15 ಸಾಲುಗಳ ಶಾಸನ
ಜಿಲ್ಲೆಯಲ್ಲಿ ವಿಜಯನಗರ ಇತಿಹಾಸದ ಕುರುಹು
ರಂಗನಾಥ ಕೆ.ಮರಡಿ
ತುಮಕೂರು: ತಾಲೂಕಿನ ಹೊನ್ನೇನಹಳ್ಳಿಯಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಆಳಿದ ಕೃಷ್ಣದೇವ ರಾಯ ಮರಣ ಹೊಂದಿದೆ(ಅ.17) ನಿಖರವಾದ ದಿನಾಂಕವನ್ನು ಸ್ಪಷ್ಟಪಡಿಸುವ ಶಾಸನ ಪತ್ತೆಯಾಗಿದೆ.
ಕ್ರಿಸ್ತಶಕ 1336ರಲ್ಲಿ ಹಕ್ಕ,ಬುಕ್ಕರಿಂದ ಆರಂಭವಾದ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣ ದೇವರಾ ಯನ ಸಾವಿನ ಕುರಿತಾದ ನಿಖರತೆ ಇದುವರೆಗೂ ಇತಿಹಾಸಕಾರರಿಗೆ ಲಭ್ಯವಾಗಿರಲಿಲ್ಲ. ಹೊನ್ನೇನಹಳ್ಳಿ ಯಲ್ಲಿ ದೊರೆತಿರುವ ಈ ಶಾಸನದಲ್ಲಿ ಶಾಲಿವಾಹನ ಶಕ ವಿರೋಧಿ ನಾಮ ಸಂವತ್ಸರ 1452ರ ಕಾರ್ತಿಕ ಶುದ್ದ15 ಎಂದರೆ ಕ್ರಿಸ್ತಶಕ 1529ರ ಅಕ್ಟೋಬರ್ 17 ರಂದು ಶ್ರೀಕೃಷದೇವ ರಾಯ ಕಾಲವಾದ ದಿನವನ್ನು ನಮೂದಿಸಿದೆ.
15 ಸಾಲು ಶಾಸನ: 15 ಸಾಲುಗಳನ್ನು ಒಳಗೊಂಡಿರುವ ಶಾಸನದಲ್ಲಿ ಪ್ರಮುಖವಾಗಿ ಶುಭಮಸ್ತು, ಸ್ವಸ್ತಶ್ರೀ ವಿಜಯಾಭ್ಯುದಯ ಶಾಲಿ ವಾಹನ ಶಕ ವರುಷ 1452ನೇ ವಿರೋಧಿ ಸಂವತ್ಸರದ ಕಾರ್ತಿಕ ಶು. 15 ಶ್ರೀಮಂನ್ಮಹಾರಾಜಾಧಿರಾಜ, ರಾಜಪರ ಮೇಶ್ವರ ಶ್ರೀವೀರಪ್ರತಾಪ ಶ್ರೀ ವೀರಕೃಷ್ಣ ಮಹಾ ರಾಯರು ಯೀ ತಥಾ ತಿಥಿಯಲು ಅಸ್ತಮಯರಾಗಿ(ರ)ಲಾಗಿ, ಪೆನುಗುಂಡೆ ರಾಜ್ಯದ ಆನೆಬಿದ್ದಸರಿಯ ಸ್ತಳದ ಮರುಗಲು ನಾಡೊಳಗಣ ತುಮಕೂರು ಸೀಮೆಯಳಗಣ ಹೊಂನೇನಹಳ್ಳಿ ಗ್ರಾಮವನ್ನು ತುಮಕೂರು ಸೀಮೆ ಗೌಡ ಪ್ರಜೆಗಳು(ತಿಮ್ಮಣ್ಣ) ನಾಯಕರೂ, ಅವರ ಕಾರ್ಯಕರ್ತರಾದ ತುಮಕೂರು ವೀರ ಪ್ರಸಂನ ಹನುಮಂತವರ ಪೂಜೆಗೆ ಧಾರೆ ಎರೆದು ಎಂದು ತಿಳಿಸಲಾಗಿದೆ.
ಶಾಸನ ಹೇಗಿದೆ?
