೨೦೧೦-೧೬ ಅವಧಿಯ ಮನೆಗಳು ರದ್ದು
ಕಟ್ಟಲಾಗದವರು ಹಣ ಪಾವತಿಸಲು ಸೂಚನೆ
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಕಾಂಗ್ರೆಸ್ ಅವಧಿಯಲ್ಲಿ ಆಯ್ಕೆಯಾಗಿದ್ದ ವಸತಿ ಯೋಜನೆಯ ಫಲಾನುಭವಿಗಳ ಮನೆಗಳನ್ನು ಹೊಸಕಿ ಹಾಕಲು ರಾಜ್ಯ ಸರಕಾರ ನಿರ್ಧರಿಸಿದೆ. ಹಿಂದಿನ ಕಾಂಗ್ರೆಸ್ ಅವಧಿಯ ಸರಕಾರದಲ್ಲಿ ಆಯ್ಕೆಯಾಗಿದ್ದ ಸುಮಾರು 1.50 ಲಕ್ಷಕ್ಕೂ ಹೆಚ್ಚು ಫಲಾನು ಭವಿಗಳ ಮನೆಗಳನ್ನು ರದ್ದುಗೊಳಿಸಲು ಸರಕಾರ ತೀರ್ಮಾನಿಸಿದೆ.
ಅಷ್ಟೇ ಅಲ್ಲ. ಅಪೂರ್ಣಗೊಂಡಿರುವ ಮನೆಗಳನ್ನು ಪೂರ್ಣಗೊಳಿಸಲು ಕೇವಲ ಒಂದು ತಿಂಗಳ ಗಡುವು ನೀಡಿದ್ದು, ಅಷ್ಟ ರೊಳಗೆ ಮನೆ ನಿರ್ಮಿಸಿಕೊಳ್ಳದವರಿಂದ ಹಣ ವಸೂ ಲಿಗೆ ನಿರ್ಧರಿಸಲಾಗಿದೆ. ಇನ್ನೂ ವಿಚಿತ್ರ ಎಂದರೆ, ಫಲಾನುಭವಿಗಳು ಮನೆ ಕಟ್ಟಲಾಗ ದಿದ್ದರೆ ಹಣ ವಾಪಸ್ ಕೊಡುವುದು ಮಾತ್ರವಲ್ಲ. ಆ ಹಣವನ್ನು ಬಡ್ಡಿ ಸಮೇತ ಸರ ಕಾರಕ್ಕೆ ಹಿಂತಿರುಗಿಸಬೇಕು ಎಂದು ಸರಕಾರ ಆದೇಶವನ್ನೇ ಹೊರಡಿಸಿದೆ. ಈ ಬಡ್ಡಿ ಸಹಿತ ಹಣ ವಸೂಲಿ ಮಾಡುವ ಜವಾಬ್ದಾರಿಯನ್ನು ಗ್ರಾಪಂಗಳ ಪಿಡಿಒಗಳಿಗೆ ವಹಿಸಲಾಗಿದೆ. ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಅನುಷ್ಠಾನ ಅಧಿಕಾರಿಗಳನ್ನು ಹೊಣೆ ಮಾಡಲಾ ಗಿದೆ ಎಂದು ಆದೇಶ ದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಇದರಿಂದಾಗಿ ಕಳೆದ ಎರಡು ವರ್ಷಗಳಿಂದ ಕೋವಿಡ್ ಮತ್ತು ಲಾಕ್ಡೌನ್ಗಳಿಂದ ತತ್ತರಿಸಿರುವ ಅನುಭವಿಗಳಿಗೆ ಸರಕಾರದ ಈ ಕಠಿಣ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ. ಏಕೆಂದರೆ ಎರಡು ವರ್ಷಗಳ ಅವಧಿಯಲ್ಲಿ ಫಲಾನುಭವಿಗಳು ಕೋವಿಡ್ ಆತಂಕದಲ್ಲೇ ಕಳೆದಿದ್ದಾರೆ. ಕೂಲಿ, ವ್ಯಾಪಾರ ಮತ್ತು ಇತರ ದುಡಿಮೆಗಳೇ ಇಲ್ಲದೆ ಆರ್ಥಿಕವಾಗಿ ತತ್ತರಿಸಿದ್ದಾರೆ. ಹೀಗಾಗಿ ಬಹುತೇಕ ಫಲಾನುಭವಿಗಳು ಇನ್ನೂ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಂತಹ ಸ್ಥಿತಿಯಲ್ಲಿ ಫಲಾನುಭವಿಗಳಿಗೆ ಸರಕಾರ ಹೆಚ್ಚುವರಿ ಸಮಯ ಮತ್ತು ಕೆಲವು ರಿಯಾ ಯಿತಿ ನೀಡದೆ ಏಕಾಏಕಿ ಮನೆ ರದ್ದುಗೊಳಿಸಿರುವುದು ಫಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬೆಟ್ಟ ಅಗೆದು ಇಲಿ ಹಿಡಿದರು!: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹಿಂದಿನ ಸರಕಾರದ ಸುಮಾರ 5 ಲಕ್ಷ ಫಲಾನುಭವಿಗಳು ಎಷ್ಟು ನೈಜ ಎನ್ನುವ ಬಗ್ಗೆ ತನಿಖೆ ನಡೆಸಿತ್ತು. ಇದಕ್ಕಾಗಿ ವಿಸಿಲ್ ಎನ್ನುವ ತಂತ್ರಾಂಶ ಅಳವಡಿಸಿತ್ತು. ಈ
ಪ್ರಯತ್ನದಿಂದ ಸರಕಾರಕ್ಕೆ ಸಿಕ್ಕಿದ್ದ ಅನರ್ಹ ಫಲಾನುಭವಿಗಳ ಸಂಖ್ಯೆ ಕೇವಲ 4 ಸಾವಿರ ಮಾತ್ರ. ಹೀಗಾಗಿ ಇದೊಂದು ವ್ಯರ್ಥ ಪ್ರಯತ್ನ ಎನ್ನುವಂತಾಗಿತ್ತು. ಈಗ ಫಲಾನುಭವಿಗಳನ್ನು ಕಡಿತಗೊಳಿಸಲು ಅನ್ಯ ದಾರಿಯಿಲ್ಲದೆ ಈ ಕಠಿಣ ಆದೇಶ ಹೊರಡಿಸ ಲಾಗಿದೆ ಎಂದು ಇಲಾಖೆ ಹಿರಿಯ ಅಽಕಾರಿಗಳು ಹೇಳಿದ್ದಾರೆ.