Tuesday, 17th May 2022

ರಾಷ್ಟ್ರೀಯ ಪರಿಕಲ್ಪನೆ ದೇಶಕ್ಕೆ ಪಸರಿಸಿದವರು ವಿವೇಕರು

ವಿಶ್ವವಾಣಿ ಕ್ಲಬ್‌ಹೌಸ್‌ ಸಂವಾದ – 182

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಸ್ವಾಮಿ ವಿವೇಕಾನಂದರ ಅಧ್ಯಾತ್ಮಿಕ, ದೇಶಪ್ರೇಮದ ಕುರಿತು ಬೆಳಕು ಚೆಲ್ಲಿದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ

ಬೆಂಗಳೂರು: ನಮಗೆಲ್ಲರಿಗೂ ಇಂದು ಸ್ವಾತಂತ್ರ್ಯದ ಅನುಭವವಾಗುತ್ತಿದ್ದರೆ ಅದರ ಬಹುಪಾಲು ಶ್ರೇಯಸ್ಸು ಸ್ವಾಮಿ ವಿವೇಕಾನಂದರಿಗೆ ಸಲ್ಲಬೇಕು.
ಭಾರತಾದ್ಯಂತ ನೋವಿನಿಂದ ಜನರನ್ನು ಪಾರು ಮಾಡಬೇಕೆಂಬ ಸಂಕಲ್ಪ ಮಾಡಿ, ನನಗೆ ಮುಕ್ತಿ ಬೇಕಿಲ್ಲ, ಜಗತ್ತಿನ ಒಂದು ನಾಯಿ ಕೂಡ ಎಲ್ಲಿವರೆಗೆ
ಹಸಿವಿನಿಂದ ಇರತ್ತದೆಯೋ ಅಲ್ಲಿಯವರೆಗೂ ನಾನು ಮತ್ತೆ ಮತ್ತೆ ಹುಟ್ಟಿ ಬರಬೇಕು ಎಂದು ಇಚ್ಛೆ ಪಡುತ್ತೇನೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಅದು ಅವರ ಮಾನವ ಪ್ರೇಮದ ಅಪರೂ ಪದ ಉದಾಹರಣೆ. ಪಶ್ಚಿಮದಲ್ಲಿ ಇರುವ ಸಂಪತ್ತನ್ನು ಭಾರತಕ್ಕೆ ತಂದು ಭಾರತವನ್ನು ಅಭಿವೃದ್ಧಿಯ ಪಥಕ್ಕೆ ಕೊಂಡೊಯ್ಯುವ ಸಂಕಲ್ಪವನ್ನು ಅವರು ಮಾಡಿದ್ದರು. ಅಧ್ಯಾತ್ಮಕ್ಕಿಂತಲೂ ದೇಶಪ್ರೇಮ ಅವರಿಗೆ ಒಂದು ಕೈ ಹೆಚ್ಚಿತ್ತು ಎಂದರೆ ತಪ್ಪಾಗಲಾರದು.

ಬುಧವಾರ ವಿಶ್ವವಾಣಿ ಕ್ಲಬ್‌ಹೌಸ್‌ನ ’ಸ್ವಾಮಿ ವಿವೇಕಾನಂದ- ತರುಣ ಹೃದಯ ಸಾಮ್ರಾಟ’ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ವಿವೇಕಾನಂದರ ಜೀವನ, ಸಾಧನೆಗಳ ಕುರಿತು ವಿವರಿಸಿದ್ದು ಹೀಗೆ.

