Friday, 9th December 2022

ಎಲ್ಲ ಇದ್ದೂ ಖದರಿಲ್ಲದ ರಾಜಧಾನಿ…

ಅಲೆಮಾರಿಯ ಡೈರಿ

mehandale100@gmail.com

ಉತ್ತರ ಕನ್ನಡ ಜಿಲ್ಲೆಯ ಕುಮಟೆ ಮತ್ತು ಹೊನ್ನಾವರ ಸೇರಿಸಿ ಮಧ್ಯದಲ್ಲಿ ಬಿಟ್ಟರೆ ಹೇಗಿರುತ್ತೋ ಹಾಗಿದೆ ಈ ಕಣಿವೆ ಸುಂದರಿ ಯರ ನಾಡು. ಯಾವ ದೊಡ್ಡ ಮಟ್ಟದ ಸುಧಾರಣೆಗೂ ಈಡಾಗದ, ಎಲ್ಲೂ ಸರಕಾರಿ ಕುಡಿಯುವ ನೀರು ಎನ್ನುವ ಸರಬ ರಾಜನ್ನೇ ಕಾಣದ ನೀರಿಗಿಂತಲೂ, ಹಾಲು ಅಗ್ಗವಾಗಿರುವ ಅದಕ್ಕಿಂತಲೂ ಸ್ಥಳೀಯ ವೈನ್ (ಖಾಸಗಿಯಾಗಿ) ಅಗ್ಗವಾಗಿರುವ ಈ ರಾಜಧಾನಿ ಇಷ್ಟವಾ ಗುವುದು ಎರಡು ಕಾರಣಗಳಿಗೆ.

ಮೊದಲನೆಯದು ಎಲ್ಲೂ ಚೆಂದದ ದಿರಿಸಿನ ಸುಂದರಿಯರ ನಗುಮೊಗದ ಸೇವೆಗೆ, ಬಹುಶಃ ಎಲ್ಲ ಸುಂದರಿಯನ್ನು ದೇವರು ಇ ಸೃಷ್ಟಿ ಮಾಡಿದನಾ? ಎರಡನೆಯದು ಎಲ್ಲೂ ಕಿರಿಕಿರಿ ಇಲ್ಲದ ಸರ್ವ ಸರಂಜಾಮು ಮತ್ತು ಸೇವೆಯ ಜನರ ಲಭ್ಯತೆ. ಕಾಲಿಟ್ಟಲ್ಲಿ ಕಥೆ ಹೇಳುವ ‘ನಂಬುಲಾ ಮತ್ತು ಇಂಫಾಲ’ ದ ನೀರಿನಂಚಿನಲ್ಲಿ ಇರುವ ನಗರದುದ್ದಕ್ಕೂ ಜನರ ಖುಷಿಯ ಜತೆಗೆ ನಿಸರ್ಗದ ಕೊಳಚೆಯೂ ಕಣ್ಣಿನೊಂದಿಗೆ ಮೂಗಿಗೂ ಢಾಳಾಗೇ ರಾಚುತ್ತದೆ. ಬಹುಶಃ ಸಾಲುಸಾಲು ನದಿ ಮತ್ತು ಕೊಳಚೆ ಒಟ್ಟಾಗಿ ಸಾಗುವ ರಾಜಧಾನಿ ಇದೊಂದೇ.

ಭಾರತದ ಈಶಾನ್ಯ ರಾಜ್ಯಗಳಲ್ಲಿ ಏಳನೆಯ ರಾಜ್ಯವಾಗಿರುವ ಮಿಥೀಸ್‌ಗಳ ಮಣಿಪುರ ಭಾರತದ ಹಾರದಲ್ಲಿನ ಪ್ರಮುಖ ಮಣಿಯೆಂದೆ ಪ್ರಸಿದ್ಧಿ. ಹಾಗಾಗೇ ೨೧ನೇ ಶತಮಾನದ ಪ್ರಮುಖ ಪ್ರವಾಸಿ ನಗರವಾಗಿ ಬೆಳೆಯುವ ನಿಟ್ಟಿನಲ್ಲಿ ದಾಪುಗಾಲಿಡು ತ್ತಿರುವ ಮಣಿಪುರ ಸದ್ಯಕ್ಕೆ ಕಣಿವೆಯ ನಗರಿ ಎಂದೂ ಖ್ಯಾತಿ. ಸುತ್ತಲೂ ಹಸಿರು ಮತ್ತು ನೀಲವರ್ಣದ ಪರ್ವತಾಗ್ರಗಳಿಂದ ಸುತ್ತುವರಿದಿರುವ ಮಣಿಪುರಕ್ಕೆ ಭಾರತದ ಸ್ವಿಟ್ಜರ್‌ಲೆಂಡ್ ಎನ್ನುವ ಖ್ಯಾತಿಯೂ ಇದೆ.

