ಅಪರ್ಣಾ ಎ.ಎಸ್. ಬೆಂಗಳೂರು
ಎರಡು ವರ್ಷದಿಂದ ಉದ್ಘಾಟನೆಗೆ ಕಾಯುತ್ತಿರುವ ತರಬೇತಿ ಕೇಂದ್ರ
ಏಳು ಕೋಟಿ ವೆಚ್ಚದಲ್ಲಿ ೨೦೨೨ರಲ್ಲಿಯೇ ನಿರ್ಮಾಣ ಆರಂಭ
ದೇಶದಲ್ಲಿ ಸದ್ಯ ಒಲಿಂಪಿಕ್ಸ್ ಹವಾ ಜೋರಾಗಿದ್ದು, ಅದರಲ್ಲಿಯೂ ಒಂದೇ ಒಲಂಪಿಕ್ಸ್ನಲ್ಲಿ ಎರಡು ಪದಕ ಗೆದ್ದು, ಮೂರನೇ ಪದಕವನ್ನು ಕೂದಲೆಳೆ ಅಂತರದಲ್ಲಿ ಕಳೆದುಕೊಂಡ ಮನು ಭಾಕರ್ ಈಗ ದೇಶದ ಕೋಟ್ಯಂತರ ಜನರ ಮಾದರಿಯಾಗಿದ್ದಾರೆ. ಮನು ಭಾಕರ್ನಂತೆ ತಾನೂ ಶೂಟಿಂಗ್ನಲ್ಲಿ ಸಾಧನೆ ಮಾಡಬೇಕೆಂಬ ಕನಸನ್ನು ಹೊತ್ತ ಹಲವರಿದ್ದಾರೆ.
ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ವರ್ಷಗಳ ಹಿಂದೆಯೇ ಶೂಟಿಂಗ್ಗಾಗಿ ಪ್ರತ್ಯೇಕ ತರಬೇತಿ ಕೇಂದ್ರ ಆರಂಭಿಸಲು ನಿರ್ಧರಿಸಿ, ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಕಾಮಗಾರಿಯನ್ನು ನಡೆಸ ಲಾಗಿದೆ. ಆದರೆ ಕಾಮಗಾರಿ ಪೂರ್ಣಗೊಂಡು ವರ್ಷಗಳು ಕಳೆದಿದ್ದರೂ ಶೂಟರ್ಗಳಿಗೆ ತರಬೇತಿಗಾಗಿ ಮಾತ್ರ ಈ ಕ್ರೀಡಾಂಗಣ ಲಭ್ಯವಾಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಬಸವನಗುಡಿಯ ವಿಧಾನಸಭಾ ಕ್ಷೇತ್ರದಲ್ಲಿ ಬಿಬಿಎಂಪಿ ನಿರ್ಮಿಸಿದ ಕ್ರೀಡಾ ಸಂಕೀರ್ಣದಲ್ಲಿರುವ ಶೂಟಿಂಗ್ ತರಬೇತಿ ಕೇಂದ್ರಕ್ಕೆ ಕಳೆದ ಸರಕಾರದ ಅವದಿಯಲ್ಲಿಯೇ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ಪರಿಶೀಲಿಸಿ ‘ಸಾಂಕೇತಿಕ’ ಚಾಲನೆಯನ್ನು ನೀಡಿದ್ದರು. ಆದರೆ ಕೆಲವು ಕಾರ್ಯಗಳು ಬಾಕಿಯಿದಿದ್ದರಿಂದ ಅಧಿಕೃತವಾಗಿ ಉದ್ಘಾಟನೆಯಾಗಿರಲಿಲ್ಲ. ಇದೀಗ ಈ ಎಲ್ಲ ಕಾರ್ಯಗಳೂ ಮುಗಿದಿದ್ದರೂ ಉದ್ಘಾಟನೆಯನ್ನು ಮಾಡಿಲ್ಲ. ಇದೇ ಕಾರಣಕ್ಕೆ, ಸ್ಥಳೀಯ ಕ್ರೀಡಾಪಟುಗಳ ತರಬೇತಿಗೆ ಅವಕಾಶ ನೀಡುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ತರಬೇತಿ ಕೇಂದ್ರದ ಕಾಮಗಾರಿ ಪೂರ್ಣಗೊಂಡಿದ್ದರೂ ರಾಜಕೀಯ ಹಿತಾಸಕ್ತಿ ಹಾಗೂ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉದ್ಘಾಟನೆಯಾಗಿಲ್ಲ. ಈ ಬಗ್ಗೆ ಅಧಿಕಾರಿಗಳು ವಿಚಾರಿಸಿದರೆ, ಸೂಕ್ತರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿಲ್ಲ. ಕೋಟ್ಯಂತರ ರುಪಾಯಿ ಖರ್ಚು ಮಾಡಿ ಅಳವಡಿಸಿರುವ ಸಲಕರಣೆ ಗಳನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡದಿರುವುದರಿಂದ ಹಾಳಾಗುತ್ತಿವೆ ಎನ್ನುವ ಆತಂಕವನ್ನು ಅನೇಕರ ಪೋಷಕರು ವ್ಯಕ್ತಪಡಿಸಿದ್ದಾರೆ.
