೯ ಖಾತೆಗಳ ಹೊತ್ತು ಒತ್ತಡದಲ್ಲಿರುವ ಸಿಎಂ
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ರಾಜ್ಯ ವಿಧಾನಸಭಾ ಚುನಾವಣಾ ಸಮೀಪಿಸುತ್ತಿರುವ ಸಂದರ್ಭದಲ್ಲಿ ಸರಕಾರದ ವರ್ಚಸ್ಸು ವೃದ್ಧಿಸಬೇಕಿರುವ ಪ್ರಮುಖ ಇಲಾಖೆಗಳೇ ಅನಾಥವಾಗಿವೆ !
ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಸೇವಾ, ಸೌಲಭ್ಯಗಳ ಮೂಲಕ ಜನರೊಂದಿಗೆ ನೇರವಾಗಿ ಸಂಪರ್ಕಿಸುವ ಪ್ರಮುಖ ಇಲಾಖೆಗಳಾದ ಆಹಾರ,
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಹಾಗೂ ಅರಣ್ಯ ಇಲಾಖೆಗಳಿಗೆ ಸಚಿವರೇ ಇಲ್ಲದೆ ಕಚೇರಿಗಳಲ್ಲಿ ಒಂದು ರೀತಿ ಶೂನ್ಯ ಆವರಿಸಿ ದಂತಾಗಿದೆ.
ದಿ. ಉಮೇಶ್ ಕತ್ತಿ ಅಗಲಿಕೆ ನಂತರ ಆಹಾರ ಮತ್ತು ಅರಣ್ಯ ಸಚಿವರ ಖಾತೆಗಳು ಮತ್ತು ಈಶ್ವರಪ್ಪ ರಾಜೀನಾಮೆ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಖಾತೆಗಳು ಈಗ ಸಿಎಂ ಬಸವರಾಜ ಬೊಮ್ಮಾಯಿ ಕೈಯಲ್ಲಿದೆ. ಆದರೆ ಮುಖ್ಯಮಂತ್ರಿ ಅವರು ಹಣಕಾಸು, ಡಿಪಿಎಆರ್, ಗುಪ್ತಚರ, ಸಂಪುಟ ವ್ಯವಹಾರ, ಬೆಂಗಳೂರು ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸೇರಿದಂತೆ ೬ ಇಲಾಖೆಗಳನ್ನು ತಮ್ಮಲ್ಲಿಟ್ಟು ಕೊಂಡಿದ್ದಾರೆ.
ಈ ಮೂರು ಖಾತೆಗಳೂ ಸೇರಿದರೆ ಅವರು ಒಟ್ಟು ೯ ಖಾತೆಗಳನ್ನು ನಿರ್ವಹಿಸುವಂತಾಗದೆ. ಈ ಮಧ್ಯೆ, ಮುಖ್ಯ ಮಂತ್ರಿ ಬೊಮ್ಮಾಯಿ ಅವರು ಸಂಸದೀಯ ಸಮಿತಿ ಸದಸ್ಯರಾದ ಯಡಿಯೂರಪ್ಪ ಅವರೊಂದಿಗೆ ಜನಸಂಕಲ್ಪ ಯಾತ್ರೆ ಆರಂಭಿಸಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಅವರು ಈ ಯಾತ್ರೆ ಮುಂದಿನ ಡಿಸೆಂಬರ್ ವರೆಗೂ ನಡೆಯಲಿದ್ದು ವಾರಕ್ಕೆ ಕನಿಷ್ಠ ಎಂದರೂ ಎರಡರಿಂದ ಮೂರು ದಿನಗಳವರೆಗೂ ಅವರು ಯಾತ್ರೆಯಲ್ಲಿ ಭಾಗವಹಿಸಬೇಕಾಗು ತ್ತದೆ. ಇಂಥ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಅವರು ೯ ಇಲಾಖೆಗಳಲ್ಲಿ ನಿರೀಕ್ಷಿತ ವೇಗ ಕಾಣದೇ ಕಡತಗಳ ವಿಲೇವಾರಿ ಪ್ರಕ್ರಿಯೆ ಆಮೆಗೆ ಸವಾಲು ಹಾಕುತ್ತಿವೆ. ಈ ಇಲಾಖೆಗಳನ್ನು ಅಽಕಾರಿಗಳು ನಿರ್ವಹಿಸಿದರೂ ಪ್ರಮುಖ ತೀರ್ಮಾನ ಮುಖ್ಯಮಂತ್ರಿ ಅವರಿಂದಲೇ ಆಗಬೇಕು.