ಕಾರಣ ಎಂದಲ್ಲಿ ಹರಿವ ನದಿಗಳು, ಸುತ್ತುವರಿದಿರುವ ಪರ್ವತ ಶಿಖರಗಳು, ಜತೆಗೆ ಸರೋವರಗಳ ನಗರಿಯಾದ ಮಣಿಪುರಕ್ಕೆ
ಕಿರೀಟವಿಟ್ಟಂತೆ ಬುಡುಕಟ್ಟು ಜನಾಂಗದ ರಂಗು ರಂಗಿನ ರಮಣೀಯತೆ ಮತ್ತು ಸಂಸ್ಕೃತಿಯ ಕೊಡುಗೆ ನೀಡುತ್ತಿದೆ. ಸರಿ ಸುಮಾರು ೩೫೨ ಕಿ.ಮೀ. ಉದ್ದದ ಅಂತಾರಾಷ್ಟ್ರೀಯ ಸರಹದ್ದನ್ನು ಹೊಂದಿರುವ ಮಣಿಪುರ ಇತ್ತ ಬರ್ಮಾ, ಅತ್ತ ನಾಗಲ್ಯಾಂಡ್, ಅಸ್ಸಾಂ ಮತ್ತು ಮಿಜೋರಂಗಳ ಜತೆಗೆ ಗಡಿಯನ್ನು ಗುರುತಿಸಿಕೊಂಡಿದೆ. ಇದರಿಂದಾಗಿ ಎತ್ತ ಕಡೆಯಿಂದ ನಾನು ಬೆಳ್ಳಂಬೆಳಗ್ಗೆ ಪ್ರವಾಸ ಆರಂಭಿಸಿದರೂ ಮಧ್ಯಾಹ್ನದೊಳಗಾಗಿ ಯಾವುದಾದರೊಂದು ಪರ ರಾಜ್ಯಕ್ಕೋ, ಇಲ್ಲ ಪಕ್ಕದ ಅಂತಾರಾಷ್ಟ್ರೀಯ ಗಡಿಗೋ ಕಾಲಿಟ್ಟು ಬಿಡುತ್ತಿದ್ದೆ. ಮತ್ತೆ ಅಲ್ಲಿಂದ ಇನ್ನೊಂದು ದಿಕ್ಕಿಗೆ ಮುಖ ಮಾಡಿ ಚಲಿಸಲಾರಂಭಿಸುತ್ತಿz.

ಅದರಲ್ಲೂ ಬರ್ಮಾ ಗಡಿಯಂತೂ ಭಾರತ ಸ್ನೇಹಿ. ಹೆಚ್ಚಿನ ವ್ಯಾಪಾರಸ್ಥರು ಸಾಮಾನು ಸರಂಜಾಮು ತರುವುದೇ ಅಲ್ಲಿಂದ ಹಾಗಾಗಿ ಅಲ್ಲಂತೂ ಯಾವ ಗಡಿಯಲ್ಲಿದ್ದೇವೆ, ಯಾವ ದೇಶ ಎನ್ನುವುದೂ ಮರೆತು ಹೋಗುತ್ತದೆ. ಆಚೆಗೆ ನಿಂತು ಕೈಚಾಚಿ ಚಹದ ಕಪ್ಪನ್ನು ಪಡೆಯುವಷ್ಟು ಪಕ್ಕದಲ್ಲಿ ಬರ್ಮೀಯರ ಗೂಡಂಗಡಿಯ ಸಾಲುಗಳು ಇಲ್ಲಿವೆ. ಇಂಫಾಲ ಮಧ್ಯದ ಭಾಗ ಕಣಿವೆಯಾಗಿದ್ದರೆ ಅದನ್ನು ಪರ್ವತ ಪ್ರದೇಶಗಳು ಸುತ್ತುವರಿದಿದ್ದು ಒಟ್ಟಾರೆ ರಾಜ್ಯ ಪೂರ್ತಿ ಒಂದು ದೊಡ್ಡ ಗುಂಡಿಯಲ್ಲಿದ್ದಂತೆ ಭಾಸವಾಗುತ್ತದೆ.