ಶಾಸನದ ಮೇಲ್ಬಾಗದಲ್ಲಿ ಶಂಖ, ಚಕ್ರಗಳ ನಡುವೆ ಆಂಜನೇಯನ ಉಬ್ಬು ಚಿತ್ರವಿದ್ದು,ಸೂರ್ಯ ಚಂದ್ರರ ಗುರುತುಗಳು ಇವೆ. ಶಿಲೆಯ ಹಿಂಭಾಗದಲ್ಲಿ ಮಾರುತಿಯ ಚಿತ್ರವಿದ್ದು, ಬಾಲದಲ್ಲಿ ಗಂಟೆಯಿದೆ. ಇದುವರೆಗಿನ ವಿಜಯನಗರ ಇತಿಹಾಸವನ್ನು ಕೆದಕಿದಾಗ ಶ್ರೀಕೃಷ್ಣದೇವರಾಯ ಮರಣ ದಿನವನ್ನು 1529 ಅಕ್ಟೋಬರ್ 17 ರಂದು ಸ್ಪಷ್ಟಪಡಿಸಿದಂತಾಗುತ್ತದೆ.
======
ಶಾಸನ ಸುಸ್ಥಿತಿಯಲ್ಲಿದೆ. ಹನುಮಂತ ದೇವರ ಚಿತ್ರವಿರುವ ಕಾರಣ,ಬಯಲು ಹನುಮಂತರಾಯ ಎಂಬ ಹೆಸರಿ ನಲ್ಲಿ ಈ ಶಾಸನಕ್ಕೆ ಪೂಜೆ ಸಲ್ಲಿಸಲಾಗು ತ್ತಿದೆ. ಇದು ಕ್ರಿಸ್ತಶಕ 1450ರ ಅಸುಪಾಸಿನಲ್ಲಿ ನಿರ್ಮಾಣಗೊಂಡಿರುವ ಗೋಪಾಲಕೃಷ್ಣ, ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿದೆ. ಇದರ ಮೇಲೆ ಹೆಚ್ಚಿನ ಅಧ್ಯಯನಗಳು ನಡೆದರೆ, ವಿಜಯನಗರದ ಅರಸರ ಕುರಿತ ಇನಷ್ಟು ನಿಖರ ಮಾಹಿತಿ ದೊರೆಯಬಹುದಾಗಿದೆ.
ಡಾ.ಕೆ.ಆರ್.ನರಸಿಂಹನ್, ಇತಿಹಾಸ ವಿದ್ವಾಂಸ.
ನಮ್ಮ ಊರಿನಲ್ಲಿ ವಿಜಯನಗರದ ಇತಿಹಾಸ ತಿಳಿಸುವ ಶಾಸನ ಸಿಕ್ಕಿರುವುದು ಹೆಮ್ಮೆಯ ಸಂಗತಿ. ಇದರ ಮೇಲೆ ಹೆಚ್ಚಿನ ಅಧ್ಯಯನ ನಡೆದರೆ ಅಧಿಕ ಇತಿಹಾಸ ತಿಳಿಸಯಲು ಸಹಕಾರಿಯಾಗುತ್ತದೆ.
ಪರಮೇಶ್, ಹೊನ್ನೇನಹಳ್ಳಿ ಗ್ರಾಮಸ್ಥ.
=======
ನನಗೆ ಶಾಸನಗಳು, ಗಣ್ಯರ ಸಮಾಧಿಗಳನ್ನು ವೀಕ್ಷಿಸುವುದು ಹವ್ಯಾಸ. ತುಮಕೂರಿನ ಹೊನ್ನೇನಹಳ್ಳಿಯಲ್ಲಿ ಹಿರಿಯ ನಟಿ ದಿವಂಗತ ಮಂಜುಳ ಅವರ ಸಮಾಧಿ ವೀಕ್ಷಿಸಲು ಬಂದಾಗ ಶಾಸನ ಕಣ್ಣಿಗೆ ಬಿತ್ತು. ನಾನು ಇತಿಹಾಸ ಕಾರರಿಗೆ ಮಾಹಿತಿ ನೀಡಿದೆ. ಇದರಿಂದ ಕೃಷ್ಣದೇವರಾಯನ ಮರಣ ದಿನಾಂಕ ತಿಳಿದುಬಂದಿರುವುದು ಸಂತಸವಾಗಿದೆ.
ಕೆ.ಧನಪಾಲ್ , ಬಿ.ಎಂ.ಟಿ.ಸಿ ಚಾಲಕ.