ಆದರೆ ಪರಿಶೀಲನೆಗೆ ಸಮಯ ಸಿಗದೇ ಅಧಿಕಾರಿಗಳು, ಜನರು ಪರದಾಟಕ್ಕೆ ಸಿಲುಕಿದ್ದಾರೆ ಎಂದು ಇಲಾಖೆಗಳ ಅಧಿಕಾರಿಗಳೇ ಹೇಳಿದ್ದಾರೆ.
ಆಹಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಅರಣ್ಯ ಇಲಾಖೆಗಳು ಕಚೇರಿಯ ಕುಳಿತು ನಿರ್ವಹಣೆ ಮಾಡುವುದಲ್ಲ. ಬದಲಾಗಿ ನಿತ್ಯ ಸಾವಿರಾರು ಜನರ ಅಹವಾಲುಗಳನ್ನು ಕೇಳಿ ಪರಿಹರಿಸಬೇಕಿರುವುದು, ಹಾಗೆಯೇ ನೇರ ಆರ್ಥಿಕ ನೇರವು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಮುಂದಿನ ಚುನಾವಣೆ ವೇಳೆಗೆ ಸರಕಾರದ ಬಗ್ಗೆ ಉತ್ತಮ ಅಭಿಪ್ರಾಯ ಗಳಿಸಬೇಕಾದ ಇಲಾಖೆ. ಇಂಥ ಇಲಾಖೆಗಳಿಗೇ ಸಚಿವರಿಲ್ಲದೆ ಅನಾಥವಾದರೆ ಜನಾಭಿಪ್ರಾಯಗಳು ಸರಕಾರದ ಪರವಾಗಿ ಮೂಡುವುದೇ ಎನ್ನುವ ಪ್ರಶ್ನೆ ಸಹೋದ್ಯೋಗ ಸಚಿವರನ್ನೂ ಕಾಡುತ್ತಿದೆ.
ಆರ್ಡಿಪಿಆರ್ನಲ್ಲಿ ಪರದಾಟ: ಸುಮಾರು ೧೦ ನಿಗಮ, ಮಂಡಳಿ, ಸಣ್ಣ ವಿಭಾಗಗಳನ್ನು ಹೊಂದಿರುವ ಆರ್ಡಿಪಿಆರ್ ಇಲಾಖೆಯಲ್ಲಿ ಸುಮಾರು
೨೦ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿ ಇzರೆ. ಈ ಇಲಾಖೆ ಬಜೆಟ್ ಗಾತ್ರ ೧೫,೦೦೦ ಕೋಟಿಗೂ ಹೆಚ್ಚು. ಇಂಥ ಇಲಾಖೆಯಲ್ಲಿ ಸಚಿವರಿಲ್ಲದೆ ಜನರ ಗೋಳು
ಕೇಳತೀರದಂತಾಗಿದೆ. ಗ್ರಾಮಗಳಲ್ಲಿ ಪಿಡಿಒಗಳದೇ ಕಾರುಬಾರು, ಜಿಗಳ ಸಿಇಒಗಳು ಮಾಡಿದ್ದೇ ತೀರ್ಮಾನ. ಇದೆಲ್ಲವನ್ನೂ ಸಚಿವರು ತಿಂಗಳಿಗೊಮ್ಮೆ
ಪರಿಶೀಲಿಸಬೇಕು. ಜಿಗಳಿಗೆ ಭೇಟಿ ನೀಡಬೇಕು. ಮುಖ್ಯಮಂತ್ರಿ ಕನಿಷ್ಠ ಮೂರು ತಿಂಗಳಿಗೆ ಎರಡು ಬಾರಿ ಪ್ರಗತಿ ಪರಿಶೀಲಿಸಬೇಕು. ಆದರೆ ಇದ್ಯಾವುದು ಆಗುತ್ತಿಲ್ಲ.