ಎಲ್ಲ ಕಡೆಯಿಂದಲೂ ಪರ್ವತ ಪ್ರದೇಶದ ಇಳಿಜಾರಿನಲ್ಲಿ ಜಾರಿ ಬಂದು ಬೀಳುವ ಅನುಭವ ಮಣಿಪುರದ ಇಂಫಾಲಕ್ಕಿದೆ.
ಹಾಗಾಗಿ ನಾನು ಯಾವುದೇ ಕಡೆಯಲ್ಲಿ ಚಲಿಸಿದರೂ ಒಂದೋ ರಸ್ತೆಯಲ್ಲಿ ಮೇಲ್ಮುಖವಾಗಿ ಏರುತ್ತಿz ಇಲ್ಲ ಚಾರಣಿಗರಂತೆ ತಿರುವುಗಳನ್ನು ಸುತ್ತುತ್ತ ಕೆಳಕ್ಕೆ ಇಳಿಯುತ್ತಿz. ಒಟ್ಟಾರೆ ಇದ್ದಷ್ಟು ದಿನವೂ ನಾನು ಸ್ಥಳೀಯ ಗೈಡ್ ಮೊವ್ವಾನ್ ನನ್ನು ಕಟ್ಟಿಕೊಂಡು ಪರ್ವತದ ಸೆರಗಿನ ಕಾಲ ಸವೆಸುತ್ತಿದ್ದುದು ಗೊತ್ತಾಗುತ್ತಿತ್ತು. ಹೆಚ್ಚಿನಂಶ ನಮ್ಮ ಅಪ್ಪಟ ಮಲೆನಾಡಿನ ಪ್ರತಿಕೃತಿ. ಆದರೆ ಇಲ್ಲಿದ್ದ ದಟ್ಟತೆ ಮತ್ತು ಸ್ವಚ್ಛತೆ ಅಲ್ಲಿಲ್ಲ. ಅಷ್ಟೇ ವ್ಯತ್ಯಾಸ. ಮೂಲವಾಗಿ ಮಿಥೈಲ್‌ಪಾಕ್ ಅಥವಾ ಕಂಗೌಪಾಕ್ ಅಥವಾ ಮೈತ್ರಾಭಾಕ್ ಎಂದೆಲ್ಲ ಗುರುತಿಸಲ್ಪಟ್ಟಿರುವ ಮಿಥೀಸ್‌ಗಳ ನಾಡು ಭೌಗೊಳಿಕವಾಗಿ ಕಣಿವೆ ನಗರಿ.

ಅಸಲಿಗೆ ರಾಜ್ಯದ ತುಂಬೆಲ್ಲ ಎಲ್ಲ ಕಡೆಯಲ್ಲೂ ಟೊಮೇಟೊ ಗಲ್ಲದ ಚೆಂದ-ಚೆಂದದ ಹುಡುಗಿಯರು ದಿನಾಲು ಬೆಳಗ್ಗೆದ್ದು ಅಪ್ಪಟ ಮಣಿಪುರಿ ಶೈಲಿಯ ದಿರಿಸಿನಲ್ಲಿ ಶಾಲೆಗೆ ಹೋಗುವ ಕಾಲೇಜುಗಳಿಗೆ ವಾಹನ ಹಿಡಿಯುವ ದೃಶ್ಯ ಸರ್ವೇ ಸಾಮಾನ್ಯ. ಮೈತುಂಬಾ ಮರೂನ್ ರಂಗಿನ ಹುಡುಗಿಯರು ಪಿಳಿಪಿಳಿ ಕಣ್ಣು ಬಿಡುತ್ತಾ ಆರಕ್ಕೆದ್ದು ಶಾಲೆಯ ರಸ್ತೆಯಲ್ಲಿ ಕಾಣಸಿಗುವುದು ಮತ್ತು ಅಷ್ಟೆ ಬೆಳಗ್ಗೆ ದೂರದ ಅಥವಾ ಅಲ್ಲಿಂದಲೋ ಬರುವ ಟ್ಯಾಂಕರ್‌ಗಳಿಂದ ಸಾಲಾಗಿ ನಿಂತು ಕುಡಿಯುವ ನೀರನ್ನು ತುಂಬಿಸಿಕೊಳುವುದು ಬಹುಪಾಲು ಬೆಳಗ್ಗಿನ ಕಾಯಕವೇ.