ಬೊಮ್ಮಾಯಿ ಅವಽಯಲ್ಲಿಯೇ ಕಾಮಗಾರಿ ಪೂರ್ಣ: ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ೨೦೨೨ರ ಡಿಸೆಂಬರ್ನಲ್ಲಿ ಈ ಕ್ರೀಡಾ ಸಂಕೀರ್ಣಕ್ಕೆ ಚಾಲನೆ ನೀಡಿದ್ದರು. ಏಳು ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮೂರು ಅಂತಸ್ತಿನ ಕ್ರೀಡಾ ಸಂಕೀರ್ಣದ ಕಟ್ಟಡದಲ್ಲಿ, ನೆಲ ಮಹಡಿಯನ್ನು ಶೂಟಿಂಗ್ ತರಬೇತಿಗಾಗಿ ಮೀಸಲಿರಿಸಲಾಗಿದ್ದು, ಶೂಟಿಂಗ್ ತರಬೇತಿಗಾಗಿಯೇ ಸುಮಾರು ಒಂದು ಕೋಟಿ ರುಪಾಯಿ ವೆಚ್ಚದಲ್ಲಿ ಸಿದ್ಧಪಡಿಸಲಾಗಿದೆ.
ಕೇಂದ್ರದ ಎಲ್ಲ ಕಾರ್ಯಪೂರ್ಣಗೊಂಡಿದ್ದರೂ, ಉದ್ಘಾಟನೆ ಮಾಡಲು ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ತರಬೇತಿಯೇ ನೀಡದಿದ್ದರೆ ಮನು ಬಾಕರ್ ಹೇಗಾಗುತ್ತಾರೆ?: ರಾಜ್ಯ, ಕೇಂದ್ರ ಸರಕಾರಗಳು ಪ್ರತಿಬಾರಿ ಒಲಿಂಪಿಕ್ಸ್, ಕಾಮನ್ ವೆಲ್ತ್ ಸಮಯದಲ್ಲಿ ಕ್ರೀಡೆಗಳ ಬಗ್ಗೆ ಆಸಕ್ತಿ ತೋರುತ್ತವೆ. ಆದರೆ ಸಣ್ಣ ಮಕ್ಕಳಿಗೆ ತರಬೇತಿ ನೀಡುವ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತವೆ. ಈ ರೀತಿಯಾದರೆ ಒಲಿಂಪಿಕ್ಸ್ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ, ದೇಶಕ್ಕೆ ಪದಕ ತಂದುಕೊಡಬೇಕು ಎಂದು ಕ್ರೀಡಾಪಟುಗಳಿಂದ ನಿರೀಕ್ಷೆ ಮಾಡಲು ಹೇಗೆ ಸಾಧ್ಯ ಎನ್ನುವ
ಪ್ರಶ್ನೆಯನ್ನು ಪೋಷಕರು ಕೇಳುತ್ತಿದ್ದಾರೆ.
ಪೋಷಕರ ಆಕ್ರೋಶ
ಬಿಬಿಎಂಪಿ ವತಿಯಿಂದ ನಿರ್ಮಾಣವಾಗಿರುವ ಈ ತರಬೇತಿ
ಕೇಂದ್ರದಲ್ಲಿ ೧೦ ಮೀಟರ್ ಏರ್ ಪಿಸ್ತೂಲ್ ಹಾಗೂ ೧೦
ಮೀಟರ್ ಏರ್ ರೈ-ಲ್ ಶೂಟಿಂಗ್ ತರಬೇತಿಗೆ ಅಗತ್ಯ
ಸಲಕರಣೆಗಳನ್ನು ನೀಡಲಾಗಿದೆ. ಈ ಕೇಂದ್ರದಲ್ಲಿ ಏರ್
ಪಿಸ್ತೂಲ್ ಶೂಟಿಂಗ್, ಏರ್ ರೈ-ಲ್ ಶೂಟಿಂಗ್ ತರಬೇತಿಗೆ
ಎಲ್ಲ ಸಲಕರಣೆಗಳಿವೆ. ಆದರೆ ಕೇಂದ್ರ ಉದ್ಘಾಟನೆಯಾಗಿಲ್ಲ
ಹಾಗೂ ತರಬೇತುದಾರರು ಲಭ್ಯವಿಲ್ಲ ಎನ್ನುವುದು
ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಖಾಸಗಿಯಾಗಿ ಶೂಟಿಂಗ್ ಕ್ರೀಡೆಯಲ್ಲಿ ತರಬೇತಿ
ಪಡೆಯಬೇಕು ಎಂದರೆ ಲಕ್ಷಾಂತರ ರುಪಾಯಿ
ಖರ್ಚಾಗುತ್ತದೆ. ಆದ್ದರಿಂದ ಮಧ್ಯಮ ಹಾಗೂ ಬಡ
ಕುಟುಂಬಗಳ ಮಕ್ಕಳಿಗೆ ಖಾಸಗಿ ತರಬೇತಿ ಪಡೆಯುವುದು
ಸಾಧ್ಯವಿಲ್ಲ. ಬಿಬಿಎಂಪಿ ವತಿಯಿಂದ ನಿರ್ಮಾಣವಾಗಿರುವ
ಶೂಟಿಂಗ್ ಕೇಂದ್ರದಲ್ಲಿ ತರಬೇತಿ ನೀಡುವಂತಾಗಬೇಕು. ಈ
ನಿಟ್ಟಿನಲ್ಲಿ ಅಽಕಾರಿಗಳು ಕ್ರಮವಹಿಸಬೇಕು.
– ವಸಂತಾ ಪೋಷಕರು