Friday, 7th May 2021

10 ಗಂಟೆಯೊಳಗೆ ಸಂಚಾರಿ ಫ್ಲೈಓವರ್ ಬಂದ್: ರವಿಕಾಂತೇಗೌಡ

ಬೆಂಗಳೂರು: ಕರೋನಾ ನಿಯಂತ್ರಣಕ್ಕೆ ನಗರದಲ್ಲಿ ಇಂದಿನಿಂದ ಕರೋನಾ ನೈಟ್​ ಕರ್ಫ್ಯೂ ಜಾರಿ ಆಗಲಿದ್ದು, ಈ ಹಿನ್ನೆಲೆ ಯಲ್ಲಿ ರಾತ್ರಿ 9.50 ರಿಂದ ನಗರದ ಸಂಚಾರಿ ಫ್ಲೈಓವರ್​​ಗಳನ್ನ ಬಂದ್ ಮಾಡಲಾಗುವುದು ಎಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

ಕರ್ಫ್ಯೂ ಕುರಿತು ಮಾತನಾಡಿ, ರಾತ್ರಿ 9.50 ರಿಂದ ಸಂಚಾರಿ ಪೊಲೀಸ್ ಸಿಬ್ಬಂದಿ ಫ್ಲೈಓವರ್​​ಗಳನ್ನು ಬಂದ್ ಮಾಡಲಿದ್ದಾರೆ. ರಿಯಾಯಿತಿ ಇರುವ ವಾಹನ ಸಂಚಾರಕ್ಕೆ ಮಾತ್ರ ಅವಕಾಶವಿದ್ದು, ದ್ವಿಮುಖರಸ್ತೆಯಲ್ಲಿ ಒಂದು ಮಾರ್ಗ ಬಂದ್ ಮಾಡಲಾಗುತ್ತೆ’ ಎಂದರು.

ನಮ್ಮ ಸಿಸಿಟಿವಿ ವಿಡಿಯೋ ವಾಲ್​ ನಿರಂತರವಾಗಿ ಕಾರ್ಯನಿರ್ವಹಿಸುತ್ತೆ. ವಿಡಿಯೋ ವಾಲ್ ಆಧಾರದ ಮೇಲೆಯೂ ಸಹ ಕ್ರಮ ಕೈಗೊಳ್ಳುತ್ತೇವೆ. ಸಿಸಿಟಿವಿ ಆಧರಿಸಿ ಸಂಚರಿಸಿದ ವಾಹನಗಳ ಮೇಲೆ ಕ್ರಮ ವಹಿಸುತ್ತೇವೆ’ ಎಂದರು.

Leave a Reply

Your email address will not be published. Required fields are marked *