ಪೂರ್ವ ಮ್ಯಾನ್ಮಾರ್ ಗಡಿ ಹೊರತು ಪಡಿಸಿ, ಇದರ ಸರಹದ್ದಿಗೆ ಬರುವ ಪ್ರಮುಖ ನಾಲ್ಕೈದು ಜಿಗಳನ್ನು ಪರ್ವತ
ಪ್ರದೇಶ ಎಂದು ಗುರುತಿಸಿದರೆ (ಸೇನಾಪತಿ, ತೆಮೆತ್ ಗ್ಲೊಂಗ್, ಚುರ್ಚಾಂಡ್ಪುರ್, ಚಾಂಡೆಲ್ ಮತ್ತು ಉಕ್ರೇಲ) ಉಳಿದ ನಾಲ್ಕು ಜಿಗಳು ಕಣಿವೆ ಜಿಗಳು. ಪೂರ್ವ ಇಂಫಾಲ, ಪಶ್ಚಿಮ ಇಂ-ಲ, ಥೌಬಾಲ್ ಮತ್ತು ವಿಷ್ಣು (ಬಿಷ್ನು)ಪುರ್ ಜಿಗಳಾಗಿದ್ದು ಮೂಲತಃ ಪರ್ವತ ಪ್ರದೇಶವೇ ಪೂರ್ತಿ ರಾಜ್ಯ ಆಕ್ರಮಿಸಿಬಿಟ್ಟಿದೆ. ತಮಾಷಿ ಎಂದರೆ ಇಂ-ಲದ ಇತ್ತಲಿನ ರಸ್ತೆ ಒಂದು ಜಿಯಲ್ಲಿದ್ದರೆ ಮುಗಿ ಯುವ ಇನ್ನೊಂದು ತುದಿ ಮತ್ತೊಂದು ಜಿಯಲ್ಲಿ ಕಾಲು ಚಾಚಿರುತ್ತದೆ.

ಇದೇ ವ್ಯಾಲಿಯಲ್ಲಿ ಹರಿಯುವ ಪ್ರಮುಖ ನದಿಯಾಗಿರುವ ಮಣಿಪುರ ನದಿ ಅಥವಾ ಇಂ-ಲ್ ನದಿ ಮತ್ತು ಇನ್ನೊಂದು ಪ್ರಮುಖ ನದಿಯಾದ ಬರಾಕ್ ನಗರದ ತುಂಬೆಲ್ಲ ಹಿಂದೆ ಮುಂದೆ ಹಿಂಬಾಲಿಸುತ್ತಲೇ ಇರುತ್ತದೆ. ಇಂ-ಲ್ ನದಿ ಉತ್ತರ ಕರೊಂಗ್‌ನಲ್ಲಿ ಜನಿಸಿ ದಕ್ಷಿಣ ಇಂ-ಲದತ್ತ ಹರಿಯುತ್ತದೆ. ಇದರೊಂದಿಗೆ ಕಣಿವೆಯ ಹಳ್ಳ ಕೊಳ್ಳಗಳನ್ನು ಸೇರಿಸಿಕೊಂಡು ಹರಿಯುವ ನದಿ. ಇವೆರಡೆ ಸಾಲದೆಂಬಂತೆ ನಗರದೊಳಕ್ಕೆ ಮತ್ತೆರಡು ನದಿಗಳು ನುಗ್ಗಿಬರುತ್ತವೆ. ಅವು ಇರಿಲ ಮತ್ತು ಥೌಬಾಲ ನದಿಗಳು ಹರಿಯುತ್ತ ಪೂರ್ತಿ ಮಣಿಪುರದಲ್ಲ ಬಿಳಿಲು ಬಿಟ್ಟಂತೆ ಚಲಿಸುತ್ತವೆ. ಇದರಿಂದ ಪ್ರಮುಖ ಭತ್ತದ ಬೆಳೆಗೆ ಕೊಡುಗೆಯನ್ನು ನೀಡುವ ಈ ನದಿಗಳು, ರಾಜ್ಯದ ಬಹುಪಾಲು ಕಣಿವೆಯಲ್ಲಿ ಹರಿದು ಹರಿದೇ ಬರಿದಾಗುತ್ತವೆ.

