Saturday, 14th December 2024

ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ 777 ಚಾರ್ಲಿ ಚಿತ್ರ ಪ್ರದರ್ಶನ

ನವದೆಹಲಿ: ಸ್ಯಾಂಡಲ್‌ ವುಡ್ ನಟ ಕ್ಷಿತ್ ಶೆಟ್ಟಿ ನಟಿಸಿರುವ 777 ಚಾರ್ಲಿ ಚಿತ್ರವು ದೆಹಲಿ ಯಲ್ಲಿ 13ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಅಧಿಕೃತ ವಾಗಿ ಆಯ್ಕೆಯಾಗಿದೆ.
ಜೂನ್ 10ಕ್ಕೆ ಕಿರಣ್ರಾಜ್ ನಿರ್ದೇಶನದ 777 ಚಾರ್ಲಿ ಸಿನಿಮಾ ಬಿಡುಗಡೆಯಾಗಿ ವರ್ಷವಾಗ ಲಿದೆ. ಚಿತ್ರತಂಡ ವಾರ್ಷಿಕೋತ್ಸವ ವನ್ನು ಆಚರಿಸಲು ಸಿದ್ಧವಾಗಿದೆ. ರಕ್ಷಿತ್ ಶೆಟ್ಟಿ ನಟಿಸಿರುವ ಚಿತ್ರವು ದೆಹಲಿಯಲ್ಲಿ 13ನೇ ದಾದಾ ಸಾಹೇಬ್ ಫಾಲ್ಕೆ ಚಲನ ಚಿತ್ರೋತ್ಸವ ದಲ್ಲಿ ಪ್ರದರ್ಶನಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ. ಇದರ ಜೊತೆಗೆ, ಚಾರ್ಲಿ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ಕಿರಣ್ರಾಜ್ ಅವರು ಚಿತ್ರೋ ತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಸ್ವೀಕರಿಸಲು ಸಜ್ಜಾಗಿದ್ದಾರೆ.
ಕುತೂಹಲಕಾರಿಯಾಗಿ, 777 ಚಾರ್ಲಿ ಸಿನಿಮಾ ಈಗಲೂ ಬೇಡಿಕೆಯಲ್ಲಿದೆ ಮತ್ತು ಚಿತ್ರದ ಜಪಾನೀಸ್ ಆವೃತ್ತಿಯು ಜೂನ್ ಮತ್ತು ಆಗಸ್ಟ್ ನಡುವೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಶೀಘ್ರದಲ್ಲೇ ಲ್ಯಾಟಿನ್ ಅಮೆರಿಕ ಮತ್ತು ತೈವಾನ್ನಲ್ಲಿ ಚಿತ್ರ ಬಿಡುಗಡೆ ಯಾಗಲಿದೆ ಎಂದು ಕಿರಣ್ರಾಜ್ ಬಹಿರಂಗಪಡಿಸಿದ್ದಾರೆ.
ಚಿತ್ರದಲ್ಲಿ ನಟಿ ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ, ಶಾರ್ವರಿ ಮತ್ತು ಬಾಬಿ ಸಿಂಹ ನಟಿಸಿದ್ದಾರೆ. ಚಿತ್ರಕ್ಕೆ ನೋಬಿನ್ ಪಾಲ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿದೆ.