ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಕಾಂಗ್ರೆಸ್ ವರಿಷ್ಠರ ನಡೆಗೆ ಸ್ಥಳೀಯ ನಾಯಕರ ವಿರೋಧ
ಮುಂಚಿತವಾಗಿಯೇ ಟಿಕೆಟ್ ಘೋಷಣೆಯಿಂದ, ಪಕ್ಷಾಂತರ ಸಾಧ್ಯತರ
ಪಂಚರಾಜ್ಯ ಚುನಾವಣೆಯಲ್ಲಿ ಹೀನಾಯ ಸಾಧನೆ ಮಾಡಿರುವ ಕಾಂಗ್ರೆಸ್, ಫಲಿತಾಂಶ ಬಂದು ತಿಂಗಳು ಕಳೆದರೂ ಅದರ ಹೊಡೆತದಿಂದ ಹೊರಬರಲು ಸಾಧ್ಯವಾಗಿಲ್ಲ. ಅಂತಿಮ ಕ್ಷಣದಲ್ಲಿ ಅಭ್ಯರ್ಥಿಗಳ ಆಯ್ಕೆಯೇ ಸೋಲಿಗೆ ಕಾರಣ ಎನ್ನುವ ವಾದವನ್ನು ಹಲವು ನಾಯಕರು ಮಾಡುತ್ತಿರುವುದರಿಂದ ಕರ್ನಾಟಕದಲ್ಲಿ ಆರು ತಿಂಗಳ ಮೊದಲೇ ಅಭ್ಯರ್ಥಿ ಘೋಷಣೆ ಎನ್ನುವ ಹೊಸ ಪ್ರಯೋಗಕ್ಕೆ ಕಾಂಗ್ರೆಸ್ ಮುಂದಾಗಿದೆ.
ಕಳೆದ ವಾರ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿದ ಸಮಯದಲ್ಲಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು, ಅಭ್ಯರ್ಥಿಗಳ ಹೆಸರನ್ನು ಆರು ತಿಂಗಳ ಮೊದಲೇ ಘೋಷಿಸಬೇಕು ಎಂದು ಹೇಳಿದ್ದಾರೆ. ಇದಕ್ಕೆ ಪಕ್ಷದ ವರಿಷ್ಠರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಚುನಾವಣಾ ತಯಾರಿಗೆ ಈ ಪ್ರಯೋಗ ಸಹಾಯವಾಗಲಿದೆ ಎನ್ನುವ ಮಾತನ್ನು ಅನೇಕರು ಹೇಳಿದ್ದರೂ, ಸ್ಥಳೀಯ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಆರು ತಿಂಗಳು ಅಥವಾ ಚುನಾವಣೆ ಘೋಷಣೆಯಾಗುವ ಮೊದಲೇ ಅಭ್ಯರ್ಥಿಗಳನ್ನು ಘೋಷಿಸುವುದರಿಂದ ಪಕ್ಷ ಸಂಘಟನೆ, ಚುನಾವಣಾ ತಯಾರಿಗೆ ಅನುಕೂಲವಾಗುತ್ತದೆ. ಆದರೆ, ಇದರಿಂದ ಅನುಕೂಲಕ್ಕಿಂತ ಅನಾನು ಕೂಲವೇ ಹೆಚ್ಚು. ಈ ರೀತಿಯ ನಡೆಯುಂದ ಪಕ್ಷದಲ್ಲಿ ಸ್ಥಳೀಯ ಮಟ್ಟದಲ್ಲಿ ಬಂಡಾಯವೇಳುವ, ಪಕ್ಷಾಂತರ ಮಾಡುವ ಸಾಧ್ಯತೆಯೇ ಹೆಚ್ಚಿರುತ್ತದೆ ಎನ್ನುವ ಆತಂಕವನ್ನು ಅನೇಕರು ಹೊರಹಾಕಿದ್ದಾರೆ.
ಬಂಡಾಯದ ಬಿಸಿ: ಕೆಲ ಕ್ಷೇತ್ರಗಳನ್ನು ಹೊರತುಪಡಿಸಿ ಬಹುತೇಕ ಕ್ಷೇತ್ರಗಳಲ್ಲಿ ಎರಡಕ್ಕಿಂತ ಹೆಚ್ಚು ಆಕಾಂಕ್ಷಿ ಗಳು ಪಕ್ಷ ಸಂಘಟನೆಯಲ್ಲಿ ತೊಡಗಿಸಿ ಕೊಂಡಿರುತ್ತಾರೆ. ಟಿಕೆಟ್ ಸಿಗುತ್ತದೆ ಎನ್ನುವ ಕಾರಣಕ್ಕೆ ಕ್ಷೇತ್ರದಲ್ಲಿ ಸುತ್ತಿ, ಸಂಘಟನೆ ಮಾಡುತ್ತಿರುತ್ತಾರೆ. ಅಂತಿಮ ವಾಗಿ ಒಬ್ಬರಿಗೆ ಟಿಕೆಟ್ ಸಿಕ್ಕಾಗ ಇತರರಿಗೆ ಬೇಸರವಾದರೂ, ಬೇರೆ ದಾರಿಯಿಲ್ಲದೇ ಸುಮ್ಮನಾಗುತ್ತಾರೆ. ಒಂದು ವೇಳೆ ಬಂಡಾಯವಾಗಿ ಸ್ಪರ್ಧಿಸಿದರೂ ಚುನಾವಣೆ ಹತ್ತಿರದಲ್ಲಿರುವು ದರಿಂದ ಅಧಿಕೃತ ಅಭ್ಯರ್ಥಿಗೆ ಹೆಚ್ಚು ಸಮಸ್ಯೆಯಾಗುವುದಿಲ್ಲ. ಆದರೆ, ಚುನಾವಣೆಗೆ ಘೋಷಣೆಗೆ ಮೊದಲೇ ಅಭ್ಯರ್ಥಿಗಳ ಘೋಷಣೆ ಮಾಡಿದರೆ, ಇನ್ನುಳಿದ ಆಕಾಂಕ್ಷಿಗಳು ಪಕ್ಷಾಂತರ ಮಾಡುವ ಇಲ್ಲವೇ ಪಕ್ಷೇತರವಾಗಿ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿರುತ್ತದೆ.