1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ರಾಷ್ಟ್ರೀಯತೆ ಸಂಪೂರ್ಣ ನಶಿಸಿ ಹೋಗಿದ್ದ ಕಾಲದಲ್ಲಿ, ಸ್ವಾಮಿ ವಿವೇಕಾನಂದರು ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಇಡೀ ದೇಶಕ್ಕೆ ಏಕಪ್ರಕಾರವಾಗಿ ಓತಪ್ರೋತವಾಗಿ ಹರಿಸಿದವರು ಎಂದು ತಿಯೋಸೋಫಿಸ್ಟ್ ಅನಿಬೆಸೆಂಟ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸು ತ್ತಾರೆ. ಬಿಳಿಯರು ನಮಗಿಂತ ಶ್ರೇಷ್ಠರಲ್ಲ, ನಾವು ಅವರಿಗಿಂತ ತುಚ್ಚರಲ್ಲ ಎಂಬ ಅಚಲವಾದ ನಂಬಿಕೆಯನ್ನು ಮೂಡಿಸಿದವರು ಸ್ವಾಮಿ ವಿವೇಕಾನಂದರು. ಅಲ್ಲದೆ, ಅದನ್ನು ಅವರ ನೆಲದಲ್ಲೇ ಸಾಬೀತುಪಡಿಸಿದ್ದಾರೆ.

ನೊಬೆಲ್ ಪುರಸ್ಕೃತ ನೋರೆಟ್ ನೊಮರುಲ್ಲ ಅವರು ಭಾರತದ ಬಗ್ಗೆ ತಿಳಿಯುವ ಪ್ರಯತ್ನದಲ್ಲಿದ್ದಾಗ, ನೀವು ಭಾರತವನ್ನು ಅರಿಯಬೇಕಾದರೆ ಸ್ವಾಮಿ ವಿವೇಕಾನಂದರನ್ನು ಓದಿ ಎಂದು ರವೀಂದ್ರನಾಥ್ ಠಾಗೂರ್ ಅವರು ಹೇಳಿದರಂತೆ. ಆ ವ್ಯಕ್ತಿಯಿಂದ ಕೇವಲ ಧನಾತ್ಮಕ ವಿಚಾರಗಳು ಮಾತ್ರ ಹೊರಹೊಮ್ಮಲು ಸಾಧ್ಯ ಎಂಬುದು ಅವರ ಅಭಿಪ್ರಾಯವಾಗಿತ್ತು. ಅವರನ್ನು ಅಧ್ಯಯನ ಮಾಡಿ ಪ್ರಭಾವಕ್ಕೊಳಗಾದ ನೊಮರುಲ್ಲ, ಸ್ವಾಮಿ ವಿವೇಕಾನಂದರ ಭಾಷಣ ಬೆಂಕಿಯ ಕೆನ್ನಾಲಿಗೆ ಇದ್ದಂತೆ ಎಂದು ಅಭಿಪ್ರಾಯಪಟ್ಟಿದ್ದರು. ಮೂರು ದಶಕಗಳ ನಂತರ ಅಧ್ಯಯನ ಮಾಡಿದ ನನಗೆ ಹೀಗೆ ಅನ್ನಿಸುವುದಾದರೆ ಅವರ ಭಾಷಣವನ್ನು ನೇರವಾಗಿ ಆಲಿಸಿದವರಿಗೆ ಯಾವ ಭಾವ ಮೂಡಿರುತ್ತದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವಿವೇಕಾನಂದರ ಮಾತಿನಲ್ಲಿದ್ದ ಆ ಪ್ರಕರತೆ ಮತ್ತು ಅಪರೂಪದ ಸಾಮರ್ಥ್ಯದ ಕಂಪನವನ್ನು ನಾವು ಇಂದಿಗೂ ಅನುಭವಿಸಬಹುದಾಗಿದೆ ಎಂದರು.

