Tuesday, 27th September 2022

ಬಾಲ್ಯಸನ್ಯಾಸತ್ವ ನಿಷೇಧವಾಗಲಿ

ಅಭಿಪ್ರಾಯ

ಶ್ರೀ ವಿಶ್ವ ವಿಜಯ ತೀರ್ಥರು, ಪೇಜಾವರ ಪೀಠದ ಮಾಜಿ ಉತ್ತರಾಧಿಕಾರಿ

ಉಡುಪಿಯ ಪೇಜಾವರ ಮಠದ ಮಾಜಿ ಕಿರಿಯ ಪೀಠಾಧಿಪತಿ ಶ್ರೀ ವಿಶ್ವ ವಿಜಯರು ರಾಜ್ಯ ಉಚ್ಚ ನ್ಯಾಯಾಲಯವು ಬಾಲ ಸನ್ಯಾಸದ ಬಗ್ಗೆ ನೀಡಿರುವ ತೀರ್ಪಿನ ಬಗ್ಗೆ ಸಖೇದಾಶ್ಚರ್ಯ ಮತ್ತು ತೀವ್ರ ದಿಗ್ಭ್ರಮೆಯಾಗಿದೆ.

ಶಿರೂರು ಮಠಕ್ಕೆ ಇತ್ತೀಚೆಗೆ ಅಪ್ರಾಪ್ತ ವಯಸ್ಸಿನ ವಟುವನ್ನು ಪೀಠಾಧಿಪತಿಯಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಕೆಲವು ಮಾಧ್ವ ಸಮುದಾಯದ ಭಕ್ತರು ಉಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು, ಬುಧವಾರ ತೀರ್ಪು ಹೊರಬಿದ್ದಿದೆ. ಇಲ್ಲಿ ‘ಸನ್ಯಾಸ ಮತ್ತು ಪೀಠಾಧಿಪತ್ಯ’ ಎರಡು ಅಂಶಗಳಾಗಿದ್ದು, ಈವರೆಗೂ ಉಡುಪಿ ಅಷ್ಟ ಮಠಗಳಲ್ಲಿ ಒಬ್ಬರು ಹಿರಿಯರು, ಮತ್ತೊಬ್ಬರು ಕಿರಿಯ ಪಟ್ಟದ ಸ್ವಾಮಿಗಳು ಇರುತ್ತಿದ್ದರು. ಆಗ ಹಿರಿಯರು ಕಿರಿಯರಿಗೆ ಕಾವ್ಯ, ವ್ಯಾಕರಣ, ತರ್ಕ, ವೇದಾಂತದ ಅಧ್ಯಯನ ಮಾಡಿಸಿದ ನಂತರವೇ ಅವರಿಗೆ ಪ್ರಾಪ್ತ ವಯಸ್ಸಿನಲ್ಲಿ ಪೀಠಾಽಪತ್ಯ ಮತ್ತು ಪರ್ಯಾಯ ಪೂಜೆಯ ಅಽಕಾರವನ್ನು ವಹಿಸಿಕೊಡುವುದು ಸಂಪ್ರ ದಾಯವಾಗಿತ್ತು.

ಆದರೆ ವರ್ಷದ ಹಿಂದೆ ಶಿರೂರು ಮಠದ ಹಿರಿಯ ಸ್ವಾಮಿಗಳು ನಿಗೂಢ ರೀತಿಯಲ್ಲಿ ಗತಿಸಿದ್ದು, ದ್ವಂದ್ವ ಮಠ ಸೋದೆ ಮಠದ ಸ್ವಾಮಿಗಳು ಶಿರೂರು ಪೀಠಕ್ಕೆ ಅಪ್ರಾಪ್ತ ವಯಸ್ಸಿನ ವಟುವನ್ನು ಯಾವುದೇ ಶಾಸಾಧ್ಯಯ ನವಿಲ್ಲದೆ ನೇಮಿಸಿದ್ದು, ಆ ವಟುವಿನ ತಂದೆಯವರು ಮಠದ ಮೇಲುಸ್ತುವಾರಿ ಹೊರಲು ಮುಂದಾಗಿರುವುದು ಸರಿಯೇ? ಎನ್ನುವುದು ಮಾಧ್ವರನೇಕರ ಪ್ರಶ್ನೆಯಾಗಿದೆ. ಹಲವಾರು ಪೀಠಾಧಿಪತಿಗಳು ವಿದ್ಯಾಪೀಠಗಳನ್ನು ನಡೆಸುತ್ತಿದ್ದರೂ, ಪ್ರೌಢ ವಯಸ್ಸಿನ ಅರ್ಹತೆ ಇರುವ ವಟುಗಳಿದ್ದಾಗ್ಯೂ ಇವರ ನೇಮಕಾತಿ ಸಮರ್ಪಕ ಎನಿಸುವುದಿಲ್ಲ.

