Thursday, 5th August 2021

ಎರಡೂ ಕೈಗಳಿಂದ ಬರೆಯಲು ಸಾಧ್ಯವೆ ?

ಈ ಬಾಲಕಿ ಶಾಲೆಗೆ ಹೋಗದೆ ನೇರವಾಗಿ 10ನೆಯ ತರಗತಿಯ ಸ್ವಕಲಿಕೆಯಲ್ಲಿ ತೊಡಗಿ ಕೊಂಡಿದ್ದು, ಎರಡೂ ಕೈಗಳಲ್ಲಿ ಏಕಕಾಲಕ್ಕೆ ಒಂದು ನಿಮಿಷಕ್ಕೆ ನಲವತ್ತಕ್ಕೂ ಹೆಚ್ಚು ಇಂಗ್ಲೀಷ್ ಪದಗಳನ್ನು ಯುನಿ ಡೈರೆಕ್ಷನಲ್ ಶೈಲಿಯಲ್ಲಿ ಬರೆದು ವಿಶ್ವ ದಾಖಲೆ ನಿರ್ಮಿಸಿದ್ದಾಳೆ.

ಸುರೇಶ ಗುದಗನವರ

ಪ್ರತಿಭೆಗಳು ಎಲ್ಲೆಲ್ಲಿ ಅಡಗಿರುತ್ತವೆ, ಯಾವ ರೀತಿಯಲ್ಲಿ ಪ್ರಕಟಗೊಳ್ಳುತ್ತವೆ ಎಂದು ಹೇಳು ವುದು ಕಷ್ಟ. ಮಂಗಳೂರಿನ ಗೋಪಾಡ್ಕರ್ ಮತ್ತು ಸುಮಾಡ್ಕರ್ ಮಗಳಾದ ಆದಿ ಸ್ವರೂಪಳಿಗೆ 16 ವರ್ಷ. ಒಂದೂವರೆ ವರ್ಷದ ಪುಟಾಣಿಯಾಗಿರುವಾಗಲೇ ಓದಲು ಆರಂಭಿಸಿದ ಆದಿ, ಎರಡೂವರೆ ವರ್ಷದವಳಿರುವಾಗ ದಿನಕ್ಕೆ 30 ಪುಟ ಬರೆಯುತ್ತಿದ್ದಳು. ಸ್ವರೂಪ ಎಂದೂ ಶಾಲೆಗೆ ಹೋದವಳಲ್ಲ. ಆದರೆ ಅವಳ ಬುದ್ಧಿ ಶಕ್ತಿ, ಸ್ವರಣಶಕ್ತಿ ನೋಡಿದರೇ ಆಶ್ಚರ್ಯ ವಾಗುತ್ತದೆ. 10ನೆಯ ತರಗತಿಯನ್ನು ಸ್ವಕಲಿಕೆ ಯಲ್ಲಿ ತೊಡಗಿಕೊಂಡಿದ್ದಾಳೆ.

ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿಯಾಗಿರುವ ಆದಿ ಸ್ವರೂಪ, ಎರಡೂ ಕೈಗಳಿಂದ ಸರಾಗವಾಗಿ ಬರೆಯುತ್ತಾಳೆ. ಕಳೆದ ಎರಡು ವರ್ಷಗಳಲ್ಲಿ ಈಕೆ ಹತ್ತು ವಿಭಿನ್ನ ರೀತಿಯಲ್ಲಿ ಬರೆಯುವ ಕಲೆಯನ್ನು ಕರಗತ ಮಾಡಿಕೊಂಡಿ ದ್ದಾಳೆ. ಲಾಕ್‌ಡೌನ್ ಅವಧಿಯನ್ನು ಸದುಪಯೋಗಪಡಿಸಿಕೊಂಡು ಸ್ವರೂಪ ಇದರಲ್ಲಿ ನೈಪುಣ್ಯತೆಯನ್ನು ಪಡೆದಿದ್ದಾಳೆ. ಏಕಕಾಲದಲ್ಲಿ ಎರಡು ಕೈಗಳಿಂದ ಒಂದು ನಿಮಿಷಕ್ಕೆ 45 ಪದಗಳಂತೆ ಯುನಿ ಡೈರೆಕ್ಷನಲ್ ವಿಭಾಗದ ಶೈಲಿಯಲ್ಲಿ ಇಂಗ್ಲೀಷ್ ಪದಗಳನ್ನು ಬರೆದು ಉತ್ತರ ಪ್ರದೇಶದ ಬರೇಲಿಯಾ ಲಾಟಾ ಫೌಂಡೇಷನ್ ಮೂಲಕ ಎಕ್ಸಕ್ಲೂಸಿವ್ ವಲ್‌ಡ್‌ ರೆಕಾರ್ಡ್ ದಾಖಲೆ
ಯನ್ನು ನಿರ್ಮಿಸಿದ್ದಾಳೆ.