ಕಷ್ಟದಲ್ಲೇ ಬೆಳೆದಿದ್ದ ವಿವೇಕಾನಂದರು: ವಿವೇಕಾನಂದ ಜೀವನದಲ್ಲೂ ಹಲವು ಕಷ್ಟದ ಪ್ರಸಂಗಗಳು ಎದುರಾಗಿವೆ. ಸಿರಿವಂತಿಕೆಯ ಜೀವನದಲ್ಲಿದ್ದ ವಿವೇಕಾ ನಂದರಿಗೆ ಕಾಲೇಜು ಜೀವನದಲ್ಲಿ ಬ್ರಹ್ಮ ಸಮಾಜದ ನಂಟು, ಗುರುಗಳನ್ನು ಅರಸಿ ಶ್ರೀ ರಾಮಕೃಷ್ಣ ಪರಮಹಂಸರ ಭೇಟಿ, ಭೇಟಿಯ ನಂತರ ಅವರಲ್ಲಿ ಉದ್ದೀಪ್ತ ಗೊಂಡಂತಹ ಆಧ್ಯಾತ್ಮಿಕ ಭಾವನೆಗಳು ಅವರನ್ನು ನೆಮ್ಮದಿಯ ಕಡೆಗೆ ಕರೆದೊಯ್ಯುತ್ತಿತ್ತು. ಆನಂದದ ಬದುಕು ಸಾಗಿಸುತ್ತಿದ್ದರು. ತಮ್ಮ ತಂದೆ ಸಾವಿನ ನಂತರ ವಾಸವಿದ್ದ ಮನೆ ಮೇಲೆ ಮೊಕದ್ದಮೆ ದಾಖಲಾದವು.

ಚಿಕ್ಕ ವಯಸ್ಸಿನಲ್ಲೇ ಕೋರ್ಟ್‌ಗೆ ಅಲೆಯುವ ಮತ್ತು ತಮ್ಮ ಓದಿನ ಪ್ರಮಾಣಪತ್ರಗಳನ್ನು ಹಿಡಿದು ಕೆಲಸಕ್ಕಾಗಿ ಬೀದಿ ಬೀದಿ ತಿರುಗುವ ಸನ್ನಿವೇಶ ಎದುರಾಗುತ್ತದೆ.
ಈಶ್ವರಚಂದ್ರ ವಿದ್ಯಾಸಾಗರರ ಸಂಸ್ಥೆಯಲ್ಲಿ ಶಿಕ್ಷಕ ವೃತ್ತಿ ನಡೆಸುತ್ತಿದ್ದರು. ವಿದ್ಯಾಸಾಗರ ಅವರ ಅಳಿಯ ಇವರ ಬೆಳವಣಿಗೆಯನ್ನು ತಾಳಿಕೊಳ್ಳದ ಕಾರಣ ಸ್ವಾಮಿ ವಿವೇಕಾನಂದರು ಆ ಕೆಲಸ ಕಳೆದುಕೊಳ್ಳಬೇಕಾಯಿತು. ಸಂಸಾರವೋ ಅಥವಾ ಆಧ್ಯಾತ್ಮವೋ ಎಂಬ ದ್ವಂದ್ವ ಅವರ ಜೀವನದಲ್ಲೂ ಇತ್ತು. ಆದರೆ,
ರಾಮಕೃಷ್ಣ ಪರಮಹಂಸರ ಪಥವನ್ನೇ ಅನುಸರಿಸುವ ಅಚಲ ನಿರ್ಧಾರ ಅವರದಾಗಿತ್ತು. ನಾವು ಯಾವ ದಾರಿಯನ್ನು ಆರಿಸಿಕೊಳ್ಳುತ್ತೇವೋ ಅದರಿಂದ ನಮ್ಮ
ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತದೆ. ಜೀವನದ ದಾರಿಯನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ನಮ್ಮಲ್ಲೂ ಗೊಂದಲಗಳಿರಬಹುದು. ಆಗ ನಮಗೆ ಸ್ವಾಮಿ ವಿವೇಕಾನಂದರು ಮಾರ್ಗದರ್ಶನವಾಗಿ ನಿಲ್ಲುತ್ತಾರೆ ಎಂದು ಚಂಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.

