Monday, 26th October 2020

ಪರೀಕ್ಷೆ ಬರೆಯುತ್ತಿದ್ದ ನಕಲಿ ಅಭ್ಯರ್ಥಿ ಪೊಲೀಸರ ಅತಿಥಿ

ಬೆಳಗಾವಿ : ಭಾನುವಾರ ನಡೆದ ಡಿಎಆರ್, ಸಿಎಆರ್ ಪೊಲೀಸ್ ಕಾನ್ಸ’ಸ್ಟೇಬಲ್ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ವ್ಯಕ್ತಿ ಸಿಕ್ಕಿ ಬಿದ್ದಿದ್ದಾನೆ. ಬೇರೆಯವರ ಹೆಸರಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ನಕಲಿ ಅಭ್ಯರ್ಥಿ ಪೊಲೀಸರ ಅತಿಥಿಯಾಗಿದ್ದಾನೆ.

ಬೆಳಗಾವಿಯ ಪರೀಕ್ಷಾ ಕೇಂದ್ರಗಳಲ್ಲಿ ಮತ್ತೊಬ್ಬರ ಹೆಸರಿನಲ್ಲಿ ಪರೀಕ್ಷೆ ಬರೆಯುತ್ತಿರುವಾಗ, ಪರೀಕ್ಷಾ ಮೇಲ್ವೀಚಾರಕರ ಕೈಗೆ ಸಿಕ್ಕಿರುವ ಓರ್ವನನ್ನು ಬಂಧಿಸಿರುವ ಪೋಲೀಸರು ವಿಚಾರಣೆ ನಡೆಸಿದ್ದಾರೆ. ಎಪಿಸಿ (ಡಿಎಆರ್ / ಸಿಎಆರ್) ನೇಮಕಾತಿಗಾಗಿ ಸಿಇಟಿ ಪರೀಕ್ಷೆಯನ್ನು ನಡೆಸಿದೆ .6909 ರಲ್ಲಿ ಒಟ್ಟು 5760 ಅಭ್ಯರ್ಥಿಗಳು ಹಾಜರಾಗಿದ್ದಾರೆ.

ಜೈನ್‌ ಕಾಲೇಜಿನಲ್ಲಿ ನೈಜ ಅಭ್ಯರ್ಥಿಯಂತೆ ಸೋಗು ಹಾಕಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.

 

Leave a Reply

Your email address will not be published. Required fields are marked *