ಇತ್ತೀಚಿಗೆ ಸ್ವರೂಪ, ಯುನಿಡೈರೆಕ್ಷನಲ್, ಅಪೋಸಿಟ್ ಡೈರೆಕ್ಷನ್, ರೈಟ್ ಹ್ಯಾಂಕ್, ಸ್ಪೀಡ್,  ಲೆಫ್ಟ್ ಹ್ಯಾಂಡ್ ಸ್ಪೀಡ್, ರಿವರ್ಸ ರನ್ನಿಂ‌ಗ್‌, ಮಿರರ್ ಇಮೇಜ್, ಹೆಟಿರೋಟೋಪಿಕ್, ಹೆಟಿರೋ ಲಿಂಗ್ವಿಸ್ಟಿಕ್, ಎಕ್ಸ್‌‌ಚೆಂಜ್, ಡ್ಯಾನ್ಸಿಂಗ್‌ ಮತ್ತು ಬ್ಲೈಂಡ್ ಫೋಲ್ಡ್ ಶೈಲಿಯಲ್ಲಿ ಬೋರ್ಡ್ ಮೇಲೆ ಸರಿಯಾಗಿ ಬರೆದು ಅಚ್ಚರಿ ಮೂಡಿಸಿದ್ದಾಳೆ. ಸ್ವರೂಪ ಇತರ ಹತ್ತು ಬಗೆಯ ವಿಶ್ವ ದಾಖಲೆಗೂ ಸಿದ್ಧತೆ ನಡೆಸುತ್ತಿದ್ದಾಳೆ.

ಸಾಹಿತ್ಯ, ಸಂಗೀತ, ಯಕ್ಷಗಾನ, ಚಿತ್ರಕಲೆ, ಮಿಮಿಕ್ರಿ, ಬೇಟ್‌ಬಾಕ್ಸ್, ನೆನಪುಶಕ್ತಿಯ ತ್ರಯೋದಶ ಅವಧಾನ, ರೂಬಿಕ್ ಕ್ಯೂಬ್ ಇತ್ಯಾದಿ ವಿಷಯಗಳ ಅಧ್ಯಯನದಲ್ಲೂ ನಿರತಳಾಗಿದ್ದಾಳೆ. ಹಿಂದೂಸ್ತಾನಿ ಸಂಗೀತವನ್ನು ಪಂಡಿತ ರವಿಕಿರಣ ಅವರಲ್ಲಿ ಅಭ್ಯಸಿ ಸುತ್ತಿದ್ದಾಳೆ. ಆದಿ ಸ್ವರೂಪ ರಾಜ್ಯದ ಎಲ್ಲ ತಾಲೂಕು, ದೇಶದ ಜಿಲ್ಲೆಗಳ ಹೆಸರು, 64 ವಿದ್ಯೆ, 6 ಸಂವತ್ಸರ, 101 ಕೌರವರು, ರಾಮನವಂಶವನ್ನು ತನ್ನ ಅದ್ಭುತ ಸ್ಮರಣಾ ಶಕ್ತಿಯಿಂದ ಮನನ ಮಾಡಿದ್ದಾಳೆ. ವಿಷುವಲ್ ಮೆಮೊರಿ ಆರ್ಟ್ ಮೂಲಕ ಇಡೀ ಪಠ್ಯ ಪುಸ್ತಕವನ್ನು ಒಂದೇ ಹಾಳೆಯಲ್ಲಿ ಬಿಡಿಸಿ ದಾಖಲೆ ಮಾಡಿದ್ದಾಳೆ. ಸಾವಿರ ವಸ್ತುಗಳನ್ನು 4-5 ಸೆಕೆಂಡುಗಳಲ್ಲಿ ಸ್ಮರಣೆಗೆ ದಾಖಲಿಸಿ ಹೇಳುವ ಸಾಧನೆ ಹೊಸ ದಾಖಲೆಗೆ ಸಿದ್ಧವಾಗಿದೆ.

ಸನ್ನೆಯಿಂದಲೇ ಗುರುತಿನ ನೂರಾರು ಪೋನ್ ನಂಬರಗಳನ್ನು ನಿಮಿಷಾರ್ಧದಲ್ಲಿ ನೆನಪಿಗೆ ದಾಖಲಿಸಿಕೊಳ್ಳಬಲ್ಲಳು. ಷೋಡಶ ಅವಧಾನ ಪ್ರದರ್ಶನವನ್ನು ದಾಖೆಗಾಗಿ ನಿತ್ಯ ಅಭ್ಯಾಸ ಮಾಡುತ್ತಿದ್ದಾಳೆ. ಆದಿಗೆ 10 ಶೈಲಿಯ ಬರವಣಿಗೆಯಲ್ಲಿ ಗಿನ್ನೆಸ್ ರೆಕಾರ್ಡ್‌ ಮಾಡುವ ಕನಸಿದ್ದು, ಅದರತ್ತ ಹೆಚ್ಚು ಗಮನಹರಿಸಿದ್ದಾಳೆ. ಗೋಪಾಡ್ಕರ್‌ರವರು ಮಗಳು ಆದಿ ಸ್ವರೂಪಳನ್ನು ಶಾಲೆಗೆ ಕಳುಹಿಸದೇ ಅವಳ ಆಸಕ್ತಿಗೆ ಪ್ರೋತ್ಸಾಹ ನೀಡಿರುವದರಿಂದ, ಇಂದು ಆದಿ ಸ್ವರೂಪಳು ಅಪ್ರತಿಮ ಸಾಧಕಿಯಾಗಿ ಹೊರಹೊಮ್ಮಿ ದ್ದಾಳೆ. ಮಕ್ಕಳಿಗೆ ಪೂರ್ಣ ಸ್ವಾತಂತ್ರ ಕೊಟ್ಟರೆ ಪ್ರತಿಭೆ ಹೇಗೆ ವಿಕಸನಗೊಳ್ಳಬಹುದು ಎಂಬುದಕ್ಕೆ ಆದಿ ಸ್ವರೂಪ ತಾಜಾ ಉದಾ ಹರಣೆ.

