Friday, 18th June 2021

6ನೇ ವೇತನ ಆಯೋಗದ ಶಿಫಾರಸು ಜಾರಿಗೆ ತರಲು ಸಾಧ್ಯವಿಲ್ಲ: ಸಿಎಂ ಬಿಎಸ್‌ವೈ ಸ್ಪಷ್ಟನೆ

ಬೆಳಗಾವಿ: ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ವಿಚಾರವಾಗಿ 6ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

ಬೆಳಗಾವಿ ತಾಲೂಕಿನ ಮುತ್ನಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್‌ನಿಂದ ಆರ್ಥಿಕ ಸಂಕಷ್ಟದಲ್ಲಿ ಲಾಕ್ ಡೌನ್ ಸಮಯದಲ್ಲಿಯೂ ಸಾರಿಗೆ ನೌಕರರಿಗೆ ಸಂಪೂರ್ಣ ಸಂಬಳ ನೀಡಿದ್ದೇವೆ. ಸರ್ಕಾರದಿಂದಲೇ 1,200 ಕೋಟಿ ರೂಪಾಯಿ ಸಂಬಳ ಸಾರಿಗೆ ಇಲಾಖೆಗೆ ಈಗಾಗಲೇ ಕೊಟ್ಟಿದ್ದೇವೆ. ಸರಕಾರ ಪ್ರಯತ್ನವನ್ನು ಸಾರಿಗೆ ನೌಕರರು ಕೂಡ ಪರಿಗಣಿಸಬೇಕು ಎಂದು ಹೇಳಿದರು.

ಸಾರಿಗೆ ನೌಕರರು ಯಾರದ್ದೋ ಪ್ರೇರಣೆ, ಒತ್ತಡದ ಮೇಲೆ ಮುಷ್ಕರ ಮಾಡುತ್ತಿದ್ದಾರೆ ಎನಿಸುತ್ತಿದೆ. ದಯಮಾಡಿ ಹಠ ಬಿಡಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಸರ್ಕಾರ ಸಾರಿಗೆ ಇಲಾಖೆ ನೌಕರರ ಪರವಾಗಿದೆ. ಕರೋನಾದಿಂದ ಇಲಾಖೆ ನಷ್ಟದಲ್ಲಿದೆ. ಮುಷ್ಕರ ಬಿಟ್ಟು ಮಾತುಕತೆಗೆ ಬನ್ನಿ, ಕುಳಿತು ಚರ್ಚೆ ನಡೆಸೋಣ, ಶ್ರೀಮಾನ್ಯರಿಗೆ ತೊಂದರೆ ಕೊಡಬೇಡಿ ಎಂದು ಮುಷ್ಕರ ನಿರತರಲ್ಲಿ ಮನವಿ ಮಾಡಿಕೊಂಡರು.

ಶೇಕಡಾ 8ರಷ್ಟು ಹೆಚ್ಚುವರಿಯಾಗಿ ಸಾರಿಗೆ ನೌಕರರಿಗೆ ಸಂಬಳ ಕೊಡಲು ನಾವು ಭರವಸೆ ನೀಡಿದ್ದು ಅದನ್ನು ಈಡೇರಿಸುತ್ತೇವೆ ಎಂದು ಸಹ ಸಿಎಂ ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಹೇಳಿದರು.

Leave a Reply

Your email address will not be published. Required fields are marked *