Wednesday, 28th July 2021

ವಿಸ್ಟ್ರಾನ್ ಕಂಪನಿಯಲ್ಲಿ ದಾಂಧಲೆ ಪ್ರಕರಣ: ಚಾರ್ಚ್ ಶೀಟ್ ಸಲ್ಲಿಕೆ

ಕೋಲಾರ : ಜಿಲ್ಲೆಯ ಪ್ರತಿಷ್ಠಿತ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ನೌಕರರ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 11 ಸಾವಿರ ಪುಟಗಳ ಚಾರ್ಚ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಈ ಕುರಿತಂತೆ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ವಿಸ್ಟ್ರಾನ್ ಕಂಪನಿ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿ ದ ಸಮಗ್ರ ತನಿಖೆ ನಡೆಸಿ, ಚಾರ್ಚ್ ಶೀಟ್ ಸಲ್ಲಿಸಲು ಇಬ್ಬರು ಎಎಸ್ಪಿ ಗಳು ತನಿಖೆ ನಡೆಸಿದ್ದಾರೆ.

ತನಿಖಾಧಿಕಾರಿಗಳಿಂದ ನ್ಯಾಯಾಲಯಕ್ಕೆ 11 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದರು.

ಪ್ರಕರಣಕ್ಕೆ ವೇತನ, ಓಟಿ ವೇತನ ಸೇರಿದಂತೆ ಹಾಜರಾತಿ ಸಿಸ್ಟಮ್ ಸಮಸ್ಯೆ ಇದ್ದ ಪರಿಣಾಮದಿಂದಾಗಿ ನಡೆಸಲಾದ ಗಲಾಟೆ ಎಂಬುದು ಹಾಗೂ ದಾಂಧಲೆಗೆ ಹೊರಗಡೆಯಿಂದ ಯಾವುದೇ ಕುಮ್ಮಕ್ಕು ಇಲ್ಲ ಎಂದು ತಿಳಿದು ಬಂದಿದೆ ಎಂದರು.

Leave a Reply

Your email address will not be published. Required fields are marked *