Thursday, 2nd February 2023

ತಾಲೂಕು ಪಂಚಾಯಿತಿ ರದ್ದು ಮಾಡುವುದು ಮೂರ್ಖತನ: ನಾರಾಯಣಸ್ವಾಮಿ

ತುಮಕೂರು: ಪಂಚಾಯತ್‌ರಾಜ್ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದ ಕೆಲ ನಾಯಕರು,ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ತಾ.ಪಂನ್ನು ರದ್ದುಪಡಿಸುವ ಮಾತನಾಡುತ್ತಿರುವುದು ಮೂರ್ಖತನ ಎಂದು ರಾಜೀವ್‌ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್‌ಗಾಂಧಿ ಪಂಚಾಯತ್ ರಾಜ್ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹಮ್ಮಿ ಕೊಂಡಿದ್ದ ಸಮಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಂವಿಧಾನದ 73ನೇ ತಿದ್ದುಪಡಿಯ ಪ್ರಕಾರ ಅಸ್ಥಿತ್ವಕ್ಕೆ ಬಂದ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕೊಂಚ ಬದಲಾವಣೆ ಮಾಡಬೇಕೆಂದರೂ, ಮತ್ತೊಮ್ಮೆ ದೇಶದ ಮೂರನೇ ಎರಡು ರಾಜ್ಯಗಳ ಬಹುಮತದ ಜೊತೆಗೆ, ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ತಿದ್ದುಪಡಿಗೆ ಸಂಬAಧ ಬಹುಮತ ಪಡೆದು, ರಾಷ್ಟçಪತಿಗಳ ಅಂಕಿತ ಬೀಳಬೇಕು. ಇದು ತಕ್ಷಣಕ್ಕೆ ಸಾಧ್ಯವಾಗದ ಮಾತು. ಈ ಬಗ್ಗೆ ತಿಳುವಳಿಕೆ ಇಲ್ಲದ ಕೆಲ ಮಂತ್ರಿಗಳು ಬಾಯಿಗೆ ಬಂದAತೆ ಮಾತನಾಡುತಿದ್ದಾರೆ ಎಂದರು.

ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬರಲು ಕಾರಣೀಭೂತರಾದ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ ಹೆಸರಿ ನಲ್ಲಿ 2008ರಲ್ಲಿ ಎಐಸಿಸಿ ನಿರ್ದೇಶನದಂತೆ ದೇಶದ ಮೊದಲ ಪಂಚಾಯತ್ ರಾಜ್ ಸಚಿವರಾದ ಮಣಿಶಂಕರ್ ಐಯ್ಯರ್ ಅವರ ನೇತೃತ್ವದಲ್ಲಿ ರಾಜೀವ್‌ಗಾಂಧಿ ಪಂಚಾಯತ್ ರಾಜ್ ಸಂಘಟನೆಯನ್ನು ಹುಟ್ಟು ಹಾಕಲಾಯಿತು. ಇಂದು ಮೀನಾಕ್ಷಿ ನಟರಾಜ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಬೇರೆ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ರಾಜೀವ್‌ಗಾಂಧಿ ಪಂಚಾಯತ್ ರಾಜ್ ಸಂಘಟನೆಯನ್ನು ಬಲಪಡಿಸಲು ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದು, 30 ಜಿಲ್ಲೆಗಳಲ್ಲಿಯೂ ಸಂಘಟನೆಗೆ ಸಂಚಾಲಕರನ್ನು ನೇಮಿಸಿ, ಅವರ ಮೂಲಕ ತಾಲೂಕು ಮತ್ತು ಗ್ರಾಮ ಘಟಕಗಳನ್ನು ಹುಟ್ಟು ಹಾಕಿ, ಅವರುಗಳ ಮೂಲಕ ತಳಮಟ್ಟದಲ್ಲಿ ಪಕ್ಷ ಕಟ್ಟಲು ಮುಂದಾಗಿರುವುದಾಗಿ ನಾರಾಯಣಸ್ವಾಮಿ ತಿಳಿಸಿದರು.

ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ ಮಾತನಾಡಿ,ತುಮಕೂರು ಜಿಲ್ಲೆಯ 329 ಗ್ರಾಮಪಂಚಾಯಿತಿಗಳಿಗೆ ಇತ್ತೀಚಗೆ ನಡೆದ ಚುನಾವಣೆಯಲ್ಲಿ ಸುಮಾರು 220ರಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದು,ಅಧಿಕಾರ ಹಿಡಿಯಲಿ ದ್ದಾರೆ.

ಮುಂಬರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿಯೂ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಳ್ಳಲು ನಾವೆಲ್ಲರೂ ಈಗಿನಿಂದಲೇ ಕಾರ್ಯಕ್ರಮ ರೂಪಿಸಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಪಕ್ಷವನ್ನು ಸಂಘಟಿಸಲು ಮುಂದಾಗುವAತೆ ಸಲಹೆ ನೀಡಿದರು.

ರಾಜೀವ್‌ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಷ್ಟಿçÃಯ ಸಂಚಾಲಕರಾದ ಬಿನ್ನಿ ಮಾತನಾಡಿ,ಪಂಚಾಯತ್ ರಾಜ್ ಸಂಘಟನೆಯ ಮೂಲಕ ಪಕ್ಷವನ್ನು ಬಲವಾಗಿ ಸಂಘಟಿಸಿದ ಉತ್ಸಾಹಿಗಳಿಗೆ ಪಕ್ಷದಲ್ಲಿ ಉತ್ತಮ ಅವಕಾಶ ಲಭಿಸಿವೆ. ಹಾಗಾಗಿ ಅಧಿಕಾರಕ್ಕಾಗಿ ಕೆಲಸ ಮಾಡದೆ, ಉತ್ಸಾಹದಿಂದ ಕೆಲಸ ಮಾಡಿದರೆ, ಅಧಿಕಾರವೇ ನಿಮ್ಮ ಬಳಿ ಬರಲಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ನನಗೆ ಯಾವುದೇ ಹುದ್ದೆ ಮುಖ್ಯವಲ್ಲ. ಪಕ್ಷದ ಕಾರ್ಯಕರ್ತನಾಗಿ ದುಡಿದು,ಜಿಲ್ಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಬೇಕೆಂಬ ಆಶಯವನ್ನು ಹೊಂದಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಯನ್ನು ಜನತೆಯ ಮುಂದಿಡುವ ಮೂಲಕ ಮುಂಬುರವ ಜಿ.ಪಂ, ತಾಪಂ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲಲ್ಲು ಶಕ್ತಿ ಮೀರಿ ಪ್ರಯತ್ನಿಸೋಣ ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಮಾಜಿ ಶಾಸಕ ಎಸ್.ಷಪಿಅಹಮದ್, ಮುಖಂಡರಾದ ರೇವಣಸಿದ್ದಯ್ಯ, ರಾಜೀವ್‌ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಸಹ ಸಂಚಾಲಕ ವೆಂಕಟೇಶ್ ಅವರುಗಳು ಮಾತನಾಡಿದರು.

ಈ ವೇಳೆ ಪಕ್ಷದ ಮುಖಂಡರಾದ ಕೆಂಚಮಾರಯ್ಯ, ಸಿದ್ದಲಿಂಗೇಗೌಡ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್, ಮರಿಚನ್ನಮ್ಮ, ಗೀತಮ್ಮ, ನಾಗಮಣಿ, ಶಿವಾಜಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಟೋ ರಾಜು, ಶಿರಾ ನಗರದ ಸಂಜಯ್, ಶಶಿ ಹುಲಿ ಕುಂಟೆ ಮಠ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!