Tuesday, 29th September 2020

ಐಂದ್ರಿತಾ ರೇ, ನಟ ದಿಗಂತ್‍’ಗೆ ಸಿಸಿಬಿ ಶಾಕ್

ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ, ನಟಿ ಐಂದ್ರಿತಾ ರೇ, ನಟ ದಿಗಂತ್‍’ಗೆ ಸಿಸಿಬಿ ತನಿಖಾ ತಂಡ ನೋಟಿಸ್ ನೀಡಿದೆ.

ಬುಧವಾರ ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದೆ. ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರ ಸಿಸಿಬಿ ವಿಚಾರಣೆ ಸಂದರ್ಭ, ನಟಿ ಐಂದ್ರಿತಾ ರೇ ಅವರು, ಶ್ರೀಲಂಕಾಗೆ ತೆರಳುವ ಬಗ್ಗೆ ಮಾಹಿತಿ ನೀಡಿದ್ದಳು. ಇದರಲ್ಲಿ ಫಾಜಿಲ್ ಆಹ್ವಾನ ಬಗ್ಗೆ ಕೂಡ ತಿಳಿಸಿದ್ದಳು ಹಾಗೂ ಕೊಲಂಬೋದ ಬ್ಯಾಲಿಸ್ ಕ್ಯಾಸಿನೋಗೆ ನಾನೂ ಬರುತ್ತಾ ಇದೀನಿ ಎಂದು ಆಹ್ವಾನವನ್ನು ಸ್ವೀಕರಿಸಿದ್ದಳು.

ಕಳೆದೆರೆಡು ದಿನಗಳಿಂದ ನಟಿ ಐಂದ್ರಿತಾ ರೇ ಕ್ಯಾಸಿನೋಗೆ ಆಹ್ವಾನ ಮಾಡಿದ ವಿಡೀಯೋ ವೈರಲ್‌ ಆಗ್ತಿದ್ದು, ಸಧ್ಯ ದಂಪತಿಗಳಿಗೆ ಸಿಸಿಬಿ ನೋಟೀಸ್‌ ನೀಡಿದೆ.

ಲಂಕಾದಲ್ಲಿ ಕ್ಯಾಸಿನೊ ವ್ಯವಹಾರ ನಡೆಸುತ್ತಿದ್ದ ಫೈಜಲ್, ಚಿತ್ರನಟಿಯರಿಗೆ ಕ್ಯಾಸಿನೊ ಪಾರ್ಟಿಗಳಿಗೆ ಆಹ್ವಾನ ನೀಡುತ್ತಿದ್ದ. ಕ್ಯಾಸಿನೊ ಪಾರ್ಟಿಗೆ ಕನ್ನಡ ನಟಿ ಐಂದ್ರಿತಾ ರೇ ಅವರಿಗೆ ಆಹ್ವಾನ ನೀಡಿರುವ ವಿಡಿಯೊ ಲಭ್ಯವಾಗಿದ್ದು, ‘ಈದ್ ಆಚರಣೆಗೆ ಕೊಲಂಬೊದ ಕ್ಯಾಸಿನೊಗೆ ಬರುತ್ತಿದ್ದೇನೆ. ಇದಕ್ಕೆ ಆಹ್ವಾನ ನೀಡಿರುವ ಶೇಖ್ ಫೈಜಲ್ ಅವರಿಗೆ ಧನ್ಯವಾದಗಳು’ ಎಂದಿದ್ದಾರೆ.

Leave a Reply

Your email address will not be published. Required fields are marked *