ದಕ್ಷಿಣ ಇಂ-ಲದ ಪ್ರಮುಖ ಭಾಗದಲ್ಲಿ ಹರಿಯುವ ನದಿಗಳು ಮತ್ತು ಇದರೊಂದಿಗೆ ಪಶ್ಚಿಮ ಇಂ-ಲದಲ್ಲಿ ಹರಿಯುವ ಖುಗಾ-ಮಣಿಪುರ ನದಿಯೊಂದಿಗೆ ಸೇರುವುದಲ್ಲದೆ ಇದರಲ್ಲಿನ ಪ್ರಮುಖ ಭಾಗವಾದ ಕೋರ್ಝೋನ್ ಎನ್ನುವ ಭಾಗದಿಂದಾಗಿ, ನದಿಯ ಸಹಜ ಹರಿವಿಗೆ ಯಾವುದೇ ಅಡತಡೆ ಇಲ್ಲದ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ಕೈಗೊಳ್ಳಲಾಗಿದ್ದು ಇದು ಇತರ ರಾಜ್ಯಗಳಿಗೂ ಮಾದರಿಯಾಗ ಬೇಕಿದೆ. ಆದರೆ ಕಾರ್ಯಗತವಾದ ಬಗ್ಗೆ ಕಂಡುಬರಲಿಲ್ಲ.

ತುಂಬಾ ಮುತುವರ್ಜಿಯಿಂದ ಇಲ್ಲಿನ ನದಿಯ ಭಾಗವನ್ನು ವಾಣಿಜ್ಯಾತ್ಮಕ ಉದ್ದೇಶದಿಂದ ದೂರವಿರಿಸಿ ರಕ್ಷಿಸಲು
ಪ್ರಯತ್ನಿಸುತ್ತಿದ್ದುದನ್ನು ಸ್ಪಷ್ಟವಾಗಿ ಗಮನಿಸಿದ್ದೇನಲ್ಲದೆ, ಎಲ್ಲೂ ನದಿಯ ತಿರುವನ್ನು ಅಸ್ವಾಭಾವಿಕವಾಗಿ ತಿರುಗಿಸಿದ್ದು
ನಾನು ಕಂಡಿಲ್ಲ. ಆದರೆ ನದಿಯ ಹೂಳು ಮತ್ತು ನಗರದ ಗಲೀಜು ಇತರೆ ಕೊಳೆ ಸೇರುವುದನ್ನು ಇವರು ಪ್ರತಿಬಂಽಸದೇ
ಇಲ್ಲಿಯವರೆಗೂ ಉಳಿದು ಬಿಟ್ಟಿರುವುದು ಸ್ಪಷ್ಟವಾಗೇ ಕಾಣಿಸುತ್ತಿದೆ.