ಅರಣ್ಯರೋಧನ: ಅರಣ್ಯ ಇಲಾಖೆಗೆ ಸರಕಾರದ ಅನುದಾನ ಕಡಿಮೆಯಾದರು ಜವಾಬ್ದಾರಿ ಹೆಚ್ಚು. ಇಲಾಖೆಯಲ್ಲಿ ೮೦೦೦ಕ್ಕೂ ಹೆಚ್ಚು ಅಽಕಾರಿ, ಸಿಬ್ಬಂದಿ ಇದ್ದಾರೆ. ಸುಮಾರು ೪೩ ಚ.ಕಿ.ಮೀಟರ್ ಅರಣ್ಯ ಪ್ರದೇಶ ಹೊಂದಿರುವ ಈ ಇಲಾಖೆಯಲ್ಲಿ ೩೨ ವನ್ಯಜೀವಿ ಸಂರಕ್ಷಣಾ ಪ್ರದೇಶ, ೫ ಹುಲಿ ಸಂರಕ್ಷಣಾ ಪ್ರದೇಶ, ೧೯ ಸಂರಕ್ಷಣಾ ಪ್ರದೇಶ ಹಾಗೂ ೫ ರಾಷ್ಟ್ರೀಯ ಉದ್ಯಾನಗಳಿವೆ. ದೇಶದ ಅತಿ ಹೆಚ್ಚು ಅನೆಗಳು, ಹುಲಿಗಳು ಮತ್ತು ಚಿರತೆ ಗಳಿರುವುದೇ ಕರ್ನಾಟಕದಲ್ಲಿ. ಇಂಥ ಇಲಾಖೆಯ ಆಗಹೋಗುಗಳನ್ನು ಸಚಿವರು ತಿಂಗಳಿಗೊಮ್ಮೆ ಹಾಗೂ ಮುಖ್ಯಮಂತ್ರಿ ಅವರು ಕನಿಷ್ಠ ಎರಡು ತಿಂಗಳೆ ಒಂದು ಬಾರಿಯಾದರೂ ಪರಿಶೀಲಿಸಬೇಕು. ಆದರೆ ಇಲ್ಲಿಯೂ ಅಂದುಕೊಂಡಂತೆ ನಡೆಯುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಬೆಂಗಳೂರು ಅದ್ವಾನ: ಸುಮಾರು ೮೨೫ಕ್ಕೂ ಅಽಕ ಚ.ಕಿ.ಮೀಟರ್ ವ್ಯಾಪ್ತಿಯಾ ಬೆಂಗಳೂರು ಮಹಾನಗರದ ರಾಜ್ಯದ ಒಟ್ಟಾರೆ ಆದಾಯದ ಶೇ.೬೫ ರಷ್ಟು ನೀಡುವ ಆಕ್ಷಯ ಪಾತ್ರೆ. ಇದನ್ನು ನಿರ್ವಹಿಸುವ ಬಿಬಿಎಂಪಿಯಲ್ಲಿ ಕಳೆದ ೨ ವರ್ಷಗಳಿಂದ ಜನಪ್ರತನಿಧಿಗಳಿಲ್ಲದೆ ಜನರ ಸಮಸ್ಯೆಗಳಿಗೆ ವೇದಿಕೆಯೇ ಇಲ್ಲದಂತಾಗಿದೆ. ಇದರ ಜತೆಗೆ ಆಗೊಮ್ಮೆ,ಹೀಗೆಮ್ಮೆ ಸಿಗಬಹುದು ಉಸ್ತುವಾರಿ ಸಚಿವರೂ ಇಲ್ಲದಂತಾಗಿದೆ. ಇದರೊಂದಿಗೆ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಜಲಮಂಡಳಿ, ಬಿಎಂಆರ್ ಡಿಎ ಸೇರಿದಂತೆ ಅನೇಕ ಸಂಸ್ಥೆಗಳೂ ನಗರದ ವ್ಯಾಪ್ತಿಯಲ್ಲಿವೆ. ಇದೆಲ್ಲವನ್ನು ಸಚಿವರು
ಆಗಾಗ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಬೇಕು. ಮುಖ್ಯಮಂತ್ರಿಗಳು ಕನಿಷ್ಠ ತಿಂಗಳಿಗೆ ೨ ಬಾರಿಯಾದರೂ ಪರಿಶೀಲಿಸಬೇಕು. ಆದರೆ ಇದು ಕೂಡ ನಿರೀಕ್ಷಿತ ರೀತಿಯಲ್ಲಿ ನಡೆಯದೆ ಬೆಂಗಳೂರಿನ ಸ್ಥಿತಿ ಅದ್ವಾನವಾಗಿದೆ ಎಂದು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ.
