Thursday, 12th September 2024

ನಟಿ ಶ್ರೀದೇವಿಯವರ 61ನೇ ಜನ್ಮದಿನ ಸ್ಮರಣೆ ಇಂದು

ಮುಂಬೈ: ಮಿಳು, ತೆಲುಗು, ಹಿಂದಿ, ಚಿತ್ರರಂಗದಲ್ಲಿ ಚಾಪು ಮೂಡಿಸಿದ್ದ ನಟಿ ಶ್ರೀದೇವಿಯವರ 61ನೇ ಜನ್ಮದಿನವಾಗಿದ್ದು, ಹಲವಾರು ನಟ ನಟಿಯರು ಸಾಮಾಜಿಕ ಜಾಲತಾಣದಲ್ಲಿ ಶ್ರೀದೇವಿ ಫೋಟೋ ಹಂಚಿಕೊಳ್ಳುವ ಮೂಲಕ ಸ್ಮರಿಸಿದ್ದಾರೆ.

1967 ರಲ್ಲಿ ತೆರೆಕಂಡ ತಮಿಳಿನ ‘ ಕಂದನ್ ಕರುನೈ’ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಅಭಿನಯಿಸುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದರು.

ಬಳಿಕ ಹಲವಾರು ಭಾಷೆಗಳಲ್ಲಿ ಬಾಲ ನಟಿಯಾಗಿ ಮಿಂಚಿದರು. ಕನ್ನಡದಲ್ಲಿ 1974ರಂದು ‘ಭಕ್ತ ಕುಂಬಾರ’ ದಲ್ಲಿ ಮುಕ್ತಾಬಾಯಿ ಪಾತ್ರದಲ್ಲಿ ಕಾಣಿಸಿ ಕೊಂಡರು. ಕನ್ನಡದಲ್ಲಿ ಕೇವಲ ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿದ್ದರು.

1976ರಂದು ತಮಿಳಿನ ‘ಮೂಂಡ್ರು ಮುಡಿಚು’ ಚಿತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡರು. ಬಳಿಕ ‘ಗಾಯತ್ರಿ’ ‘ಪದಹಾರೆಲ್ಲ ವಯಸು’ ‘ಸದ್ಮಾ’ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ತಮಿಳು ತೆಲುಗು, ಮಲಯಾಳಂ, ಹಾಗೂ ಹಿಂದಿ ಚಿತ್ರರಂಗದ ಬೇಡಿಕೆಯ ನಟಿಯಾದರು.

ನಟಿ ಶ್ರೀದೇವಿ 2018 ಫೆಬ್ರವರಿ 23 ರಂದು ನಿಧನರಾದರು. ಇವರ ಕೊನೆಯ ಸಿನಿಮಾ ಶಾರುಖ್ ಖಾನ್ ನಟನೆಯ ‘ಜೀರೋ’ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಯಿತು.

Leave a Reply

Your email address will not be published. Required fields are marked *