Tuesday, 17th May 2022

ದಿವ್ಯಾಂಗ ವ್ಯಕ್ತಿಗಳಿಗೆ ಕೃತಕ ಉಪಕರಣಗಳ ತಪಾಸಣ ಶಿಬಿರ

ಮಾನ್ವಿ: ಮಾನ್ವಿ ತಾಲ್ಲೂಕಿನಲ್ಲಿ ಸುಮಾರು ಅಂದಾಜು ೪ಸಾವಿರ ಮತ್ತು ಸಿರವಾರ ತಾಲ್ಲೂಕಿನಲ್ಲಿ ೩ ಸಾವಿರ ದಿವ್ಯಾಂಗ ವ್ಯಕ್ತಿಗಳು ಕೂಡ ಸ್ವಾವಲಂಬನೆಯಿAದ ಜೀವನ ನಡೆಸುವುದಕ್ಕೆ ಅನೂಕೂಲವಾಗ ಬೇಕು ಎನ್ನುವ ಉದ್ದೇಶದಿಂದ ಅವರಲ್ಲಿನ ನ್ಯೂನತೆಗಳ ಬಗ್ಗೆ ತಜ್ಞ ರಿಂದ ತಪಾಸಣೆ ನಡೆಸಿ ಅವರಿಗೆ ಅಗತ್ಯವಿರುವ ಕೃತಕ ಉಪಕರಣಗಳನ್ನು ಸಂಸ್ಥೆ ವತಿಯಿಂದ ಉಚಿತವಾಗಿ ವಿತರಿಸಲಾಗುವುದು ಎಂದು ಅಲಿಂಕೋ ಬೆಂಗಳೂರು ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ಲಿಟಾನ್ ಸರಕಾರ್ ತಿಳಿಸಿದರು.

ಪಟ್ಟಣದ ಶಾಸಕರ ಭನವನದಲ್ಲಿನ ತಾ.ಪಂ.ಸಭಾAಗಣದಲ್ಲಿ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಅಂಗವಿಕಲ ಕಲ್ಯಾಣ ಕಛೇರಿ ಸಹಯೋಗದೊಂದಿಗೆ ಭಾರತ್ ಎಲೆಕ್ಟಾçನಿಕ್ಸ್ ಲಿಮಿಟೆಡ್ ಹಾಗೂ ಕೃತಕ ಅಂಗಾAಗ ತಯಾರಿಕಾ ಕಾರ್ಪೋರೇಷನ್ ಆಫ್ ಇಂಡಿಯಾ ವತಿಯಿಂದ ದಿವ್ಯಾಂಗ ವ್ಯಕ್ತಿಗಳಿಗೆ ಕೃತಕ ಉಪಕರಣಗಳ ತಪಾಸಣ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಿಕ್ಷಣ ಇಲಾಖೆಯ ವಿಶೇಷ ಚೇತನರ ವಿಶೇಷÀ ಸಂಪನ್ಮೂಲ ಶಿಕ್ಷಕ ಗಂಗಾಧರಯ್ಯ ಮಾತನಾಡಿ ಶಿಕ್ಷಣ ಇಲಾಖೆಯಿಂದ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಸುಮಾರು ೬೦೦ಕ್ಕೂ ಹೆಚ್ಚು ವಿಶೇಷ ಚೇತನ ಮಕ್ಕಳು ಶಿಕ್ಷಣ ಪಡೆಯುತ್ತಿದ್ದು ಅಂತಹವರನ್ನು ಶಿಬಿರದಲ್ಲಿ ತÀಪಾಸಣೆ ನಡೆಸಿ ಅಗತ್ಯವಿರು ಸಾಧನ ಸಲಕರಣೆಗಳನ್ನು ವಿತರಿಸುವುದರಿಂದ ಸಾಮಾನ್ಯ ಮಕ್ಕಳೊಂದಿಗೆ ಸಮಾನವಾಗಿ ಶಿಕ್ಷಣ ಪಡೆಯಲು ಸಾದ್ಯವಾಗುತ್ತದೆ ಎಂದು ತಿಳಿಸಿದರು.

ಅಲಿಂಕೋ ಬೆಂಗಳೂರು ಸಂಸ್ಥೆಯ ಕೃತಕ ಉಪಕರಣಗಳ ತಪಾಸಕರಾದ ಅಮೀತ್ ಕುಮಾರ್ ದಿವ್ಯಾಂಗ ವ್ಯಕ್ತಿಗಳ ತಪಸಾಣೆ ನಡೆಸಿ ಅಗತ್ಯವಿರುವ ಮಾಹಿತಿಯನ್ನು ದಾಖಲಿಸಿ ಕೊಂಡರು. ತಾ.ಪಂ. ದಿವ್ಯಾಂಗ ವ್ಯಕ್ತಿಗಳ ವಿವಿದೋದ್ದೇಶ ಪುರ್ನವಸತಿ ಕಾರ್ಯಕರ್ತರಾದ ಡಿ.ಹನುಮಂತ ಕಪಗಲ್, ಶಿಕ್ಷಣ ಇಲಾಖೆಯ ಬಿ.ಆರ್.ಟಿ.ಇ.ನಾಗಪ್ಪ ಸೆರಿದಂತೆ ಇನ್ನಿತರರು ಇದ್ದರು. ಮಾನ್ವಿ ಮತ್ತು ಸಿರವಾರ ತಾಲ್ಲೂಕುಗಳ ಸಾವಿರಾರು ದಿವ್ಯಾಂಗ ಚೇತನರು ಶಿಭಿರದಲ್ಲಿ ಭಾಗವಹಿಸಿದರು.