲ ಸಹಾಯಕರಾಗಿ ಕೆಲಸ ಮಾಡುತ್ತಾರೆ. ಅಲ್ಲಿ ಚುಚ್ಚುಮದ್ದು ನೀಡುವುದನ್ನು ಕಲಿತು, ಜ್ವರ, ಕೆಮ್ಮು, ಶೀತ, ನೆಗಡಿ, ವಾಂತಿ-ಭೇದಿಗೆ ಸಾಮಾನ್ಯವಾಗಿ ಕೊಡುವ ಔಷಧದ ಬಗ್ಗೆ ತಿಳಿದುಕೊಂಡು ಹಳ್ಳಿಗಳಿಗೆ ವೈದ್ಯರ ವೇಷದಲ್ಲಿ ಬರುತ್ತಾರೆ. ಹೀಗೆ ಬಂದವರು ತಾವು ಕೆಲಸ
ಮಾಡಿದ್ದ ಆಸ್ಪತ್ರೆಗಳೊಂದಿಗೆ ನಂಟು ಮುಂದು ವರಿಸಿ ಅಲ್ಲಿಗೆ ರೋಗಿಗಳನ್ನು ಕಳುಹಿಸುವ ಮಧ್ಯವರ್ತಿಗಳಾಗಿಯೂ ಕೆಲಸ ಮಾಡುತ್ತಾರೆ.
ನಿಯಂತಣಕ್ಕೆ ತಜ್ಞರ ಸಲಹೆಗಳು
? ಆರೋಗ್ಯ ಇಲಾಖೆ, ಪೊಲೀಸ್, ಖಾಸಗಿ ವೈದ್ಯರ ಸಂಘದ ಪ್ರತಿನಿಧಿಗಳನ್ನೊಳಗೊಂಡ ಕಾರ್ಯಪಡೆಯನ್ನು ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ರಚಿಸಬೇಕು.
? ಗ್ರಾಪಂನಿಂದ ಜಿಲ್ಲಾ ಮಟ್ಟದವರೆಗೆ ನಕಲಿ ವೈದ್ಯರ ವಿರುದ್ಧ ಸಾರ್ವಜನಿಕರು ದೂರು ನೀಡುವ ವ್ಯವಸ್ಥೆ ಜಾರಿಯಾಗಬೇಕು.
? ವೈದ್ಯರ ಪ್ರಾಕ್ಟೀಸ್ಗೆ ಪರವಾನಗಿ ಹಾಗೂ ವರ್ಷಕ್ಕೊಮ್ಮೆ ನವೀಕರಣ ಮಾಡುವಾಗ ದಾಖಲೆಗಳ ಪರಿಶೀಲನೆ.
? ಹೊರ ರಾಜ್ಯಗಳ ವೈದ್ಯ ಪ್ರಮಾಣ ಪತ್ರ ಪಡೆದು ಕರ್ನಾಟಕ ದಲ್ಲಿ ಪ್ರಾಕ್ಟೀಸ್ ಮಾಡುವವರ ಮೇಲೆ ಹೆಚ್ಚು ನಿಗಾ ವಹಿಸಬೇಕು.
? ನಕಲಿ ವೈದ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು. ಮುಂದೆ ಪ್ರಾಕ್ಟೀಸ್ ಮಾಡದಂತೆ ಅಜೀವ ನಿಷೇಧ ಹೇರಬೇಕು.
ನಿಯಂತಣಕ್ಕೆ ತಜ್ಞರ ಸಲಹೆಗಳು
? ಆರೋಗ್ಯ ಇಲಾಖೆ, ಪೊಲೀಸ್, ಖಾಸಗಿ ವೈದ್ಯರ ಸಂಘದ ಪ್ರತಿನಿಧಿಗಳನ್ನೊಳಗೊಂಡ ಕಾರ್ಯಪಡೆಯನ್ನು ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ರಚಿಸಬೇಕು.
? ಗ್ರಾಪಂನಿಂದ ಜಿಲ್ಲಾ ಮಟ್ಟದವರೆಗೆ ನಕಲಿ ವೈದ್ಯರ ವಿರುದ್ಧ ಸಾರ್ವಜನಿಕರು ದೂರು ನೀಡುವ ವ್ಯವಸ್ಥೆ ಜಾರಿಯಾಗಬೇಕು.
? ವೈದ್ಯರ ಪ್ರಾಕ್ಟೀಸ್ಗೆ ಪರವಾನಗಿ ಹಾಗೂ ವರ್ಷಕ್ಕೊಮ್ಮೆ ನವೀಕರಣ ಮಾಡುವಾಗ ದಾಖಲೆಗಳ ಪರಿಶೀಲನೆ.
? ಹೊರ ರಾಜ್ಯಗಳ ವೈದ್ಯ ಪ್ರಮಾಣ ಪತ್ರ ಪಡೆದು ಕರ್ನಾಟಕ ದಲ್ಲಿ ಪ್ರಾಕ್ಟೀಸ್ ಮಾಡುವವರ ಮೇಲೆ ಹೆಚ್ಚು ನಿಗಾ ವಹಿಸಬೇಕು.
? ನಕಲಿ ವೈದ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು. ಮುಂದೆ ಪ್ರಾಕ್ಟೀಸ್ ಮಾಡದಂತೆ ಅಜೀವ ನಿಷೇಧ ಹೇರಬೇಕು.