Monday, 15th August 2022

ರಾಜ್ಯಧ್ಯಕ್ಷ ಸಿ ಎಂ ಇಬ್ರಾಹಿಂ ಹಾಕಿದ ಮಾಲೆ..ಸಾರ್ವಜನಿಕ ವಲಯದಲ್ಲಿ ಪತ್ರಕರ್ತನಿಗೆ ಅಧ್ಯಕ್ಷ ಪಟ್ಟದ ಅಲೆ‌‌..!

ರಾಯಚೂರು: ಮುಂಬರುವ ವಿಧಾನ ಸಭೆ ಚುನಾವಣೆಗೆ ಲಿಂಗಸುಗೂರ ತಾಲ್ಲೂಕಿನಲ್ಲಿ ಈಗಾಗಲೇ ಮೂರು ಪಕ್ಷಗಳ ಭಾರಿ ಪೈಪೋಟಿ ನಡೆದಿದೆ..ಪಕ್ಷ ತೊರೆದು ಪಕ್ಷಕ್ಕೆ ಜಿಗಿಯು ತ್ತಿರುವವರು ಒಂದು ಕಡೆ ಅದ್ರೆ..

ಮತ್ತೊಂದು ಕಡೆ ಪಕ್ಷದ ಕಾರ್ಯಕರ್ತರ ಕೊರತೆ ..ಇದರ ನಡುವೆ ಜೆಡಿಎಸ್ ನಲ್ಲಿ ಬೀಸಿದ ಬಿರುಗಾಳಿಗೆ ತಾಲ್ಲೂಕು ಅಧ್ಯಕ್ಷರಾಗಿದ ನಾಗಭೂಷಣ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ…ಪಕ್ಷ ವಿರೋಧಿ ಚಟುವಟಿಕೆ ಮೇಲೆ ಉಚ್ಚಾಟನೆ ಯಾದ ಅಧ್ಯಕ್ಷ ಸ್ಥಾನಕ್ಕೆ ಯಾರು? ಯಾರು? ಎಂಬ ಪ್ರಶ್ನೆಯ ನಡುವೆ ಯುವ ಪತ್ರಕರ್ತ ,ಕಲಾವಿದ ಶಶಿಕುಮಾರ್ ಲಕ್ಷ್ಮೀ ಹೆಸರು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ..ಈ ಹಿಂದೆ ಜೆಡಿಎಸ್ ರಾಜ್ಯಧ್ಯಕ್ಷ.. ಸಿ ಎಂ ಇಬ್ರಾಹಿಂ ಅವರು ಲಿಂಗಸುಗೂರ ತಾಲ್ಲೂಕಿಗೆ ಆಗಮಿಸಿದ್ದಾಗ ಪತ್ರಕರ್ತನ ಕಾರ್ಯವೈಖರಿಗೆ ಮೆಚ್ಚಿ ತಮ್ಮ ಕೊರಳಿಗೆ ಹಾಕಿದ ಹೂ ಮಾಲೆಯನ್ನು ತೆಗೆದು ಅವರ ಕೊರಳಿಗೆ ಹಾಕಿದ್ರು… ಇದರ ಬೆನ್ನಲ್ಲೇ ಸಾಕಷ್ಟು ಚರ್ಚೆ ಸಹ ಆಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕ ವಲಯದಲ್ಲಿ ವಲಯದಲ್ಲಿ ಭಾವಿ ಅಧ್ಯಕ್ಷರು ನೀವೆ ಎಂಬುದು ಹರಿದಾಡುತ್ತಿದಂತೆ ಯೆ ಕಾಕ್ ತಾಳಿಯ ಎಂಬಂತೆ ಅಧ್ಯಕ್ಷರ ಉಚ್ಚಾಟನೆಗೂ ಈ ಹೂವಿನ ಮಾಲೆಗೂ ನಂಟು ಇದೇನಾ ಎಂಬುವುದು ಯಕ್ಷ ಪ್ರಶ್ನೆ ಆಗಿ ಉಳಿದಿದೆ..