ನದಿಯ ಎರಡೂ ಪಾತ್ರಗಳು ಊರು ಬಂತೆಂದರೆ ಕೊಳಚೆಯ ಅಡ್ಡೆಯಾಗಿರುವ ಅನಾಹುತಗಳನ್ನು ಇಂ-ಲ ಸೇರಿದಂತೆ ಚಾಂಡೆಲ, ಚುರ್ಚಾಂಡ್‌ಪುರ್ ಹಾಗೂ ಸೇನಾಪತಿಯ ಜಿಲೆಯಲ್ಲಿ ಸ್ಪಷ್ಟವಾಗೇ ಕಾಣಿಸುತ್ತದೆ. ಇದಕ್ಕೆ ಹೊರತಾಗಿ ಹೊರವಲಯದಲ್ಲಿ ಯಾವ ರೀತಿಯ ಮುತುವರ್ಜಿ ಇಲ್ಲದಿದ್ದರೂ ಊರಿನ ಮತ್ತು ಗ್ರಾಮೀಣ ಭಾಗದಲ್ಲಿ ನದಿಗಳ ಭಾಗಗಳು ಅಪ್ಪಟ ಕೊಳಚೆ ಮೋರಿಗಳೆ ಆಗಿರುವುದನ್ನು ಪ್ರತಿ ನದಿಯ ಭಾಗದಲ್ಲೂ ನಾನು ಗಮನಿಸಿದ್ದೇನೆ.

ಬಹುಶಃ ಈ ಕಾರಣದಿಂದಲೇ ಪ್ರತಿ ನದಿಯ ಇಂತಿಷ್ಟು ಭಾಗವನ್ನು ಕೋರ್ ಝೋನ್ ಎಂದು ಗುರುತಿಸುವ ಮತ್ತು ಅದನ್ನು ಸುರಕ್ಷತೆಯಿಂದ ಕಾಯುವ ಯೋಜನೆ ಜಾರಿಗೆ ಬಂದಿರಬಹುದು. ಇದರ ಸುತ್ತಲೂ ಆವರಿಸಿಕೊಂಡಿರುವ ಸುಮಾರು ೧೪
ಪರ್ವತ ಶಿಖರಗಳು ಈ ಕೆಲಸಕ್ಕೂ ಸಹಾಯಕಾರಿಯಾಗಿದ್ದು ನಿಸರ್ಗದತ್ತ ಕೊಡುಗೆಯನ್ನು ನೀಡುತ್ತಿವೆ. ಹೆಸರಿಸಲಾಗದ
ಸಣ್ಣಪುಟ್ಟ ಬೆಟ್ಟಗಳ ನಗರಿಯಾದ ಮಣಿಪುರವನ್ನು ಹೆಚ್ಚಿನಂಶ ಗುಡ್ಡಗಳು ಒತ್ತುವರಿ ಮಾಡಿಕೊಂಡಿದ್ದರಿಂದ ಕಣಿವೆಯ ಪ್ರದೇಶದ ಜಿಗಳಲ್ಲಿ ಜೀವಜಾಲ ಹೆಚ್ಚಿನ ಮತ್ತು ವ್ಯಾಪಕ ಬೆಳವಣಿಗೆ ಕಾಣಿಸುತ್ತಿದೆ. ಕಾರಣ ಪ್ರತಿಯೊಂದು ಪರ್ವತಾಗ್ರಹ ಗಳಿಂದ ಇಳಿದು ಜೀವನಾವಶ್ಯಗಳನ್ನು ಪೂರೈಸಿಕೊಳ್ಳುವ ಹಳೆಯ ತಲೆಮಾರಿನ ಮುಂದುವರಿಸುವಿಕೆ ಇತ್ತಿಚಿನ ಪೀಳಿಗೆಯಲ್ಲಿ ಕಾಣದಿರುವುದು ಪರ್ವತಗಳು ಕ್ರಮೇಣ ರಾಜ್ಯದ ಪ್ರಮುಖ ಪ್ರದೇಶಗಳಿಂದ ದೂರ ಸರಿಯುತ್ತಿವೆ.