ವಿವೇಕರ ಅನುಸರಿಸಿರೆ ಜೀವನ ಅದ್ಭುತ
ಬದುಕಿದ್ದಾಗ ಹಲವಾರು ಕಷ್ಟಗಳನ್ನು ಅನುಭವಿಸಿದ ಅವರನ್ನು ದೇಹತ್ಯಾಗ ಮಾಡಿದ ಮೇಲೂ ಕೆಲವರು, ಅವರಿಗೆ ರೋಗ ಗಳಿತ್ತಂತೆ, ಬಿ.ಎ. ಸೆಕೆಂಡ್
ಕ್ಲಾಸ್ ಅಷ್ಟೇ, ಸರಿಯಾಗಿ ಭಾಷೆ ಬರುವುದಿಲ್ಲ ಎಂದೆಲ್ಲ ಅಪಹಾಸ್ಯ ಮಾಡುತ್ತಾರೆ. ಹೌದು ಅವರಿಗೆ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ, 30ಕ್ಕೂ ಹೆಚ್ಚು ಕಾಯಿಲೆಗಳಿದ್ದವು. ದೇಹ ದುಖಃತಪ್ತ ಸ್ಥಿತಿಗೆ ತಲುಪಿತ್ತು. ಅವರನ್ನು ಅಪಹಾಸ್ಯ ಮಾಡುವವರು ಎಂದಿಗೂ ಮೂಲೆಗುಂಪಾಗಿಯೇ ಇರುತ್ತಾರೆ, ಅವರನ್ನು ಅನುಸರಿಸಿ ಜೀವನ ಮಾಡಿದವರು ಅದ್ಭುತ ಜೀವನವನ್ನು ಸಾಗಿಸುತ್ತಾರೆ. ನಾವು ಸ್ವಾಮಿ ವಿವೇಕಾನಂದರ ಒಂದು ಮುಖವನ್ನು ಮಾತ್ರ ನೋಡಿದ್ದೇವೆ. ಇನ್ನಷ್ಟು ಆಳವಾಗಿ, ಅವರ ಮತ್ತೊಂದು ಮುಖವಾದ ಅಂತರಂಗ ವೈಶಾಲ್ಯವನ್ನು ತಿಳಿಯುವ ಪ್ರಯತ್ನ ವಾಗಬೇಕಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

***

ಜನರನ್ನು ಯಾರು ಬಡತನದಲ್ಲಿ ಮತ್ತು ಅಜ್ಞಾನದಲ್ಲಿ ಇಡುತ್ತಾರೋ ನನ್ನ ಪ್ರಕಾರ ಅವರು ದೇಶದ್ರೋಹಿಗಳು ಎಂಬುದು ಸ್ವಾಮಿ ವಿವೇಕಾನಂದರ ಅಭಿಪ್ರಾಯ. ಆತ್ಮಾವಲೋಕನ ಮಾಡಿಕೊಳ್ಳುವುದು ದೊಡ್ಡ ಗುಣ. ಆ ಗುಣ ವಿವೇಕಾನಂದರಲ್ಲಿ ಇದ್ದ ಕಾರಣ ಅವರನ್ನು ನೊಬೆಲ್ ಸೋಲ್ ಎಂದು ಕರೆಯಬಹುದು.
– ಡಾ.ಎಂ.ಆರ್.ರವಿ, ಚಾಮರಾಜನಗರ ಡಿಸಿ 

ವಿವೇಕಾನಂದ ಜಯಂತಿಯಂದು, ವಿವೇಕಾನಂದರ ಚಿಂತನೆಗಳು ನಮ್ಮೆಲ್ಲರನ್ನು ಆವರಿಸಲಿ, ಆಧುನಿಕ ವಿವೇಕಾನಂದರ ಸಂತತಿ ಹೆಚ್ಚಾಗಲಿ.
– ವಚನಾನಂದ ಸ್ವಾಮಿಜಿ