ಇದರಿಂದಾಗಿ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ ಎನ್ನುವ ವಿಶ್ಲೇಷಣೆಗಳು ಕೇಳಿಬಂದಿದೆ. ಕೆಪಿಸಿಸಿ ಮೂಲಗಳ ಪ್ರಕಾರ, ಆರು ತಿಂಗಳ ಮೊದಲೇ ಟಿಕೆಟ್ ಘೋಷಣೆ ಎಂದು ನಾಯಕರು ಹೇಳಿದರೂ, ಹಲವು ಕ್ಷೇತ್ರದಲ್ಲಿ ಇದು ಸಾಧ್ಯವಿಲ್ಲ. ಆದ್ದರಿಂದ ಟಿಕೆಟ್ ವಿಷಯದಲ್ಲಿ ಗೊಂದಲವಿಲ್ಲದ ಕೆಲವು ಕ್ಷೇತ್ರದಲ್ಲಿ ಆರಂಭದಲ್ಲಿಯೇ ಘೋಷಿಸಿದರೂ, ಹಲವು ಕ್ಷೇತ್ರಗಳಲ್ಲಿ ಅಂತಿಮ ಹಂತದಲ್ಲಿಯೇ ಟಿಕೆಟ್ ವಿಷಯದಲ್ಲಿ ಸ್ಪಷ್ಟತೆ ಸಿಗಲಿದೆ.
ಪಕ್ಷಾಂತರದ ಆತಂಕದಲ್ಲಿ ಸ್ಥಳೀಯ ನಾಯಕರು
ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಹೇಳುತ್ತಿರುವಂತೆ ಆರು ತಿಂಗಳ ಮೊದಲೇ ಟಿಕೆಟ್ ಘೋಷಿಸಿದರೆ, ಟಿಕೆಟ್ ಸಿಗದವರು ಪಕ್ಷಾಂತರ
ಮಾಡುವ ಸಾಧ್ಯತೆಯಿದೆ. ಅದರಲ್ಲಿಯೂ ರಾಜ್ಯದಲ್ಲಿ ಈ ಬಾರಿ ಆಪ್ ಪಕ್ಷವೂ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವುದರಿಂದ, ಇಲ್ಲಿ ಟಿಕೆಟ್
ಸಿಗದಿದ್ದರೆ ಅಲ್ಲಿ ಗಾಳ ಹಾಕುವ ಸಾಧ್ಯತೆಯಿದೆ. ಇದರಿಂದ ಕೇವಲ ನಾಯಕರು ಮಾತ್ರ ಹೋಗುವುದಲ್ಲದೆ, ಅವರೊಂದಿಗೆ ಪಕ್ಷದ ಕಾರ್ಯಕರ್ತರೂ
ಹೋಗುತ್ತಾರೆ. ಇದು ಇತರೆ ಪಕ್ಷ ಗಳ ಪ್ರಬಲ ಎದುರಾಳಿಗಳಿಗೆ ಲಾಭ ತಂದುಕೊಡಬಹುದು ಎಂಬ ಆತಂಕವನ್ನು ಹಲವು ನಾಯಕರು ಹೊರಹಾಕಿದ್ದಾರೆ.
ಲಾಭವೇನು?
೬ ತಿಂಗಳ ಸಮಯಾವಕಾಶ ಸಿಕ್ಕರೆ ಸಂಘಟನೆಗೆ ಅನುಕೂಲ ಪ್ರತಿ ಹಳ್ಳಿಗೂ ಭೇಟಿ ನೀಡಲು ಅಭ್ಯರ್ಥಿಗೆ ಅವಕಾಶ ಮತದಾರರೊಂದಿಗೆ ಬೆರೆಯುವುದಕ್ಕೆ ಸಮಯ ಸಿಗಲಿದೆ ಅಂತಿಮ ಕ್ಷಣದಲ್ಲಿ ಟಿಕೆಟ್ ಘೋಷಿಸಿದರೆ, ಕಾರ್ಯಕರ್ತರಿಗೂ ಅನಾನುಕೂಲ.
ನಷ್ಟವೇನು?
ಟಿಕೆಟ್ ಸಿಗಲಿಲ್ಲವೆಂದು ಪಕ್ಷಾಂತರವಾಗುವ ಸಾಧ್ಯತೆ ಟಿಕೆಟ್ ಘೋಷಣೆಯಾದರೆ, ಅಭ್ಯರ್ಥಿಯೊಬ್ಬರೇ ಕೆಲಸ ಮಾಡಬೇಕಾದ ಅನಿವಾರ್ಯತೆ
ಆರು ತಿಂಗಳ ಮೊದಲೇ ಘೋಷಿಸಿದ ಅಭ್ಯರ್ಥಿ ಅಂತಿಮ ಕ್ಷಣದಲ್ಲಿ ಹಿಂದೆ ಸರಿದರೆ ಎನ್ನುವ ಆತಂಕ ಮತದಾನದ ಒಂದು ವಾರದ ಮೊದಲೇ, ಎಲ್ಲ ರೀತಿಯ ‘ಕಸರತ್ತು’ ನಡೆಯುವುರಿಂದ ಹೆಚ್ಚು ಪ್ರಯೋಜನವಿಲ್ಲ.