Thursday, 23rd March 2023

ನಮಗಿರುವ ಮತಗಳಲ್ಲೇ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುತ್ತೇವೆ: ಬಿ.ಎಸ್.ವೈ

ಬೆಂಗಳೂರು: ನಾವು ಯಾವುದೇ ಪಕ್ಷದ ಬೆಂಬಲ ಪಡೆಯದೆ ಮೂವರು ಅಭ್ಯರ್ಥಿ ಗಳನ್ನು ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲಿಸಿ ಕೊಳ್ಳುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ನಮಗೆ ಯಾವುದೇ ಪಕ್ಷದ ಬೆಂಬಲ ಅಥವಾ ಸಹಾಯ ಅಗತ್ಯವಿಲ್ಲ. ನಮ್ಮ ಪಕ್ಷದಿಂದ ಸ್ಫರ್ಧಿಸಿರುವ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಮತ್ತು ಲೆಹರ್‌ ಸಿಂಗ್ ಗೆದ್ದೇ ಗೆಲ್ಲುತ್ತಾರೆ. ಕಾದು ನೋಡಿ ಎಂದು ಕುತೂಹಲ ಕೆರಳಿಸಿದರು.

ನಮಗಿರುವ ಮತಗಳಲ್ಲೇ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುತ್ತೇವೆ. ಹೀಗಾಗಿ ಯಾರ ಸಹಾಯವೂ ನಮಗೆ ಬೇಕಾಗುವು ದಿಲ್ಲ. ನಮ್ಮ ಮೂರನೇ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದು ಯಾರನ್ನೂ ಕೂಡ ಕೇಳುವುದಿಲ್ಲ ಎಂದರು. ನಮಗೆ ಅಗತ್ಯ ಮತ ವಿರುವುದರಿಂದ ಬೇರೆ ಸಹಾಯದ ಅಗತ್ಯವೇಕೆ ಎಂದು ಪ್ರಶ್ನಿಸಿದರು.

ನಮ್ಮ ಬಳಿ 122 ಮತಗಳಿವೆ. ಮೂರನೇ ಅಭ್ಯರ್ಥಿ ಗೆಲ್ಲಲು ಒಂದು ಮತ ಬೇಕಾಗುತ್ತದೆ. ಎಲ್ಲ ಲೆಕ್ಕಾಚಾರ ಹಾಕಿಯೇ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಬೇರೆ ಪಕ್ಷಗಳ ಬೆಳವಣಿಗೆ ಬಗ್ಗೆ ಚರ್ಚೆಯ ಅಗತ್ಯವಿಲ್ಲ ಎಂದು ಮಾಜಿ ಸಿಎಂ ಸ್ಪಷ್ಟ ಪಡಿಸಿದರು.

error: Content is protected !!