ವಿಶೇಷ ವರದಿ: ರಂಗನಾಥ ಕೆ.ಮರಡಿ ತುಮಕೂರು
ಕಳೆದ ವರ್ಷದಲ್ಲಿ ಕರೋನಾ ಕರಿನೆರಳಿನ ನಡುವೆಯೂ ೧೦೮ ಮಂದಿಯ ನೇತ್ರಗಳು ೨೧೬ ಅಂಧರ ಬಾಳಿಗೆ ಬೆಳಕಾಗಿವೆ. ಇಂತಹ ಮಾದರಿ ಕಾರ್ಯವನ್ನು ಹಲವು ವರ್ಷಗಳಿಂದ ಎನ್.ಎಸ್.ಐ ಫೌಂಡೇಶನ್ ಮುಖ್ಯಸ್ಥ ಡಾ.ಎನ್.ಎನ್.ಶ್ರೀಧರ್ ಅವರು ನಿಸ್ವಾರ್ಥದಿಂದ ನೆರವೇರಿಸುತ್ತಿದ್ದಾರೆ.
ಜಿಲ್ಲಾಸ್ಪತ್ರೆಯ ವೈದ್ಯರು, ಅಧಿಕಾರಿಗಳೊಂದಿಗಿನ ಸಹಕಾರದಿಂದ ೨೦೨೦-೨೧ರಲ್ಲಿ ಕೋವಿಡ್ ನಡುವೆಯೂ ಮೃತರ ಕಣ್ಣುಗಳನ್ನು ಸಂಗ್ರಹಿಸಿ ಕಣ್ಣಿಲ್ಲ ದವರಿಗೆ ಬೆಳಕಾಗುವ ಕಾರ್ಯಕ್ಕೆ ಎನ್. ಎಸ್.ಐ ಫೌಂಡೇಶನ್ ಹಗಲಿರುಳು ಸದ್ದಿಲ್ಲದೆ ಸೇವೆ ಮಾಡುತ್ತಿದೆ.
೩೦ ಮಂದಿ ದೇಹದಾನ: ಕಳೆದ ಒಂದು ವರ್ಷದಲ್ಲಿ ೩೦ ಮಂದಿ ದೇಹದಾನ ಮಾಡಲು ಹಾಗೂ ೩ ಸಾವಿರಕ್ಕೂ ಅಧಿಕ ಜನರು ನೇತ್ರದಾನ ಮಾಡಲು ಎನ್.ಎಸ್.ಐ ಫೌಂಡೇಶನ್ ನಲ್ಲಿ ನೋಂದಣಿ ಮಾಡಿ ಕೊಂಡಿದ್ದಾರೆ. ಹಲವು ಅರಿವು ಕಾರ್ಯಕ್ರಮ ಹಾಗೂ ಸರಿಯಾದ ಮಾಹಿತಿಯನ್ನು ಫೌಂಡೇಶನ್ ಜನರಿಗೆ
ನೀಡುತ್ತಿರುವುದರಿಂದ ಪ್ರತಿ ವರ್ಷ ನೇತ್ರದಾನ, ದೇಹದಾನ ಮಾಡುವವರ ಸಂಖ್ಯೆ ದ್ವಿಗುಣವಾಗುತ್ತಿದೆ. ಜಿಲ್ಲೆಯಲ್ಲದೆ ರಾಜ್ಯದ ಹಲವು ಜಿಯ ಜನರು ನೇತ್ರ ದಾನಕ್ಕೆ ನೋಂದಣಿ ಮಾಡಿಕೊಂಡಿರುವುದು ಶ್ಲಾಘನೀಯ ಎಂದು ಎನ್.ಎಸ್. ಐ ಫೌಂಡೇಶನ್ ಮುಖ್ಯಸ್ಥ ಡಾ.ಎನ್. ಎನ್.ಶ್ರೀಧರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೇಹ, ನೇತ್ರದಾನ ಮಾಡಲು ಸಂಪರ್ಕಿಸಿ ನೇತ್ರದಾನ ಮತ್ತು ದೇಹದಾನ ಮಾಡುವವರು ಡಾ.ಎನ್.ಎನ್. ಶ್ರೀಧರ್, ಮುಖ್ಯಸ್ಥರು, ಎನ್.ಎಸ್ .ಐ ಫೌಂಡೇಶನ್, ಮತ್ತು ಎನ್.ಎಸ್.ನಾಗದೀಶ್, ತುಮಕೂರು (ಮೊ:೯೫೯೦೦೬೬೦೬೬) ಇವರನ್ನು ಸಂಪರ್ಕಿಸ ಬಹುದಾಗಿದೆ.
***
ಸತ್ತ ನಂತರ ಮಣ್ಣಾಗುವ ದೇಹ ಇನ್ನೊಬ್ಬರಿಗೆ ಉಪಯೋಗವಾಗುವ ದೃಷ್ಟಿಯಿಂದ ದೇಹ ಮತ್ತು ನೇತ್ರವನ್ನು ಎನ್.ಎಸ್.ಐ ಫೌಂಡೇಶನ್ಗೆ ದಾನ ನೀಡಿದ್ದೇನೆ.
-ಜಗದೀಶ್ ತಡಕಲೂರು
ಎಂಜಿನಿಯರ್, ಬೆಂಗಳೂರು