Wednesday, 5th October 2022

ಕಾನ್ ಚಲನಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ

ಅಂತರಾಷ್ಟ್ರೀಯ ಕಾನ್ ಚಲನಚಿತ್ರೋತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಫ್ರಾನ್ಸ್‌ನ ಕಾನ್ ನಗರದ ಫ್ರೆಂಚ್ ರಿವೇರಿಯಾದಲ್ಲಿ ಈ ಪ್ರತಿಷ್ಠಿತ ಚಿತ್ರೋತ್ಸವ ನಡೆಯುತ್ತಿದೆ.

ಮೇ ೨೮ ರವರೆಗೂ ನಡೆಯಲಿರುವ ಈ ಸಿನಿಮೋತ್ಸವದಲ್ಲಿ ವಿಶ್ವದ ಹಲವು ಅತ್ಯುತ್ತಮ ಸಿನಿಮಾಗಳು ಪ್ರದರ್ಶನ ಕಾಣಲಿವೆ. ಕಾನ್ ಚಲನ ಚಿತ್ರೋತ್ಸವ ದಲ್ಲಿ ಜ್ಯೂರಿಯಾಗಿರುವ ನಟಿ ದೀಪಿಕಾ ಪಡುಕೋಣೆ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲಾಕ್ ಅಂಡ್ ಗೋಲ್ಡ್ ಕಲರ್ ಸ್ಯಾರಿಯಲ್ಲಿ ಮಿಂಚಿ ದ್ದಾರೆ. ಇದಕ್ಕೂ ಮೊದಲು ಗ್ರೀನ್ ಪ್ಯಾಂಟ್ ಅಂಡ್ ಪ್ಲವರ್ ಪ್ರಿಂಟೆಡ್ ಶರ್ಟ್‌ನಲ್ಲಿ ಮಿಂಚಿದ್ದರು. ಸದ್ಯ ಈ ಎರಡು ಡ್ರೆಸ್’ಗಳು ಆನ್‌ಲೈನ್‌ನಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿವೆ. ಈ ಬಾರಿಯ ಕಾನ್ ಚಿತ್ರೋತ್ಸವ ದಲ್ಲಿ ದಕ್ಷಿಣ ಭಾರತೀಯ ನಟಿಯರಿಗೂ ಆದ್ಯತೆ ನೀಡಲಾಗಿದೆ.

ತಮನ್ನಾ ಭಾಟಿಯಾ, ನಯನಾ ತಾರಾ, ಪೂಜಾ ಹೆಗ್ಡೆ, ಕಮಲ್ ಹಾಸನ್, ಮಾಧವನ್, ಎ.ಆರ್.ರೆಹಮಾನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ, ಹೀನಾ ಖಾನ್, ನವಾಜೂದ್ದೀನ್ ಸಿದ್ದಿಕಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಗಮನಸೆಳೆದರು. ಕೇಂದ್ರ ಸಚಿವ ಅನುರಾಗ್ ಠಾಕೂರ್ ಕೂಡ ಕಾನ್ ಚಿತ್ರೋತ್ಸವ ದಲ್ಲಿ ಪಾಲೊಂಡಿದ್ದಾರೆ.