Saturday, 14th December 2024

ಸುದೀರ್ಘ ದಾಂಪತ್ಯಕ್ಕೆ ಕೊನೆ ಹಾಡಿದ ಆಮೀರ್​ ಖಾನ್​ -ಕಿರಣ್​ ರಾವ್​​

ಮುಂಬೈ: ಬಾಲಿವುಡ್​ ನಟ ಆಮೀರ್​ ಖಾನ್​ ಹಾಗೂ ಅವರ ಪತ್ನಿ ಕಿರಣ್​ ರಾವ್​​ ಸುದೀರ್ಘ ದಾಂಪತ್ಯವನ್ನ ಕೊನೆಗೊಳಿಸಿದ್ದಾರೆ. ಜಂಟಿ ಹೇಳಿಕೆಯ ಮೂಲಕ ಈ ದಂಪತಿ ಶನಿವಾರ ತಮ್ಮ ವಿವಾಹ ವಿಚ್ಛೇದನದ ವಿಚಾರವನ್ನ ಬಹಿರಂಗಪಡಿಸಿದೆ.

ನಮ್ಮ ಸಂಬಂಧವು ನಂಬಿಕೆ, ಗೌರವ ಹಾಗೂ ಪ್ರೀತಿಯ ನೆಲೆಗಟ್ಟಿನಲ್ಲಿ ಬೆಳೆದಿದೆ. ಆದರೆ ಇದೀಗ ನಾವು ನಮ್ಮ ಜೀವನದ ಹೊಸ ಅಧ್ಯಾಯವನ್ನ ತೆರೆಯಲು ಹೊರಟಿದ್ದೇವೆ. ನಾವು ಇನ್ಮೇಲೆ ಪತಿ – ಪತ್ನಿಯಲ್ಲ. ಆದರೆ ಪೋಷಕರಾಗಿ ಮುಂದುವರಿಯುತ್ತೇವೆ ಎಂದು ಹೇಳಿದ್ದಾರೆ.

ನಾವು ಇನ್ಮೇಲೆ ಪ್ರತ್ಯೇಕವಾಗಿ ವಾಸಿಸಲಿದ್ದೇವೆ. ಆದರೆ ನಮ್ಮ ಪುತ್ರ ಆಜಾದ್​ಗೆ ಪೋಷಕರಾಗಿ ಇರುತ್ತೇವೆ. ಅಲ್ಲದೇ ಸಿನಿಮಾ ಸೇರಿದಂತೆ ವಿವಿಧ ಪ್ರಾಜೆಕ್ಟ್​ಗಳಲ್ಲಿ ಜೊತೆಯಾಗಿ ಕೆಲಸ ಮಾಡಲಿದ್ದೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಿಮ್ಮೆಲ್ಲರ ಹಾರೈಕೆ ಹಾಗೂ ಆರ್ಶೀವಾದ ನಮ್ಮ ಮೇಲೆ ಸದಾ ಇರಲಿ. ಈ ವಿಚ್ಚೇದನವು ಯಾವುದರ ಅಂತ್ಯವಲ್ಲ ಆದರೆ ಹೊಸ ಪ್ರಯಾಣದ ಮುನ್ನುಡಿಯಾಗಿದೆ ಎಂದು ಬರೆಯಲಾಗಿದೆ.