ಸ್ವಾಮಿ ವಿವೇಕಾನಂದರ ವಿಚಾರಗಳು ಎಷ್ಟು ಆಮಿಶಕಾರಿ ಎಂದರೆ ಅವರ ಪುಣ್ಯಸ್ಮರಣೆಯ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ನಾನು, ಕ್ಲಬ್ ಹೌಸ್ ಆಹ್ವಾನ ತಿರಸ್ಕರಿಸಲು ಸಾಧ್ಯವಾಗಲಿಲ್ಲ. ಬರವಣಿಗೆಯ ಲೋಕದಲ್ಲಿ ಏನಾದರೂ ಸಾಧಿಸಿದ್ದರೆ ಅದಕ್ಕೆ ವಿಶ್ವೇಶ್ವರ ಭಟ್ಟರೇ ಕಾರಣ. ರಾಜೀವ್ ದೀಕ್ಷಿತ್ ಅವರ ಅಂಕಣವನ್ನು ಬರೆದು ಕೊಟ್ಟಾಗ ಬೆನ್ನು ತಟ್ಟಿ ಬರೆಯುವಂತೆ ಪ್ರೋತ್ಸಾಹಿಸಿ ಬೆಂಬಲಿಸಿದರು.
– ಚಕ್ರವರ್ತಿ ಸೂಲಿಬೆಲೆ

***

ಗಾಯನ, ಮೃದಂಗ, ಕುಸ್ತಿಪಟು ಹಾಗೂ ಸ್ವಾದಿಷ್ಟಕರವಾದ ಅಡುಗೆ ಸೇರಿದಂತೆ ಹಲವು ಹವ್ಯಾಸಗಳು ಸ್ವಾಮಿ ವಿವೇಕಾನಂದರಿಗೆ ಇದ್ದವು. ಅವರ ಗಾಯನವೇ ರಾಮಕೃಷ್ಣರ ಭೇಟಿಗೂ ಕಾರಣವಾಯಿತು. ಹಾಡಿ ನಿಂದ ರಾಮಕೃಷ್ಣರು ಪದೇ ಪದೆ ಭಾವ ಸಮಾಧಿಗೆ ಹೋದ ಉಲ್ಲೇಖಗಳಿವೆ.

ವಿವೇಕಾನಂದರ ಪ್ರಭಾವಕ್ಕೆ ಒಳಗಾದವರಲ್ಲಿ ಸುಭಾಷ್ ಚಂದ್ರ ಭೋಸ್ ಕೂಡ ಒಬ್ಬರು. ಅವರ ಸಹವಾಸ ಮಾಡಿದವರು ಪ್ರಕರವಾದ ರಾಷ್ಟ್ರೀಯತೆಗೆ ಒಳಗಾಗುತ್ತಾರೆ. ಇದೇ ಸ್ವಾಮಿ ವಿವೇಕಾನಂದರ ದೇಶಭಕ್ತಿ ವ್ಯಾಪ್ತಿ.

ಭಾರತದ ವೇದಾಂತ ಚಿಂತನೆಯನ್ನು ಪ್ರಪಂಚಕ್ಕೆ ಹಬ್ಬಿಸಿ, ಅಲ್ಲಿರುವ ಸಂಪತ್ತನ್ನು ಇಲ್ಲಿಗೆ ತರುವ ಸದುದ್ದೇಶ ಸ್ವಾಮಿ ವಿವೇಕಾನಂದರದ್ದಾಗಿತ್ತು.

ಕ್ರಾಂತಿಕಾರಿಗಳು ಮತ್ತು ಹೋರಾಟಗಾರರನ್ನು ಬಂಽಸಲು ಬ್ರಿಟಿಷರು ಹುಡುಕಾಟ ನಡೆಸುತ್ತಿದ್ದಾಗ ಅವರಿಗೆ ಆಶ್ರಯ ನೀಡುತ್ತಿದ್ದುದು ವಿವೇಕಾನಂದರು ಸ್ಥಾಪಿಸಿದ್ದ ರಾಮಕೃಷ್ಣ.