ತಂದೆಯೇ ಗುರು
ಆದಿ ಸ್ವರೂಪಳ ತಂದೆ ಗೋಪಾಡ್ಕರ್ ಮಂಗಳೂರಿನ ಕೊಡಾಯಾಲ್ ಬೈಲ್‌ನಲ್ಲಿ ವಿಭಿನ್ನ ಶಿಕ್ಷಣ ಸಂಸ್ಥೆೆಯನ್ನು ಪ್ರಾರಂಭಿ
ಸಿದ್ದು, ಪಾಠಗಳನ್ನು ಚಿತ್ರಕಲೆ, ನೃತ್ಯ, ಸಂಗೀತ, ನಾಟಕ, ಕ್ರೀಡೆ ಮುಂತಾದವುಗಳಲ್ಲೇ ಕಲಿಯುವಂತಹ ರೀತಿ ಅನುಸರಿಸಿದ್ದಾರೆ. ಅಲ್ಲಿ ಮಕ್ಕಳಿಗೆ ಪುಸ್ತಕದ ಭಾರ ಹೊರುವ, ಅತೀ ಓದುವಿಕೆಯ ಒತ್ತಡವಿಲ್ಲ. ಅದುವೇ ಸ್ವರೂಪ ಅಧ್ಯಯನ ಕೇಂದ್ರ. ಇಲ್ಲಿ ಕಲಿತ
ವಿದ್ಯಾರ್ಥಿಗಳು ಇಂಡಿಯಾ ರೆಕಾರ್ಡ್, ಲಿಮ್ಕಾ ರೆಕಾರ್ಡ್ ಮುಂತಾದ ಸಾಧನೆ ಮಾಡಿದ್ದಾರೆ. ಸ್ವ-ರೂಪ ಎಂದರೆ ಸ್ವಂತ ಕಲಿ ಯುವ ಹಕ್ಕನ್ನು ಮಕ್ಕಳೇ ಮುತುವರ್ಜಿ ವಹಿಸಿ ಕ್ಷಣ ಕ್ಷಣವೂ ತೃಪ್ತಿದಾಯಕವಾಗಿ ಪಡೆದುಕೊಳ್ಳುವ ಕಲಿಕೆ.

ಸ್ವಯಂ ಅಧ್ಯಯನ
ಸ್ವಯಂ ಆಸಕ್ತಿಯಿಂದ ಅಭ್ಯಾಸ ಮಾಡಿ 10ನೆಯ ತರಗತಿಯ ಪರೀಕ್ಷೆಯನ್ನು ಖಾಸಗಿಯಾಗಿ ಎದುರಿಸಿ, ಎರಡೂ ಕೈಗಳಿಂದ ಬರೆದು ಒಂದೂವರೆ ಗಂಟೆಯಲ್ಲಿ ಮುಗಿಸಬೇಕೆಂಬ ಹಂಬಲ ಸ್ವರೂಪಳದ್ದು. ಇದಕ್ಕೆ ಪೋಷಕರು ಬೆಂಬಲ ನೀಡುತ್ತಿದ್ದಾರೆ. ವೈಜ್ಞಾನಿಕವಾಗಿ ಎಡಬಲ ಮೆದುಳನ್ನು ಏಕಕಾಲಕ್ಕೆ ಚುರುಕುಗೊಳಿಸಬಲ್ಲ ಎರಡೂ ಕೈಗಳಿಂದ ಬರೆಯುವ ಈ ತಂತ್ರವು ರಾಷ್ಟ್ರೀಯ ಶಿಕ್ಷಣ ನೀತಿಗೆ ತೆರೆದುಕೊಳ್ಳಲಿರುವ ಶಿಕ್ಷಣ ಕ್ಷೇತ್ರಕ್ಕೊಂದು ಅಪೂರ್ವ ಸಾಧ್ಯತೆಯಾಗಲಿದೆ ಎಂದು ಸ್ವರೂಪಳ ತಂದೆ ಗೋಪಾಡ್ಕರ್ ಹೇಳುತ್ತಾರೆ.

Leave a Reply

Your email address will not be published. Required fields are marked *