ಉಡುಪಿಯ ಅಷ್ಟ ಮಠಗಳಲ್ಲಿ ಈ ಹಿಂದೆ ಪಲಿಮಾರು, ಶಿರೂರು ಮಠದ ಸ್ವಾಮಿಗಳು ಮತ್ತು ಕೆಲವು ವರ್ಷದ ಹಿಂದೆ ಸುಬ್ರಹ್ಮಣ್ಯ ಮಠದ ಸ್ವಾಮಿಗಳು ಪೀಠತ್ಯಾಗ ಮಾಡಿ, ಸನ್ಯಾಸ ತೊರೆದಿರುವ ಘಟನೆಗಳನ್ನು ಮಾಧ್ವ ಸಮಾಜವು ಇನ್ನೂ ಮರೆತಿಲ್ಲ, ಈ ಮೊದಲು ಕೀರ್ತಿಶೇಷ ಶ್ರೀ ವಿದ್ಯಾಮಾನ್ಯ ತೀರ್ಥರು ಮತ್ತು ಅವರ ಶಿಷ್ಯರಾದ ಶ್ರೀ ವಿಶ್ವೇಶ ತೀರ್ಥರು ಈ ಬಗ್ಗೆ ತಮ್ಮ ಖಚಿತ ಅಭಿಪ್ರಾಯವನ್ನು ಪುಸ್ತಕ ರೂಪದಲ್ಲಿ ಲಿಖಿತಗೊಳಿಸಿ, ತಮ್ಮ ಪೀಠಕ್ಕೆ ಸುಶಿಕ್ಷಿತ ಪ್ರೌಢ ಉತ್ತರಾಧಿ ಕಾರಿಗಳನ್ನು ನೇಮಿಸಿದ್ದರು. ಆದರೆ ಈಗ ಈ ಪಿಡುಗು ಮತ್ತೆ ಪ್ರಾರಂಭವಾಗಿರುವುದು ಹಿತಕರವೇನೂ ಅಲ್ಲ, ಕೆಟ್ಟ ಸಂಪ್ರದಾಯವೂ ಆಗಿದೆ.

ಶಿರೂರು ಮಠದ ಈ ಹಿಂದಿನ ಪೀಠಾಽಪತಿ ಶ್ರೀ ಲಕ್ಷ್ಮೀವರ ತೀರ್ಥರು ತಾವು ಬಾಲ ಸನ್ಯಾಸದ ಕಾರಣ ಅನೇಕ ತೊಂದರೆಗಳನ್ನು ಅನುಭವಿಸಿದ್ದು, ತಾನು ಪ್ರೌಢ ವಯಸ್ಸಿಗೆ ಬಂದಾಗ ಹಲವು ಅನೈತಿಕ ವ್ಯವಹಾರಗಳು ಸಂಭವಿಸಿದ್ದು, ಎಂದು ತಮ್ಮ ತಪ್ಪುಗಳನ್ನು ಒಪ್ಪಿಕೊಂಡಿರುವುದೇ ಅಲ್ಲದೆ, ಇತರರ ಮೇಲೆ ಆರೋಪ ಗಳನ್ನೂ ಮಾಡಿರುವುದು, ಇದರಲ್ಲಿ ಕೆಲವನ್ನು ಶ್ರೀ ವಿಶ್ವೇಶ ತೀರ್ಥರು ಅಂಗೀಕರಿಸಿದ್ದು ಟಿವಿ ಮಾಧ್ಯಮದಲ್ಲಿ ವರದಿಯಾಗಿದೆ. ಆಗ ಇನ್ನು ಮುಂದೆ ಅಷ್ಟ ಮಠದ ಪೀಠಕ್ಕೆ ಅಪ್ರಾಪ್ತ ವಯಸ್ಕರನ್ನು ನೇಮಿಸುವುದು ಉಚಿತವಲ್ಲ ಎಂದು ಸೋದೆ ಸ್ವಾಮಿಗಳೂ ಸೇರಿದಂತೆ ಎಲ್ಲ ಸ್ವಾಮಿಗಳೂ ಒಪ್ಪಿದ್ದರೂ ಈಗ ಅದಕ್ಕೆ ವಿರುದ್ಧ ವಾಗಿ ನಡೆದುಕೊಂಡಿರುವುದು ಸ್ವಾರ್ಥ ಮತ್ತು ಹಿರಿಯರ ಮಾತನ್ನು ಧಿಕ್ಕರಿಸಿರುವುದು ಎಷ್ಟರ ಮಟ್ಟಿಗೆ ಶೋಭಾಯಮಾನವಾಗುತ್ತದೆ ಎಂದು ಅವರು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿzರೆ. ಈ ತೀರ್ಪನ್ನು ವಕೀಲರ ಜತೆಯಲ್ಲಿ ಚರ್ಚಿಸಿ, ಮುಂದಿನ ಕ್ರಮದ ಬಗ್ಗೆ ಸಂಬಂಧ ಪಟ್ಟವರಿಗೆ ಮಾರ್ಗದರ್ಶನ ಮಾಡುತ್ತೇವೆ.

ನಮ್ಮ ಸಾಮಾಜಿಕ ಪಿಡುಗುಗಳಾದ ಬಾಲ್ಯ ವಿವಾಹ, ತ್ರಿವಳಿ ತಲಾಖ್ ಮೊದಲಾದವುಗಳ ವಿರುದ್ಧ ಈ ಮೊದಲು ಕಾನೂನಾತ್ಮಕ ನೈತಿಕ, ಸಾಮಾಜಿಕ ಹೋರಾಟ ನಡೆದಂತೆ, ಸರಕಾರವನ್ನು ಸೂಕ್ತ ಕಾನೂನು ಜಾರಿಗೊಳಿಸುವಂತೆ ಈಗಿನ ಹೋರಾಟವು ಮುಂದುವರೆಯಲಿದೆ. ಬಾಲ ಸನ್ಯಾಸಕ್ಕೆ ಸಂಬಂಧಿಸಿ ದಂತೆ ಮುಂದಿನ ದಿನದಲ್ಲಿ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದು ಮನವಿ ಮಾಡುತ್ತಾನೆ. ಸಮಾಜದ ಮೇಲೆ ದುಷ್ಪರಿಣಾಮ ಬೀರುವ ಇಂತಹ ಬಾಲಸನ್ಯಾಸವನ್ನು ನಿಷೇಽಸಬೇಕು.