Wednesday, 1st February 2023

ನನ್ನ ಸ್ಪರ್ಧೆ ಬಗ್ಗೆ ಕೇಂದ್ರದ ಸಮಿತಿ ನಿರ್ಧರಿಸಬೇಕು: ಬಿ.ವೈ.ವಿಜಯೇಂದ್ರ

ಕೊಪ್ಪಳ: ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿ, ಶಿಕಾರಿಪುರ ಸ್ಪರ್ಧೆ ವಿಚಾರದಲ್ಲಿ ಗೊಂದಲವಿಲ್ಲ. ಶಿಕಾರಿಪುರ ಕ್ಷೇತ್ರದ ಜೊತೆಗೆ ಯಡಿಯೂರಪ್ಪರಿಗೆ ನಿಕಟ ಸಂಪರ್ಕವಿದೆ. ಅಲ್ಲಿ ಕಾರ್ಯ ಕರ್ತರು ಮುಖಂಡರ ಒತ್ತಾಸೆಯಂತೆ ಕ್ಷೇತ್ರ ಬಿಟ್ಟು ಕೊಡುವ ಘೋಷಣೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

 

ನನ್ನ ಸ್ಪರ್ಧೆ ಬಗ್ಗೆ ಕೇಂದ್ರದ ಸಮಿತಿ ನಿರ್ಧರಿಸಬೇಕು. 30-40 ವರ್ಷ ಯಡಿಯೂರಪ್ಪ ಪಕ್ಷಕ್ಕೆ ದುಡಿದಿದ್ದಾರೆ ಎಂದರು.

ನೀವು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಿರಾ ಎಂಬ ಪ್ರಶ್ನೆಗೆ‌ ವಿಜಯೇಂದ್ರ ಪ್ರತಿಕ್ರಿಯೆ, ನನಗೆ ಇಡೀ ಕರ್ನಾಟಕದ ಮೇಲೆ ಒಲವಿದೆ. ಹೀಗಾಗಿ ಬಿಜೆಪಿ ನನಗೆ ನನ್ನ ಕುಟುಂಬಕ್ಕೆ ಎಲ್ಲವನ್ನೂ ನೀಡಿದೆ ಎಂದಿದ್ದಾರೆ.

ಕಾಂಗ್ರೆಸ್ ನ ಕಿತ್ತಾಟ ಬಿಜೆಪಿಗೆ ಒಳ್ಳೆಯದೆ. ಈ ಕಿತ್ತಾಟದ ಲಾಭ ಮಾಡಿಕೊಳ್ಳಲು ಬಿಜೆಪಿ ಇಷ್ಟ ಪಡುವುದಿಲ್ಲ. ನಾವು ಪಕ್ಷದ ಸಿದ್ದಾಂತ, ಅಭಿವೃದ್ದಿಯಿಂದ ಚುನಾವಣೆಯಲ್ಲಿ ಗೆಲ್ಲಲಿದ್ದೇವೆ ಖಂಡಿತವಾಗಿಯೂ ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

error: Content is protected !!