Thursday, 5th August 2021

ಕಂಟೈನರ್‌ಗೆ ಕಾರು ಡಿಕ್ಕಿ: ಅಬಕಾರಿ ಅಧಿಕಾರಿ ಸೇರಿದಂತೆ ಮೂವರ ಸಾವು

ಹಾಸನ: ಕಂಟೈನರ್‌ಗೆ ಹಿಂದಿನಿಂದ ಕಾರು ಡಿಕ್ಕಿಯಾದ ಪರಿಣಾಮ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಲು ತೆರಳುತ್ತಿದ್ದ ಅಬಕಾರಿ ಅಧಿಕಾರಿ ಸೇರಿದಂತೆ ಮೂವರು ಐಟಿ ಉದ್ಯೋಗಿಗಳು ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆ, ಚನ್ನರಾಯಪಟ್ಟಣದಲ್ಲಿ ಈ ಮನ ಕಲಕುವ ಘಟನೆ ಸಂಭವಿಸಿದೆ.

ಮಂಜುನಾಥ್, ಚೇತನ್, ವಿಕ್ರಂ, ಅಭಿಷೇಕ್ ಮೃತ ದುರ್ದೈವಿಗಳು. ನಾಲ್ವರು ಸ್ನೇಹಿತರಾಗಿದ್ದು ಒಂದೇ ಕಾರಿನಲ್ಲಿ ಬೆಂಗಳೂರು ಮಂಗಳೂರು ಹೆದ್ದಾರಿಯಲ್ಲಿ ಹಾಸನ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ, ಚನ್ನರಾಯಪಟ್ಟಣ ಸಮೀಪ ಕಂಟೈನರ್‌ಗೆ ಹಿಂಬದಿ ಯಿಂದ ಕಾರ್ ಡಿಕ್ಕಿಯಾದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಹಿನ್ನೆಲೆಯಲ್ಲಿ ಚನ್ನರಾಯಪಟ್ಟಣ ಸರ್ಕಾರಿ ಶವಾಗಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಭೇಟಿ ನೀಡಲಿದ್ದಾರೆ.

Leave a Reply

Your email address will not be published. Required fields are marked *