ದಕ್ಷಿಣ ಮಣಿಪುರದ ನಡುಗಡ್ಡೆಯಂತಹ ಆಕರ್ಷಕ ತಾಣಗಳಾಗಿರುವ ಸೆಂಡ್ರಾ, ಇಥಿಂಗ್, ಕಂಗ್ರಾ ಮತ್ತು ಥಂಗಾಗಳು ನನ್ನ ಪ್ರವಾಸ ಸಹ್ಯ ಮಾಡಿದ ಪ್ರದೇಶಗಳು. ಇಲ್ಲಿನ ಸರೋವರಗಳು ಪ್ರಮುಖವಾಗಿ ಜನಾಕರ್ಷಣೆ ಮತ್ತು ಭೌಗೋಳಿಕವಾಗಿ ಲೆಕ್ಕಿಸಿದರೆ ಉತ್ತರ ಮತ್ತು ದಕ್ಷಿಣ ಹೊರತು ಪಡಿಸಿದರೆ ಕೇಂದ್ರ ಮಣಿಪುರದ ಸರೋವರಗಳಿಗೆ ಹೆಚ್ಚಿನ ಮುತುವರ್ಜಿ ವಹಿಸಿದ್ದು ಸ್ಪಷ್ಟ.

ಉತ್ತರ ಭಾಗ ನಂಬುಲಾ ನದಿಯನ್ನು ಸೇರಿಸಿದಂತೆ, ಪ್ರಮುಖವಾಗಿ ಮಣಿಪುರ್, ನಂಬೋಲಾ, ಥೊಂಗಜಾರೋಕ್ ಮತ್ತು ನಿಂಗೌಥ್ಕಾಂಗ್ ನದಿಗಳು ಈ ಸರೋವರಗಳಿಗೆ ನೀರುಣ್ಣಿಸುತ್ತಿವೆ. ಕೇಂದ್ರೀಯ ವಿಭಾಗದಲ್ಲಿ ಪಶ್ಚಿಮ ನೆಂಬೋಲಾ ನದಿಯ ಭಾಗ(ಇಲ್ಲಿ ನಂಬೋಲಾ ಮತ್ತು ನಂಬುಲಾ ಬೇರೆ ಬೇರೆ ನದಿಗಳು ನೆನಪಿರಲಿ) ಅವಾಂಗ್ ಲೈಸೋಯಿ ಮತ್ತು ಲ- ಭಾಗಗಳಲ್ಲಿ (ಖೋರ್ಡಾಕ್ ಕಾಲುವೆ ಮತ್ತು ಇಂ-ಲ ನದಿ ಮಧ್ಯ ಭಾಗ) ನದಿ ಬಳಸುವಿಕೆಯಿಂದ ಉಂಟಾದ ನಡುಗಡ್ಡೆಗಳಾದ ಥಂಗಾ, ಕರಂಗ ಮತ್ತು ಇಥಿಂಗ್ ಮೂಲಕ ಹರಿಯುವ ನದಿಯ ನೀರು, ಇಲ್ಲಿನ ಪ್ರಸಿದ್ಧ ಸರೋವರಗಳಿಗೆ ಮೂಲ ಸರಕು
ಎಂದರೂ ತಪ್ಪಿಲ್ಲ. ಈ ನೀರನ್ನು ಬಳಸಿಕೊಂಡು ಮತ್ತು ಕೆಳಭಾಗದತ್ತ ಹರಿಯುವ ಒಳ ಹರಿವಿನ ನೀರಿನ ಲಾಭ ಪಡೆಯುವ ಒಳನಾಡು ಸಾರಿಗೆ ನಡೆಸಲಾಗುತ್ತಿದ್ದು, ಇಲ್ಲ ಕೃತಕ ಪುಟ್ಟ ಪುಟ್ಟ ಸರೋವರಗಳನ್ನು ನಿರ್ಮಿಸಿದ್ದು ಅದನ್ನು ಮೀನುಗಾರಿಕೆಗಾಗಿ ಬಳಸಲಾಗುತ್ತಿದೆ.

ಇಷ್ಟೆಲ್ಲ ಎಲ್ಲೂ ನದಿ ಸರೋವರ ಎಂದೆಲ್ಲ ಇದ್ದರೂ ಇಂ-ಲ ಕೊಳೆ ಮುಕ್ತ ಅಥವಾ ಕೊಂಚವಾದರೂ ರಾಜಧಾನಿಯ ಖದರ್ರು
ತೋರಿಸುವ ನೆಲವಾಗಲೇ ಇಲ್ಲ ಎನ್ನಿಸುವಾಗ ಚುರ್ ಎನ್ನಿಸುತ್ತದೆ.