ಆಹಾರದಲ್ಲಿ ಹಾಹಾಕಾರ: ಪ್ರಮುಖವಾಗಿ ಆಹಾರ ಇಲಾಖೆ ಕಳೆದೊಂದು ತಿಂಗಳಿನಿಂದ ನಿಷ್ಕ್ರಿಯವಾದಂತಾಗಿದೆ. ತೂಕ ಮತ್ತು ಅಳತೆ ಇಲಾಖೆ ಸೇರಿದಂತೆ ಎರಡು ಇಲಾಖೆಯನ್ನು ಹೊಂದಿರುವ ಇದು ಪ್ರಮಖವಾದ ನಿಗಮವನ್ನೂ ಪಡೆದುಕೊಂಡಿದೆ. ಆದರೆ ಸುಮಾರು ೪೦೦೦ ಅಧಿಕಾರಿಗಳು ಮತ್ತು ಸಿಬ್ಬಂದಿ ಹೊಂದಿರುವ ಈ ಇಲಾಖೆಯಲ್ಲಿ ಸಚಿವರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸಬೇಕು. ಜತೆಗೆ ಮುಖ್ಯಮಂತ್ರಿ ಅವರು
ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರೂ ಪರಿಶೀಲನೆ ಮಾಡಬೇಕು. ಆದರೆ ಈ ಇಲಾಖೆಯಲ್ಲಿ ಅಕ್ಕಿ ಸಿಗುವುದಿರಲಿ. ಕಚೇರಿಗಳಲ್ಲಿ ಸರಿಯಾದ ಸ್ಪಂದನೆಯೇ ಸಿಗುತ್ತಿಲ್ಲ.
ಇಲ್ಲಿ ಕಾರ್ಡ್ ದಾರರಿಗೆ ಅಕ್ಕಿ ನೀಡುವುದಿರಲಿ, ಜೀವರಕ್ಷಣಾ ಶಸ ಚಿಕಿತ್ಸೆಗೆ ಅತ್ಯಗತ್ಯವಾಗಿರುವ ಬಿಪಿಎಲ್ ಕಾರ್ಡ್ ಗಳನ್ನೇ ವಿತರಿಸುತ್ತಿಲ್ಲ.
*
ಖಾಲಿ ಇರುವ ಖಾತೆಗಳಿಗೆ ಸಚಿವ ರನ್ನು ನೇಮಕ ಮಾಡಬೇಕು ಅಥವಾ ಖಾತೆಗಳನ್ನು ಇತರ ಸಚಿವರಿಗೆ ವಹಿಸುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಈ ಸಮಸ್ಯೆ ಸದ್ಯದ ನಿವಾರಣೆಯಾಗುವ ಸಾಧ್ಯತೆ ಇದೆ.
-ರವಿ ಸುಬ್ರಮಣ್ಯ
ಶಾಸಕರು
ಬಸವನಗುಡಿ ಕ್ಷೇತ್ರ